ಕಾಪು ಸಮುದ್ರ ಮಧ್ಯೆ ಸಿಲುಕಿಕೊಂಡಿರುವ 9 ಕಾರ್ಮಿಕರ ರಕ್ಷಣೆಗೆ ಪ್ರಧಾನಿ, ರಕ್ಷಣಾ ಸಚಿವರಿಗೆ ಪ್ರಮೋದ್ ಮನವಿ
ಉಡುಪಿ ಮೇ.16(ಉಡುಪಿ ಟೈಮ್ಸ್ ವರದಿ): ಕಾಪು ಸಮುದ್ರ ಮಧ್ಯೆ ಸಿಲುಕಿಕೊಂಡಿರುವ ಕಾರ್ಮಿಕ ಸಿಬ್ಬಂದಿಗಳ ರಕ್ಷಣೆಗೆ ತಕ್ಷಣ ಸ್ಪಂದಿಸಿ ತರಬೇತಿ ಪಡೆದಿರುವ ಭಾರತೀಯ ನೌಕಾದಳದ ವಿಶೇಷ ರಕ್ಷಣಾ ಪಡೆಯನ್ನು ನಿಯೋಜಿಸುವಂತೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ರಕ್ಷಣಾ ಸಚಿವರು ಹಾಗೂ ಪ್ರಧಾನ ಮಂತ್ರಿಯವರ ಬಳಿ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು,ಭಾರತ ಸರಕಾರದ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ, ಉಡುಪಿ ಜಿಲ್ಲೆಯ ಕಾಪು ಸಮುದ್ರ ತೀರದಿಂದ ಸಮುದ್ರದ ಮಧ್ಯದಲ್ಲಿ ಈ ಬಡಪಾಯಿ 9 ಕಾರ್ಮಿಕರು ಸಿಕ್ಕಿಬಿದ್ದಿರುತ್ತಾರೆ, ಸಮುದ್ರ ಪ್ರಕ್ಷುಬ್ದಗೊಂಡಿರುವುದರಿಂದ ಕೋಸ್ಟ್ ಗಾರ್ಡ್ ರಕ್ಷಣಾ ಪಡೆಯು ತಮ್ಮ ಅಸಹಾಯಕತೆಯನ್ನು ತೋರ್ಪಡಿಸುತ್ತಿರುವುದ್ದಾರೆ.
ಆದ್ದರಿಂದ ಅವರನ್ನು ರಕ್ಷಿಸಲು ಇಂತಹ ಪರಿಸ್ಥಿತಿ ನಿಭಾಯಿಸಲು ತರಬೇತಿ ಪಡೆದಿರುವ ಭಾರತೀಯ ನೌಕಾದಳದ ವಿಶೇಷ ರಕ್ಷಣಾ ಪಡೆಯನ್ನು ನಿಯೋಜಿಸುವಂತೆ ಮನವಿ ಮಾಡುತ್ತಿದ್ದೇವೆ. ಶೀಘ್ರದಲ್ಲಿ ಸ್ಪಂದಿಸಿ, ಸಮುದಲ್ಲಿ ಸಿಲುಕಿರುವ ಜೀವಗಳನ್ನು ರಕ್ಷಿಸಿ ಎಂದು ಸಿಬ್ಬಂದಿಗಳ ಫೋಟೋದೊಂದಿಗೆ ತಮ್ಮ ಟ್ವೀಟ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.