ಕೋವಿಡ್-19 ಸೋಂಕಿನಿಂದ ಮೃತಪಟ್ಟ ಕುಟುಂಬಕ್ಕೆ ಸರ್ಕಾರದಿಂದ 50 ಸಾವಿರ ಪರಿಹಾರ ಘೋಷಣೆ
ನವದೆಹಲಿ: ಕೋವಿಡ್-19 ಸಾಂಕ್ರಾಮಿಕದಿಂದ ಮೃತಪಟ್ಟ ಪ್ರತಿ ಕುಟುಂಬಕ್ಕೆ 50 ಸಾವಿರ ಪರಿಹಾರವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಂಗಳವಾರ ಪ್ರಕಟಿಸಿದ್ದಾರೆ.
ಸಂಪಾದನೆ ಮಾಡುತ್ತಿದ್ದ ಪ್ರಮುಖ ವ್ಯಕ್ತಿ ಮೃತಪಟ್ಟಂತಹ ಕುಟುಂಬಗಳಿಗೆ ಪರಿಹಾರದ ಜೊತೆಗೆ ಪ್ರತಿ ತಿಂಗಳು 2500 ಪಿಂಚಣಿಯನ್ನು ಘೋಷಿಸಲಾಗಿದೆ. ಒಂದು ವೇಳೆ ಗಂಡ ಮೃತಪಟ್ಟಿದ್ದರೆ, ಹೆಂಡತಿಗೆ ಪಿಂಚಣಿ ನೀಡಲಾಗುವುದು, ಪತ್ನಿ ಸಾವನ್ನಪ್ಪಿದ್ದರೆ ಗಂಡನಿಗೆ ಪಿಂಚಣಿ ಸಿಗಲಿದೆ. ಒಂದು ಅವಿವಾಹಿತರು ಮೃತಪಟ್ಟಿದ್ದರೆ, ಅವರ ಪೋಷಕರಿಗೆ ಪಿಂಚಣಿ ದೊರೆಯಲಿದೆ.
ಕೋವಿಡ್ ನಿಂದ ಅನಾಥರಾದ ಅಥವಾ ಫೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಅವರ 25 ನೇ ವಯಸ್ಸಿನವರೆಗೂ ಪ್ರತಿ ತಿಂಗಳು 2500 ರೂ. ಪಿಂಚಣಿ ದೊರೆಯಲಿದೆ. ಅಲ್ಲದೇ ಉಚಿತವಾಗಿ ಶಿಕ್ಷಣ ಕೂಡಾ ಸಿಗಲಿದೆ.