ಕಡಲ್ಕೊರೆತದಿಂದ ಹಾನಿ: ಅಹವಾಲು ಸ್ವೀಕರಿಸದ ಸಚಿವರು- ಶೋ ಮಾಡಲು ಬರುವುದಾ..? ಮೀನುಗಾರರ ಆಕ್ರೋಶ

ಕುಂದಾಪುರ: ಕಡಲ್ಕೊರೆತದಿಂದ ಹಾನಿಯಾಗಿರುವ ಮರವಂತೆ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭ ಮೀನುಗಾರರ ಅಹವಾಲು ಸ್ವೀಕರಿಸದೇ ಗಡಿಬಿಡಿಯಲ್ಲಿ ತೆರಳಿದ ಕಂದಾಯ ಸಚಿವ ಆ‌ರ್.‌ ಅಶೋಕ್ ಅವರ ವಿರುದ್ಧ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಚಿವರ ಅವಸರದ ಭೇಟಿಯ ವಿರುದ್ಧ ಕಿಡಿಕಾರಿರುವ ಮೀನುಗಾರರು, ಇವರೇನು ಶೋಕಿ ಮಾಡುವುದಕ್ಕೆ  ಬಂದಿದ್ದಾ? ನಮ್ಮ ಕಷ್ಟ ಕೇಳಲು ಸಚಿವರು ಬಂದದ್ದು ಅಲ್ಲವೇ..? ನಮಗೆ ಸಾಂತ್ವಾನ‌ ಹೇಳುವ ಕನಿಷ್ಟ ಸೌಜನ್ಯತೆ ಇವರಿಗೆ ಇಲ್ಲವೇ ಎಂದು ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇದೇ ವೇಳೆ ಇನ್ನುಮುಂದೆ ಯಾವುದೇ ಜನಪ್ರತಿನಿಧಿ ಬಂದರೂ ನಾವೂ ಹೋಗುವುದಿಲ್ಲ. ಜನರ ಅಹವಾಲನ್ನು ಸ್ವೀಕರಿಸದೇ ಹೋದರೇ ಅವರು ಬಂದು  ಏನು ಪ್ರಯೋಜನೆವಿದೆ ಎಂದು ಅಸಮಧಾನ ಹೊರ ಹಾಕಿದ್ದಾರೆ.

Leave a Reply

Your email address will not be published. Required fields are marked *

error: Content is protected !!