ವಿದ್ಯುತ್ ಗುತ್ತಿಗೆದಾರನ ನಿರ್ಲಕ್ಷ್ಯ- ಕುತ್ತಿಗೆಗೆ ತಂತಿ ಸಿಲುಕಿ ಬೈಕ್ ಸವಾರ ಸಾವು

ಉಡುಪಿ ಮೇ.17(ಉಡುಪಿ ಟೈಮ್ಸ್ ವರದಿ): ವಿದ್ಯುತ್ ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಬೈಕ್ ಸವಾರನೋರ್ವ ಮೃತಪಟ್ಟ ಘಟನೆ ಬೈಂದೂರು ತಾಲೂಕು ಹೇರೂರು ಗ್ರಾಮದ ಹೇರೂರು-ಅರೆಹೊಳೆ ರಸ್ತೆಯಲ್ಲಿ ನಡೆದಿದೆ.

ಆಲಗದ್ದೆ ಯರುಕೋಣಿ ನಿವಾಸಿ ಶೇಖರ್ ಶೆಟ್ಟಿ (68) ಮೃತಪಟ್ಟವರು. ಗಾಳಿ ಮಳೆಗೆ ಬಿದ್ದಿದ್ದ ವಿದ್ಯುತ್ ತಂತಿಗಳ ದುರಸ್ಥಿ ನಡೆಸುತ್ತಿದ್ದ ವೇಳೆ ತಂತಿ ಕೆಳಗೆ ಬಂದಿದ್ದು, ಈ ಸಂದರ್ಭ ರಸ್ತೆಯಲ್ಲಿ ಬೈಕ್ ನಲ್ಲಿ ಸಾಗುತ್ತಿದ್ದ ಶೇಖರ್ ಶೆಟ್ಟಿ ಕುತ್ತಿಗೆಗೆ  ತಂತಿ ಸಿಲುಕಿ ಶೇಖರ್ ಶೆಟ್ಟಿ ಆವರು ಮೃತಪಟ್ಟಿದ್ದಾರೆ. 

ಗುತ್ತಿಗೆದಾರರು ಯಾವುದೇ ಸೂಚನ ಫಲಕ ಅಳವಡಿಸದೆ ಇರುವುದರಿಂದಲೇ ಈ ದುರ್ಘಟನೆ ನಡೆದಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!