ಮೇ 23 ರಂದು 14 ಗಂಟೆಗಳ ಕಾಲ ನೆಫ್ಟ್ ಸೌಲಭ್ಯ ಇರಲ್ಲ: ಆರ್‌ಬಿಐ
ಮುಂಬೈ: ಆನ್‌ಲೈನ್ ಹಣ ವರ್ಗಾವಣೆಯನ್ನು ಮಾಡುವ ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ ಫರ್ (ಎನ್‌ಇಎಫ್‌ಟಿ) ಸೌಲಭ್ಯವು ಮೇ 23 ರಂದು ಕನಿಷ್ಠ 14 ಗಂಟೆಗಳ ಕಾಲ ಲಭ್ಯವಿರುವುದಿಲ್ಲ ಎಂದು ಆರ್‌ಬಿಐ ಟ್ವೀಟ್‌ನಲ್ಲಿ ತಿಳಿಸಿದೆ.
ಎನ್‌ಇಎಫ್‌ಟಿ ತಾಂತ್ರಿಕ ನವೀಕರಣವನ್ನು ಮಾಡುವ ಕಾರಣದಿಂದ 2021 ರ ಮೇ 23 ರ ಭಾನುವಾರ ಸೇವೆ ಲಭ್ಯವಿರುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಈ ಕುರಿತಂತೆ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ತಮ್ಮ ಪಾವತಿ ಕಾರ್ಯಾಚರಣೆಯನ್ನು ಮುಂಚಿತವಾಗಿ ಯೋಜಿಸಿಕೊಳ್ಳುವಂತೆ ತಿಳಿಸಬಹುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ. ಅದೇ ವೇಳೆ ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ (ಆರ್‌ಟಿಜಿಎಸ್) ಸೌಲಭ್ಯವು ಎಂದಿನಂತೆ ಕಾರ್ಯನಿರ್ವಹಿಸುತ್ತಲೇ ಇರುತ್ತದೆ ಎಂದು ಕೇಂದ್ರ ಬ್ಯಾಂಕ್ ಹೇಳಿದೆ.