ಮೇ 16- 745 ಕೋವಿಡ್ ಪಾಸಿಟಿವ್, ಕುಂದಾಪುರದ ನಾಲ್ವರು, ಉಡುಪಿಯ ಓರ್ವರ ಮೃತ್ಯು

ಉಡುಪಿ ಮೇ 16(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ 1000 ಕ್ಕೂ ಅಧಿಕ ಸಂಖ್ಯೆಯಲ್ಲಿ ಪತ್ತೆಯಾಗುತ್ತಿದ್ದ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇಂದು ಇಳಿಮುಖವಾಗಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿಯೂ ನಿನ್ನೆಗಿಂತ ಇಂದು ಇಳಿಕೆಯಾಗಿದೆ. 

ಜಿಲ್ಲೆಯಲ್ಲಿ ಇಂದು 745 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಈ  ಪೈಕಿ ಉಡುಪಿಯಲ್ಲಿ 316 ಕುಂದಾಪುರ 307 , ಕಾರ್ಕಳ 113  ಹಾಗೂ ಹೊರ ಜಿಲ್ಲೆಯ 9 ಮಂದಿಯಲ್ಲಿ  ಸೋಂಕು ಇರುವುದು ಪತ್ತೆಯಾಗಿದೆ. 

ಸದ್ಯ ಜಿಲ್ಲೆಯಲ್ಲಿ 6805 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಇಂದು ಜಿಲ್ಲೆಯಲ್ಲಿ 5 ಮಂದಿ ಸೋಂಕಿತರು ಮೃತಪಟ್ಟಿದ್ದು, ಈ ಪೈಕಿ ಉಡುಪಿಯ ಓರ್ವ ಮಹಿಳೆ ಮತ್ತು ಕುಂದಾಪುರದ ಮೂವರು ಮಹಿಳೆಯರು ಹಾಗೂ ಓರ್ವ ವ್ಯಕ್ತಿ ಸೋಂಕಿನಿಂದ ಪ್ರಾಣ ಕಳೆದು ಕೊಂಡಿದ್ದಾರೆ. ಮೇ. 15 ರಂದು ಜಿಲ್ಲೆಯಲ್ಲಿ 1197 ಮಂದಿ ಸೋಂಕಿತರು ಆಸ್ಪತ್ರೆಯಿಂದ ಗುಣಮುಖರಾಗಿ ಹೊರ ಬಂದಿದ್ದು, ಈ ವರೆಗೆ ಒಟ್ಟು 39,668 ಮಂದಿ ಗುಣಮುಖರಾಗಿದ್ದಾರೆ. ಮೇ.15 ರ ವೇಳೆಗೆ ಜಿಲ್ಲೆಯಲ್ಲಿ ಒಟ್ಟು 5,47,807 ಮಂದಿಯನ್ನು ಕೋವಿಡ್  ಟೆಸ್ಟ್ ಗೆ ಒಳಪಡಿಸಿದ್ದು, ಈ ಪೈಕಿ 46,739 ಮಂದಿಯಲ್ಲಿ ಸೋಂಕು ದೃಢ ಪಟ್ಟಿದೆ. ಈ ವರೆಗೆ ಜಿಲ್ಲೆಯಲ್ಲಿ ಒಟ್ಟು 266 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ದ.ಕ. ಜಿಲ್ಲೆಯಲ್ಲಿ 957 ಮಂದಿಯಲ್ಲಿ ಸೊಂಕು ಪತ್ತೆ, 7 ಮಂದಿ ಮೃತರಾಗಿದ್ದು, 1638 ಮಂದಿ ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿಂದು ಹೊಸ ಕೋವಿಡ್-19 ಪ್ರಕರಣಗಳಿಗಿಂತ ಗುಣಮುಖರಾದವರ ಸಂಖ್ಯೆಯೇ ಹೆಚ್ಚಾಗಿದೆ. ಇಂದು 36 ಸಾವಿರದ 475 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಆಸ್ಪತ್ರೆಯಿಂದ ಬಿಡುಗಡೆಯಾದವರ ಒಟ್ಟು ಸಂಖ್ಯೆ 1581457ಕ್ಕೆ ಏರಿಕೆಯಾಗಿದೆ.

31 ಸಾವಿರದ 531 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಕೋವಿಡ್-19 ಸೋಂಕಿನ ಖಚಿತ ಪ್ರಕರಣಗಳ ಒಟ್ಟು  ಸಂಖ್ಯೆ 2203462 ಆಗಿದೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 600147ಕ್ಕೆ ಏರಿಕೆಯಾಗಿದೆ. 

ರಾಜ್ಯದಲ್ಲಿ ಇಂದು 403 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಸೋಂಕಿನಿಂದ ಒಟ್ಟಾರೇ, ಮೃತಪಟ್ಟವರ ಸಂಖ್ಯೆ 21, 837ಕ್ಕೆ ಏರಿಕೆಯಾಗಿದೆ. ಸೋಂಕಿನ ಖಚಿತ ಪ್ರಕರಣಗಳ ಶೇಕಡಾವಾರು ಪ್ರಮಾಣ ಶೇ. 27.84 ರಷ್ಟಿದ್ದು, ಮರಣ ಪ್ರಮಾಣ ಶೇ. 1.27 ರಷ್ಟಿದೆ. ಬೆಂಗಳೂರು ನಗರದಲ್ಲಿ 8344 ಪ್ರಕರಣಗಳು ವರದಿಯಾಗಿದ್ದು, 143 ಮಂದಿ ಸಾವನ್ನಪ್ಪಿದ್ದಾರೆ.  13612 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!