ಬಾರ್ಕೂರು: ಕಾಲೇಜ್ ಹಾಸ್ಟೆಲ್’ನಲ್ಲಿ ಸಿಲುಕಿಕೊಂಡ ಪಶ್ಚಿಮ ಬಂಗಾಳದ 13 ವಿದ್ಯಾರ್ಥಿಗಳು-7ಮಂದಿಯಲ್ಲಿ ಪಾಸಿಟಿವ್

ಉಡುಪಿ ಮೇ.18(ಉಡುಪಿ ಟೈಮ್ಸ್ ವರದಿ): ಲಾಕ್ ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯ ಬಾರ್ಕೂರಿನ ಕಾಲೇಜು ಹಾಸ್ಟೆಲ್ ನಲ್ಲಿ ಬಿಎಸ್ ಡಬ್ಲ್ಯೂ ವ್ಯಾಸಂಗ ಮಾಡುತ್ತಿರುವ ಪಶ್ಚಿಮ ಬಂಗಾಳದ 13 ವಿದ್ಯಾರ್ಥಿಗಳು ಸಿಲುಕಿಕೊಂಡಿರುವ ವಿಚಾರ ಇಂದು ಬೆಳಿಗ್ಗೆ ತಿಳಿದು ಬಂದಿದೆ. 

ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ‌ ವಿದ್ಯಾರ್ಥಿಗಳ ನೆರವಿಗೆ ಶಾಸಕ ರಘುಪತಿ ಭಟ್ ಅವರು ಸ್ಪಂದಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳಿಗೆ ಸ್ಥಳೀಯ ಅರುಣ್ ಕಾಂಚನ್ ಆಹಾರ ಒದಗಿಸುವ ಮೂಲಕ ನೆರವಾಗಿದ್ದರು ಎಂದು ತಿಳಿದು ಬಂದಿದೆ.

ಈ ಬಗ್ಗೆ ವಿದ್ಯಾರ್ಥಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು.ಈ ಸಂದೇಶವನ್ನುಉಡುಪಿಯ ಆರ್ ಜೆ ಎರಲ್ ಅವರಿಗೆ ಸ್ನೇಹಿತರೊಬ್ಬರು ಕಳುಹಿಸಿದ್ದರು. ಈ ಬಗ್ಗೆ ಅವರು ವಿಚಾರಿಸಿದಾಗ ವಿದ್ಯಾರ್ಥಿಯೊಬ್ಬರು, ವಿದ್ಯಾರ್ಥಿಗಳು ಕೋವಿಡ್ ಪರೀಕ್ಷೆಯ ನಡೆಸಿದ್ದು ಯಾವುದೇ ರೋಗ ಲಕ್ಷಣಗಳು ಕಂಡು ಬಂದಿಲ್ಲ‌. ಆದರೆ ಲಾಕ್ ಡೌನ್ ಹಿನ್ನೆಲೆ ಹೊರಗೆ ಹೋಗಲೂ ಬಿಡುತ್ತಿಲ್ಲ. ನಮ್ಮ ಬಳಿ ಖರ್ಚಿಗೆ ಹಣವೂ ಇಲ್ಲದೆ, ಆಹಾರ ಸಮಾಗ್ರಿಗಳೂ ಮುಗಿದಿರುವುದರಿಂದ ಆಹಾರಕ್ಕೂ ಸಮಸ್ಯೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ವೇಳೆ ಆರ್ ಜೆ ಎರಲ್ ಅವರು ತಕ್ಷಣ ಈ ಬಗ್ಗೆ ಶಾಸಕರು ಹಾಗೂ ಜಿಲ್ಲಾಧಿಕಾರಿಯವರಿಗೆ ಮಾಹಿತಿ ನೀಡಿದ್ದಾರೆ. 

ಶಾಸಕ ರಘುಪತಿ ಭಟ್ ಅವರಿಗೆ ಮಾಾಾಹಿ ತಿಳಿದ ತಕ್ಷಣ ಅವರು ವಿದ್ಯಾರ್ಥಿಗಳ ನೆರವಿಗೆ ಸ್ಪಂದಿಸಿ ಅವರಿಗೆ ಬೇಕಾದ ಆಹಾರದ ವ್ಯವಸ್ಥೆ ಒದಗಿಸುವುದಾಗಿ ಭರವಸೆ ನೀಡಿದ್ದರು. ಇದರೊಂದಿಗೆ ಜಿಲ್ಲಾಧಿಕಾರಿ ಜಿ ಜಗದೀಶ್ ಅವರೂ ವಿದ್ಯಾರ್ಥಿಗಳ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ.ಇನ್ನು ಹಾಸ್ಟೆಲ್ ನಲ್ಲಿ ಸಿಲುಕಿಕೊಂಡಿರುವ 13ವಿದ್ಯಾರ್ಥಿಗಳ ಪೈಕಿ 7 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಕಂಡು ಬಂದಿದ್ದು 3 ವಿದ್ಯಾರ್ಥಿಗಳ ವರದಿ ನೆಗೆಟಿವ್ ಬಂದಿದೆ ಇನ್ನೂ 3 ವಿದ್ಯಾರ್ಥಿಗಳ ವರದಿ ಬರಬೇಕಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!