ಮಣಿಪಾಲ: ಅನಾರೋಗ್ಯದಿಂದ ವ್ಯಕ್ತಿ ಮೃತ್ಯು

ಮಣಿಪಾಲ ಮೇ.18(ಉಡುಪಿ ಟೈಮ್ಸ್ ವರದಿ): ಅನಾರೋಗ್ಯದಿಂದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಣಿಪಾಲದಲ್ಲಿ ನಡೆದಿದೆ. ಗಣೇಶ(37) ಮೃತಪಟ್ಟವರು.ಇವರು, ತಮ್ಮ ಅನಾರೋಗ್ಯಕ್ಕಾಗಿ ಇಂದ್ರಾಳಿ ಮತ್ತು ಕಟಪಾಡಿ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. 

ಮೇ.17 ರಂದು ಬೆಳಿಗ್ಗೆ ಗಣೇಶರವರಿಗೆ ವಿಪರೀತ ಕೆಮ್ಮ ಕಾಣಿಸಿಕೊಂಡಿದ್ದರಿಂದ ಅವರ  ಭಾಮೈದ ಪ್ರಿಯೇಶ್‌ ರವರು ಗಣೇಶ್‌ ಅವರನ್ನು ಚಿಕಿತ್ಸೆಗಾಗಿ ಅಜ್ಜರಕಾಡು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಗಣೇಶ್ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಅದಾಗಲೇ ಮೃತಪಟ್ಟಿರುವುದಾಗಿದೆ  ತಿಳಿಸಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!