ಮತ್ತೆ ಕೊರೋನಾ ಸೋಂಕಿತರಿಗೆ ನೆರವಿನ ಸಹಕಾರ ನೀಡುವ ಮೂಲಕ ಮಾನವೀಯತೆ ಮೆರೆದ ಡಾ.ಜಿ.ಶಂಕರ್

ಉಡುಪಿ ಮೇ.16(ಉಡುಪಿ ಟೈಮ್ಸ್ ವರದಿ): ಸದಾ ಸಮಾಜಮುಖಿ ಕೆಲಸಗಳ ಮೂಲಕ ಪ್ರಸಿದ್ದಿ ಪಡೆದಿರುವ ನಾಡೋಜ ಡಾ. ಜಿ. ಶಂಕರ್ ಅವರು ಇದೀಗ ಮತ್ತೆ ಕೊರೋನಾ ಕಾಲದಲ್ಲಿ ಸೋಂಕಿತರ ನೆರವಿಗೆ ಸಹಕಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ

ಕೊರೋನಾ ಪೀಡಿತರ ನೆರವಿಗೆ ಮುಂದಾಗಿರುವ ಅವರು, ಕಾರ್ಕಳದಲ್ಲಿ ಆಮ್ಲಜನಕ ಘಟಕನಿರ್ಮಾಣದ ಜೊತೆಗೆ ಆರೋಗ್ಯ ಇಲಾಖೆಗೆ 60 ಆಮ್ಲಜನಕ ಸಾಂದ್ರಕಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಕೋವಿಡ್ -19ರ ಎರಡನೇ ಅಲೆಯ ಈ ಸಂದರ್ಬದಲ್ಲಿ ಮಾನವೀಯ ನೆಲೆಯಲ್ಲಿ ಅವರ ಸೇವೆಯನ್ನು ಮುಂದುವರೆಸಿರುವ ನಾಡೋಜ ಡಾ. ಜಿ ಶಂಕರ್ ರವರು  ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯ ವಠಾರದಲ್ಲಿ ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ 6000 ಲೀಟರ್ ಸಾಮರ್ಥ್ಯದ ಸುಸಜ್ಜಿತ ಅತ್ಯಾಧುನಿಕ ಮಾದರಿಯ ಸಂಪೂರ್ಣ ಸ್ವಯಂಚಾಲಿತ ಆಕ್ಸಿಜನ್ ತಯಾರಿಕಾ ಘಟಕ ನಿರ್ಮಿಸಿ ಸರಕಾರಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

ಈ ಘಟಕವು ಸುಮಾರು 60ಕ್ಕಿಂತಲೂ ಅಧಿಕ ಬೆಡ್‌ಗಳಿಗೆ ಆಕ್ಸಿಜನ್ ಪೂರೈಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದರ ಜೊತೆಗೆ ಮೊದಲ ಹಂತದಲ್ಲಿ 45 ಲಕ್ಷ ರುಪಾಯಿ ವೆಚ್ಚದಲ್ಲಿ 60 ಆಮ್ಲಜನಕ ಸಾಂದ್ರಕಗಳನ್ನು ಕೂಡಾ ತನ್ನ ಟ್ರಸ್ಟ್ ಮೂಲಕ ಸರಕಾರಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಆಕ್ಸಿಜನ್ ಕೊನ್ಸನ್ಟ್ರೇಟರ್ ಪೊರ್ಟೆಬಲ್ ಮಶಿನ್ ಆಗಿದ್ದು, ಸುತ್ತಲೂ ಇರುವ ಗಾಳಿಯಿಂದ ಆಮ್ಲಜನಕವನ್ನು ಕೇಂದ್ರೀಕರಿಸಿ ನೀಡುವ ಮೂಲಕ ರೋಗಿಗಳಿಗೆ ಉಪಯೋಗಿಸಲು ಬಹಳಷ್ಟು ಆರಾಮದಾಯಕವಾಗಿದೆ.

ಪ್ರತೀ ಆಕ್ಸಿಜನ್ ಕೊನ್ಸನ್ಟ್ರೇಟರ್ ವಿಭಿನ್ನ ಪ್ರಮಾಣದಲ್ಲಿ ಗಾಳಿಯನ್ನು ನಿರಂತರವಾಗಿ ಸೆಳೆಯಲಿದ್ದು, ಇದರಲ್ಲಿ ಎಂದಿಗೂ ಆಮ್ಲಜನಕ ಖಾಲಿಯಾಗುವುದಿಲ್ಲ. ನಿಮಿಷಕ್ಕೆ 7 ರಿಂದ 8 ಲೀಟರ್‌ನಷ್ಟು ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಈ ಆಮ್ಲಜನಕ ಸಾಂದ್ರಕ, ತುರ್ತು ಸಂದರ್ಭದಲ್ಲಿ ಕೊರೋನಾ ಪೀಡಿತ ರೋಗಿಗಳಿಗೆ ವರದಾನವಾಗಿದೆ. ಬಿಜಾಪುರ 15, ಗುಲ್ಬರ್ಗ ಮತ್ತು ಯಾದಗಿರಿ ತಲಾ 10, ಕೊಪ್ಪಳ 5, ಉಡುಪಿ ಮತ್ತು ದಕ್ಷಿಣ ಕನ್ನಡಕ್ಕೆ ತಲಾ 10 ಹೀಗೆ ಮೊದಲ ಹಂತದಲ್ಲಿ ಒಟ್ಟು 60  ಆಕ್ಸಿಜನ್ ಕೊನ್ಸನ್ಟ್ರೇಟರ್ ಗಳನ್ನು ಅವರು ಕೊಡುಗೆಯಾಗಿ ನೀಡಿದ್ದಾರೆ.

ಇಷ್ಟು ಮಾತ್ರವಲ್ಲದೆ ಇವರು ಕೊರೋನಾ ಮೊದಲನೇ ಅಲೆಯ ಸಂದರ್ಭದಲ್ಲಿ ಕೂಲಿ ಕಾರ್ಮಿಕರು,ಸವಿತಾ ಸಮಾಜ, ಆಟೋ ರಿಕ್ಷಾ ಚಾಲಕರು, ಅನಾಥರಿಗೆ ಆಹಾರ ಕಿಟ್, ಬಿಜಾಪುರ, ಶಿವಮೊಗ್ಗ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ವೆಂಟಿಲೇಟರ್ ಗಳು, ವಿವಿಧ ಜಿಲ್ಲೆಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಪೋಲಿಸ್ ಇಲಾಖೆಯ ಕೋವಿಡ್ ಫ್ರಂಟ್ ಲೈನ್ ವಾರಿ ಯರ್ಸ್ಗ

ಳಿಗೆ ಎನ್ 95 ಮಾಸ್ಕ್ ಫೇಸ್ ಶೀಲ್ಡ್, ಹ್ಯಾಂಡ್ ಗ್ಲೌ ಸ್, ಸಾನಿಟೈಸರ್, ಟ್ರಿಪಲ್ ಲೇಯರ್ ಸರ್ಜಿಕಲ್ ಮಾಸ್ಕ್, ಉಡುಪಿ, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿಯ ವಿದ್ಯಾರ್ಥಿಗಳು ನಿರಾತಂಕವಾಗಿ ಪರೀಕ್ಷೆ ಬರೆಯು ವಂತಾಗಲು ಎಲ್ಲಾ ವಿದ್ಯಾರ್ಥಿಗಳಿಗೆ ಫೇಸ್ ಮಾಸ್ಕ್‌ಗಳ ಕೊಡುಗೆ ಹೀಗೆ ರುಪಾಯಿ 5 ಕೋಟಿಗೂ ಅಧಿಕ ಹತ್ತು ಹಲವಾರು ಕೊಡುಗೆಗಳನ್ನು ಸಮಾಜಕ್ಕೆ ಡಾ ಜಿ. ಶಂಕರ್ ರವರು ಅವರು ನೀಡುತ್ತಾ ಬರುತ್ತಿದ್ದಾರೆ.

ಕೊರೋನಾ ಭೀತಿಯಿಂದ ಸಂಬಂಧಿಕರು ಮೃತದೇಹ ಮುಟ್ಟಲು ಹಿಂಜರಿದು, ಮೃತದೇಹಗಳಿಗೆ ಯಾವುದೇ ಗೌರವ ನೀಡದೆ ನಿರ್ಲಕ್ಷ್ಯದಿಂದ ಅಂತ್ಯಸಂಸ್ಕಾರ ಮಾಡುವುದನ್ನು ಮಾಧ್ಯಮಗಳ ಮೂಲಕ ನೋಡಿ, ಜಾತಿ, ಮತ, ಧರ್ಮ ಬೇದವಿಲ್ಲದೆ ತನ್ನ ಜಿ ಶಂಕರ್ ಫ್ರಂಟೈನ್ ವಾರಿಯರ್ಸ್ ತಂಡದ ಮೂಲಕ ಕೊರೋನಾ ಪಾಸಿಟಿವ್ ಹೊಂದಿ ಸಾವನ್ನಪ್ಪಿದ 130ಕ್ಕೂ ಅಧಿಕ ಪಾರ್ಥಿವ ಶರೀರಗಳ ಅಂತ್ಯ ಸಂಸ್ಕಾರವನ್ನು ಸರಕಾರದ ಕೋವಿಡ್ ಅಂತ್ಯಕ್ರಿಯೆಯ ಮಾರ್ಗಸೂಚಿ ಪ್ರಕಾರ ನಡೆಸಿಕೊಂಡು ಬಂದಿರುತ್ತಾರೆ.
ಇದರೊಂದಿಗೆ ಸಂಕಷ್ಟದಲ್ಲಿರುವವರಿಗೆ ನೆರವಾಗಲು ಎರಡನೇ ಅಲೆಯ ಈ ಸಂದರ್ಭದಲ್ಲೂ ಟ್ರಸ್ಟ್ ವತಿಯಿಂದ 1.15 ಕೋಟಿ ರುಪಾಯಿ ವೆಚ್ಚದಲ್ಲಿ ಆಕ್ಸಿಜನ್ ಪ್ಲಾಂಟ್ ಮತ್ತು ಕೊನ್ಸನ್ಟ್ರೇಟರ್ ಗಳನ್ನು ಕೊಡುಗೆಯಾಗಿ ನೀಡಲಾಗುತ್ತಿದೆ.

ಈ ವೇಳೆ ಕೋವಿಡ್-19ರ ಲಾಕ್ ಡೌನ್‌ನ ಈ ಸಮಯದಲ್ಲಿಯೂ ತುರ್ತಾಗಿ ಆಕ್ಸಿಜನ್ ಕೊನ್ಸನ್ಟ್ರೇಟರ್ ಗಳನ್ನು ಮುಂಬೈಯಿಂದ ಇಲ್ಲಿಗೆ ತರಲು ಸಹಕರಿಸಿದ ಮುಂಬೈಯ ಉಧ್ಯಮಿಗಳಾದ ಸುರೇಶ್ ಕಾಂಚನ್ ಹಾಗೂ ಗಿರೀಶ್ ರವರಿಗೆ ಸರ್ವರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಿರುವ ನಾಡೋಜ ಡಾ.ಜಿ. ಶಂಕರ್ ಅವರು, ಇದೇ ವೇಳೆ ಜನರು ಸರಕಾರದ ಕೋವಿಡ್ ನಿಯಮಗಳನ್ನು ಪಾಲಿಸಬೇಕು, ಕಡ್ಡಾಯವಾಗಿ ಮಾಸ್ಕ್ ದರಿಸಿ ಸಮಾಜಿಕ ಅಂತರವನ್ನು ಕಾಯ್ದುಕೊಂಡು ಕೊರೋನಾ ಎರಡನೇ ಅಲೆ ಮತ್ತು ಮೂರನೇ ಅಲೆಗಳಿಂದ ಸಂಬವಿಸಬಹುದಾದ ಅನಾಹುತಗಳಿಂದ ತಪ್ಪಿಸಿಕೊಳ್ಳಬೇಕು‌ ಎಂದು ಸಾರ್ವಜನಿಕ ರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!