ಒಬ್ಬರು ಆಕ್ಸಿಜನ್, ಇನ್ನೊಬ್ಬರು ಲಸಿಕೆ ತರುವುದಕ್ಕೆ ಮತ್ತೊಬ್ಬರೂ ಬೆಡ್ ಹಂಚುವುದಕ್ಕೆ ಸಚಿವರಾಗಿದ್ದಾರೆ: ಪ್ರಿಯಾಂಕ ಖರ್ಗೆ

ಬೆಂಗಳೂರು: ರೆಮಿಡಿಸಿವಿರ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದು,ಕರ್ನಾಟಕದವರೇ ಅಲ್ಲಿ ರಾಸಾಯನಿಕ ಸಚಿವರಾಗಿದ್ದರೂ ರಾಜ್ಯಕ್ಕೆ ರೆಮಿಡಿಸಿವಿರ್ ಕೊಡಲು ಅವರಿಂದಾನೇ ಸಾಧ್ಯವಾಗುತ್ತಿಲ್ಲ. ಬಿಜೆಪಿ ಶಾಸಕರೇ ಬ್ಲಾಕ್ ಮಾರ್ಕೆಟ್ ನಲ್ಲಿ ರೆಮಿಡಿಸಿವಿಯರ್ ಖರೀದಿ ಮಾಡಿ ಅದನ್ನು ಹಂಚಿದ್ದಾರೆ. ಆದರೆ ಯಾವ ಶಾಸಕರು ಎಂದು ಸದ್ಯಕ್ಕೆ ಬಹಿರಂಗ ಪಡಿಸುವುದಿಲ್ಲ ಎಂದು ಮಾಜಿ ಸಚಿವ ಕೃಷ್ಣಭೈರೇಗೌಡ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೃಷ್ಣಬೈರೇಗೌಡ, ರಾಜ್ಯಕ್ಕೆ ಐದು ಸಾವಿರ ಕೋಟಿಗೆ ಹಣಕಾಸು ಆಯೋಗವೇ ಶಿಫಾರಸು ಮಾಡಿತ್ತು.ಆದರೆ ನಿರ್ಮಲಾ ಸೀತಾರಾಮನ್ ಅದನ್ನು ತಡೆದಿದ್ದಾರೆ. ಶಿಫಾರಸನ್ನು ವಾಪಸ್ ಪಡೆಯಿರಿ ಎಂದು ಕಳಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಆಯೋಗಕ್ಕೆ ಕಳಿಸಿದ್ದಾರೆ.ನಿರ್ಮಲಾ ಸೀತಾರಾಮನ್ ನಮ್ಮ ರಾಜ್ಯ ದಿಂದಲೇ ಆಯ್ಕೆಯಾಗಿ ಹೋದವರು ಆದರೂ ನಿರಂತರವಾಗಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಡಬಲ್ ಎಂಜಿನ್ ಸರ್ಕಾರಗಳು ವಿಫಲವಾಗಿದೆ.ಬ್ರೋಕನ್ ಎಂಜಿನ್ ಮಧ್ಯೆ ನಾವು ಸಿಲುಕಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಆಕ್ಸಿಜನ್ ‌ಕೊರತೆಯಿದೆ.ಆದರೂ ಇದರ ಬಗ್ಗೆ ಸಂಸದರು ಮಾತನಾಡಲಿಲ್ಲ. ಇದರ ಬಗ್ಗೆ ಹೈಕೋರ್ಟ್ ‌ಕೂಡ ಹೇಳಿತ್ತು. ಕೋರ್ಟ್ ವಿರುದ್ಧ ಸುಪ್ರೀಂ ಕೋರ್ಟ್ ಗೆ ಕೇಂದ್ರ ಮೇಲ್ಮನವಿ ಸಲ್ಲಿಸಿದರೂ ಕೂಡ ಸಂಸದರು ‌ಮಾತನಾಡಲಿಲ್ಲ.ಆದರೆ ಕೋರ್ಟ್ ಗಳು‌ ರಾಜ್ಯಕ್ಕೆ ನ್ಯಾಯ ಕೊಡಿಸಿವೆ.ನಮ್ಮ ಆಕ್ಸಿಜನ್ ಬೇರೆ ರಾಜ್ಯಕ್ಕೆ ಕೊಡುತ್ತಾ ಇದ್ದಾರೆ. ನಮ್ಮದು ನಮಗೆ ಬಳಸಿಕೊಳ್ಳಲು ಬಿಡುತ್ತಿಲ್ಲ

ಕೋರ್ಟ್ ಕೊಡಿಸಿದ ಆಕ್ಸಿಜನ್ ಅನ್ನು ‌ಮೋದಿ ಕೊಟ್ಟಿದ್ದು ಎನ್ನುತ್ತಾರೆ. ಆಕ್ಸಿಜನ್‌ಗೆ ಸಂಸದರು ಮೋದಿ ಫೋಟೋ ಹಾಕುತ್ತಿದ್ದಾರೆ. ಕರ್ನಾಟಕ ರಾಜ್ಯದ ಪರವಾಗಿ ತೀರ್ಪು ನೀಡಿರುವ ನ್ಯಾಯಾಧೀಶರ ಬದಲಾವಣೆಗೆ ಸುದ್ದಿ ಇದೆ. ಇದು ಗಾಳಿ ಸುದ್ದಿಯೋ ನಿಜ ಸುದ್ದಿಯೋ ಗೊತ್ತಿಲ್ಲ ಎಂದು ಮಾರ್ಮಿಕವಾಗಿ ನುಡಿದರು. ಕೇಂದ್ರ ಸರ್ಕಾರಕ್ಕೆ 150 ಕ್ಕೆ‌ ಲಸಿಕೆ ಸಿಗುತ್ತಾಯಿದೆ. ಅದನ್ನೇ ರಾಜ್ಯಕ್ಕೆ 350ಕ್ಕೆ ಕೊಡುತ್ತಾ ಇದ್ದಾರೆ. ಇದಕ್ಕೆ ಕೇಂದ್ರ ಅನುದಾನ ಕೂಡ ಕೊಡುತ್ತಾ ಇಲ್ಲ. ಎಲ್ಲದರಲ್ಲಿಯೂ ಕೇಂದ್ರ ರಾಜ್ಯಕ್ಕೆ ಅನ್ಯಾಯ ಮಾಡುತ್ತಾ ಇದೆ.

ರೆಮಿಡಿಸಿವಿಯರ್ ಔಷಧ ನಮಗೆ ಕೊಡುತ್ತಾ ಇಲ್ಲ. ಕೇಂದ್ರದಲ್ಲಿ ನಮ್ಮದೆ ಸಚಿವರಿದ್ದಾರೆ.ಅವರು ರೆಮಿಡಿಸಿವಿಯರ್ ಬಗ್ಗೆ ಚಕಾರ ಎತ್ತಿಲ್ಲ. ಕಾಳ ಸಂತೆಯಲ್ಲಿ ರೆಮಿಡಿಸಿವಿಯರ್ ‌ಮಾರಟವಾಯಿತು. ಬಿಜೆಪಿ ಶಾಸಕರೇ ರೆಮಿಡಿಸಿವಿಯರ್ ಕಾಳ ಸಂತೆಯಲ್ಲಿ ಕೊಂಡುಕೊಂಡಿದ್ದಾರೆ. ಇಂತಹ ಪರಿಸ್ಥಿತಿ ಬಂದಿದೆ ಡಬಲ್ ಇಂಜಿನ್‌ ಸರ್ಕಾರಕ್ಕೆ ಎಂದು ಕೃಷ್ಣಬೈರೇಗೌಡ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಮಾಜಿ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ,ನಾವು ಯಾರನ್ನು ಪ್ರಶ್ನೆ ಮಾಡಬೇಕು ಗೊತ್ತಾಗುತ್ತಿಲ್ಲ.ಕೇಂದ್ರದಲ್ಲಿ ಚೌಪಟ್ ರಾಜ ಮೋದಿಯಾದರೆ, ರಾಜ್ಯದಲ್ಲಿ ಚೌಪಟ್ ರಾಜ ಯಡಿಯೂರಪ್ಪ.ಈಗ ಎಲ್ಲರೂ ಕೋವಿಡ್ ಸಚಿವರೇ ಇದ್ದಾರೆ. ಒಬ್ಬರು ಆಕ್ಸಿಜನ್, ಇನ್ನೊಬ್ಬರು ಲಸಿಕೆ ತರುವುದಕ್ಕೆ ಮತ್ತೊಬ್ಬರೂ ಬೆಡ್ ಹಂಚುವುದಕ್ಕೆ ಸಚಿವರಾಗಿದ್ದಾರೆ. ಈಗ ಯಾರನ್ನು ಕೇಳಬೇಕು ಎನ್ನುವುದೇ ಅರ್ಥ ಆಗುತ್ತಿಲ್ಲ. ಕೇಂದ್ರ ಸರ್ಕಾರ ಎಲ್ಲಾ ಸೌಲಭ್ಯ ಕೊಟ್ಟಿದ್ದೇವೆ ಅನ್ನುತ್ತದೆ. ಆದರೆ ರಾಜ್ಯದವರು ಕೇಳಿದರೆ ಏನೂ ಬಂದಿಲ್ಲ ಎನ್ನುತ್ತದೆ. ಲಕ್ಷಾಂತರ ಮತಗಳಿಂದ ಸಂಸದರು ಗೆದ್ದು ಹೋಗಿದ್ದಾರೆ‌. ಡಬಲ್ ಎಂಜಿನ್ ಸರ್ಕಾರ ಎಂದು ಹೇಳ್ತಿದ್ದರು.

ಈಗ ಅಲ್ಲಿಗೆ ಹೋಗಿ ಧ್ವನಿಯನ್ನೇ ಕಳೆದುಕೊಂಡಿದ್ದಾರೆ‌ಪಿಎಂ ಕೇರ್ ಗೆ ಎಷ್ಟು ಹಣ ಬಂದಿದೆ ಗೊತ್ತಿಲ್ಲ. ಆರ್ ಟಿಐ ಮಾಹಿತಿ ಕೇಳಿದರೆ ಕೊಡಲು ಆಗಲ್ಲ ಅನ್ನುತ್ತದೆ. ಎಂಪಿಗಳ ಅನುದಾನವನ್ನೂ ಕಸಿದುಕೊಂಡಿದ್ದಾರೆ.ಇದನ್ನೂ ಕೇಳಲು ನಮ್ಮ ಸಂಸದರಿಗೆ ಆಗುತ್ತಿಲ್ಲ. 35 ಸಾವಿರ ಕೋಟಿ ಹೆಲ್ತ್ ಬಜೆಟ್ ಗಿಟ್ಟಿದ್ದಾರೆ.35 ಸಾವಿರ ಕೋಟಿ ಲಸಿಕೆಗೆ ಎನ್ನುವ ಅಭಿಯಾನ ಮಾಡುತ್ತಾರೆ. ಆದರೆ ರಾಜ್ಯಕ್ಕೆ ಎಷ್ಟು ಲಸಿಕೆ ಖರೀದಿ ಮಾಡಿದ್ದಾರೆ ಎಂದು ಲೆಕ್ಕ ಕೊಟ್ಟಿಲ್ಲ‌. ಅವರವರ ಕ್ಷೇತ್ರಕ್ಕೆ ಎಷ್ಟು ಲಸಿಕೆ ಬಂದಿದೆ. ನಮ್ಮ ರಾಜ್ಯದ ಸಂಸದರಿಗೆ ಗೊತ್ತಿಲ್ಲ ಎಂದು ಬಿಜೆಪಿ ಸಂಸದರ ವಿರುದ್ಧ ಪ್ರಿಯಾಂಕ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಲೇಬರ್ ಕೇರ್ಸ್ ನಲ್ಲಿ 10 ಸಾವಿರ ರೂ. ಕೋಟಿ ಇದೆ.ಇವತ್ತು ಅದನ್ನು ಕಾರ್ಮಿಕರಿಗೆ ಬಳಸಬಹುದು.ಕೇಂದ್ರದಿಂದ ಅನುದಾನ ಅದಕ್ಕೆ ತರಬಹುದು.ಆದರೆ ಪ್ರಧಾನಿಗೆ ಯಾರಾದರೂ ಒತ್ತಡ ತಂದಿದ್ದಾರೆಯೇ?ರಾಜ್ಯದಲ್ಲಿ ಮೂರು ರೆಮಿಡಿಸಿವಿರ್ ಕಂಪನಿಯಿವೆ. ರಾಜ್ಯದಲ್ಲಿಯೇ ರೆಮಿಡಿಸಿವಿರ್ ಇಂದು ಸಿಗುತ್ತಿಲ್ಲ. ರಾಜ್ಯದಿಂದ ಹೆಚ್ಚಿನ ತೆರಿಗೆ ಸಂಗ್ರಹಿಸುತ್ತಿದ್ದಾರೆ. ಆದರೆ ರಾಜ್ಯಕ್ಕೆ ಎಷ್ಟು ಹಣ ವಾಪಸ್ ಬಂದಿದೆ. ಇವತ್ತು ವೈದ್ಯಕೀಯ ಉಪಕರಣಗಳಿಗೂ ತೆರಿಗೆ ಹಾಕುತ್ತಾರೆ. ಸಿರಿಂಜ್, ಗ್ಲೌಸ್, ಮಾಸ್ಕ್ ಎಲ್ಲದಕ್ಕೂ ತೆರಿಗೆ ಹಾಕುತ್ತಾರೆ.

ಇದನ್ನು ಕೇಳುವುದಕ್ಕೆ ಏಕೆ ಆಗುತ್ತಿಲ್ಲ.ಇದು ಜನಸಾಮಾನ್ಯರಿಗೆ ಸುಲಿಗೆಯಾಗುತ್ತಿದೆ.ಅಗತ್ಯ ಸೇವೆ ಉಪಕರಣಗಳ ಮೇಲೆ ತೆರಿಗೆ ಏಕೆ?ಈ ಸಂದರ್ಭದಲ್ಲಿ ಇದರ ಮೇಲೆ ತೆರಿಗೆ ಸರಿಯಲ್ಲ ಎಂದು ಕೇಂದ್ರದ ವಿರುದ್ಧ ಪ್ರಿಯಾಂಕ ವಾಗ್ದಾಳಿ ನಡೆಸಿದರು.ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ಕೇಂದ್ರ ಲಸಿಕೆ ವಿಚಾರದಲ್ಲಿ ಹಿಂದಕ್ಕೆ ಸರಿದಿದೆ.18 ರಿಂದ 45 ರವರೆಗೆ ನಮ್ಮ ಜವಾಬ್ದಾರಿಯಿಲ್ಲ ಎಂದಿದೆ. ನೀವೇ ಏನು ಮಾಡಿಕೊಳ್ಳುತ್ತಿರೋ ಮಾಡಿ ಎಂದಿದೆ.ರಾಜ್ಯ ಸರ್ಕಾರವೂ ಲಸಿಕೆ ನೀಡುತ್ತಿಲ್ಲ.ಲಸಿಕೆ ವಿಚಾರದಲ್ಲಿಯೂ ಒಂದೊಂದು ದರವಿದೆ.ಜನ ಬಹಳ ಭರವಸೆಯಿಂದ ಮೋದಿಗೆ ಮತಹಾಕಿದರೂ ಆದರೆ ಲಸಿಕೆ ಮಾತ್ರ ಸಿಗುತ್ತಿಲ್ಲ.ಸಿಎಂ ಯಡಿಯೂರಪ್ಪನವರೇ 18ವರ್ಷದ ಮೇಲಿನವರೆಗೆ ಲಸಿಕೆ ಚಾಲನೆ ಕೊಟ್ಟು ಈಗ ಲಸಿಕೆ ಎಲ್ಲಿ ಕೊಡಲಾಗುತ್ತಿಲ್ಲ.

ಅಯೋಗ್ಯ ಮಂತ್ರಿ ಸುಧಾಕರ್ ಏನು ಮಾಡುತ್ತಿದ್ದಾರೆ?ಅಲ್ಲ ಆರೋಗ್ಯ ಮಂತ್ರಿ ಏನು ಮಾಡುತ್ತಿದ್ದಾರೆ. ಟೈಫಾಯ್ಡ್, ಪೊಲಿಯೋ, ಮಲೆರಿಯಾ ಬಂದಾಗ ನೆಹರು ಏನು ಮಾಡಿದ್ದರು.ಇಲ್ಲದೇ ಹೋಗಿದ್ದರೆ ಇಂದಿನ ಪರಿಸ್ಥಿತಿ ಬರುತ್ತಿರಲಿಲ್ಲ.ಆದರೆ ಈಗಿನ ಸರ್ಕಾರಕ್ಕೆ ಬದ್ಧತೆಯಿಲ್ಲ. ರಾಜ್ಯದಿಂದ 25 ಜನ ಸಂಸದರನ್ನು ಕರ್ನಾಟಕ ಕಳಿಸಿದ್ದಕ್ಕೆ ಮೋದಿ ಧನ್ಯವಾದ ಸಲ್ಲಿಸಬೇಕು. ಆದರೆ ಅವರು ಸ್ಮರಿಸುತ್ತಿಲ್ಲ, ಇವರು ಗೆದ್ದಿದ್ದಕ್ಕೆ ಇವರು ನೋಡುತ್ತಿಲ್ಲ ಎಂದು ಪ್ರಧಾನಿ ರಾಜ್ಯದ ಸಂಸದರ ವಿರುದ್ಧ ರಿಜ್ವಾನ್ ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!