ಲಸಿಕೆ ಕೊಡಿಸುತ್ತೇವೆ ಎಂದು ಬ್ಯಾಂಕ್ ಖಾತೆಯ ಹಣಕ್ಕೆ ಕನ್ನ ಹಾಕಬಹುದು ಎಚ್ಚರಿಕೆ… ಗ್ರಾಹಕರೇ ಎಚ್ಚರಿಕೆ…

ಉಡುಪಿ ಮೇ.18(ಉಡುಪಿ ಟೈಮ್ಸ್ ವರದಿ): ಕೋವಿಡ್ ಸಂಕಷ್ಟದ ನಡುವೆ ವಾಕ್ಸಿನ್ ಲಭ್ಯತೆ ಕುರಿತು ಅನೇಕರಲ್ಲಿ ಈಗಲೂ ಮಾಹಿತಿ ಕೊರತೆಯಿದೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಗುಂಪೊಂದು ಹೊಸ ರೀತಿಯ ಸೈಬರ್ ದರೋಡೆಗೆ ಸಂಚು ರೂಪಿಸುತ್ತಿವೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಅದರಂತೆ ಕೊರೋನಾ ಸಮಯದಲ್ಲಿ ಜನರನ್ನು ಮೋಸ ಮಾಡುವ ಹೊಸದೊಂದು ಮಾರ್ಗವನ್ನು ಕಂಡುಕೊಂಡಿರುವ ಆಗಂತುಕರು ಕರೆ ಮಾಡಿ ‘ನೀವು ಕೊರೋನಾ ಲಸಿಕೆ ತೆಗೆದುಕೊಂಡಿದ್ದೀರಾ?’ ಎಂದು ಪ್ರಶ್ನೆ ಕೇಳುತ್ತಾರೆ.. ಒಂದು ಡೋಸ್ ಆಗಿದ್ದರೆ, ಎರಡನೇ ಡೋಸ್ ಬಗ್ಗೆ ಮಾತಾನಾಡುತ್ತಾರೆ.. ಒಂದು ಡೋಸ್ ಕೂಡ ಆಗದಿದ್ದಲ್ಲಿ ನೀವು ಆಸ್ಪತ್ರೆಗೆ ಹೋಗಿ ಪಡೆದುಕೊಳ್ಳುತ್ತೀರಾ? ಅಥವಾ ಮನೆಯಲ್ಲಿಯೇ ಪಡೆದುಕೊಳ್ಳುತ್ತೀರಾ? ಅನ್ನುವ ಪ್ರಶ್ನೆ ಕೇಳುತ್ತಾರೆ.

ಸಾಮಾನ್ಯವಾಗಿ ನಾವು ಸುಲಭವಾಗಿ ಮನೆಯಲ್ಲಿಯೇ‌ ತೆಗೆದುಕೊಳ್ಳುವ ಆಯ್ಕೆಯನ್ನು ಮುಂದಿಡುತ್ತೇವೆ. ಆಗ ಕರೆ ಮಾಡಿದವರು ನಾವು ನಿಮ್ಮ‌ಮನೆಗೆ ಬಂದು ಲಸಿಕೆ ಕೊಡುತ್ತೇವೆ.. ಅದಕ್ಕಾಗಿ ‘ನಿಮ್ಮ ನೋಂದಣಿ ಆಗಬೇಕಿದೆ.. ನಿಮ್ಮ‌ ಆಧಾರ್ ನಂಬರ್ ಕೊಡಿ’ ಎಂದು ಕೇಳುತ್ತಾರೆ. ಈ ವೇಳೆ ಇವರ ಮಾತನ್ನು ನಂಬಿ ನೀವು ಆಧಾರ್ ಸಂಖ್ಯೆ ಕೊಟ್ಟಿರಾದರೆ ನೀವು ಮಾತನಾಡುತ್ತಿರುವ  ಮೊಬೈಲ್‌ ನಂಬರ್ ನಿಮ್ಮ ಬ್ಯಾಂಕ್ ಖಾತೆಗೆ ನೋಂದಣಿ ಆಗಿದ್ದರೆ ಮೊಬೈಲ್’ಗೆ ಒಂದು OTP ಬರುತ್ತದೆ.. ಅದನ್ನು ಕೇಳುತ್ತಾರೆ.. ಅದನ್ನು ಕೂಡ ಕೊಟ್ಟಲ್ಲಿ ನಿಮ್ಮ‌ ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡಿ ಖಾತೆ ಸಂಪೂರ್ಣ ಮೊತ್ತವನ್ನು ಅವರು ಎಗರಿಸುತ್ತಾರೆ. ಆದ್ದರಿಂದ ಇಂತಹ ಕರೆಗಳು ಬಂದರೆ ಈಗಾಲೇ ಲಸಿಕೆ ನೋಂದಣಿ ಆಗಿದೆ ಎಂದು ತಿಳಿಸಿ ಹಾಗೂ ನಿಮಗೆ ಕರೆ ಬಂದ ಕುರಿತು ಹತ್ತಿರದ ಪೊಲೀಸ್ ಠಾಣೆ ಗೆ ಮಾಹಿತಿ ನೀಡಿ ಜಾಗರೂಕರಾಗಿರುವಂತೆ ಕೋರಲಾಗಿದೆ.

Leave a Reply

Your email address will not be published. Required fields are marked *

error: Content is protected !!