ವಿಶ್ವಸುಂದರಿ ಸ್ಪರ್ಧೆ: ಉಡುಪಿಯ ಬೆಡಗಿಗೆ ಮೂರನೇ ರನ್ನರ್ ಅಪ್ ಕಿರೀಟ
ಪ್ಲೋರಿಡಾ ಮೇ.17: ಈ ಬಾರಿಯ ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಕರಾವಳಿಯ ಬೆಡಗಿ ಮೂರನೇ ರನ್ನರ್ ಅಪ್ ಕಿರೀಟವನ್ನು ತಮ್ಮ ಮುಡಿಗೇರಿಸಿ ಕೊಂಡಿದ್ದಾರೆ.
ಅಮೆರಿಕದ ಫ್ಲೋರಿಡಾದಲ್ಲಿ ನಡೆದ ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಕರಾವಳಿಯ ಬೆಡಗಿ ಆಡ್ರೈನ್ ಕ್ಯಾಸ್ಟೆಲಿನೋ ಸ್ಪರ್ಧಿಸಿದ್ದು ಅಂತಿಮ ಸುತ್ತಿನಲ್ಲಿ ಮೂರನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.
ಉಡುಪಿ ಜಿಲ್ಲೆಯ ಉದ್ಯಾವರದ ಆಡ್ರೈನ್ ಕ್ಯಾಸ್ಟೆಲಿನೋ ಮೂರನೇ ರನ್ನರ್ ಅಪ್ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದು , ಇವರನ್ನು ಕೇವಲ ಉಡುಪಿ ಜಿಲ್ಲೆ ಹಾಗೂ ರಾಜ್ಯ ಮಾತ್ರವಲ್ಲದೆ ಇಡೀ ದೇಶವೇ ಅಭಿನಂದಿಸಿದೆ.
ಭುವನ ಸುಂದರಿ ಸ್ಪರ್ಧೆಯಲ್ಲಿದ್ದ ವಿಶ್ವದಾದ್ಯಂತ 70 ಸ್ಪರ್ಧಿಗಳು ಭಾಗವಹಿಸಿದ್ದು, ಭಾರತವನ್ನು ಪ್ರತಿನಿಧಿಸಿದ್ದ ಕರಾವಳಿ ಬೆಡಗಿ ಆಡ್ರೈನ್ ಕ್ಯಾಸ್ಟೆಲಿನೋ ಮೂರನೇ ರನ್ನರ್ ಅಪ್ ಆಗಿರುವುದು ಹೆಮ್ಮೆಯ ವಿಷಯವಾಗಿದೆ.
ಮೂಲತಃ ಉದ್ಯಾವರ ನಿವಾಸಿಯಾಗಿರುವ ಇವರು ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಇದೀಗ ಕ್ಯಾಸ್ಟೆಲಿನೋ ಅವರ ಸಾಧನೆಗೆ ಉದ್ಯಾವರದ ನಾಗರಿಕರು ಸಂತಸ ವ್ಯಕ್ತಪಡಿಸಿದ್ದಾರೆ.