ಕಾಸರಗೋಡು: 200 ಕೋಟಿ ರೂ. ವಂಚನೆ-ಇಬ್ಬರ ಬಂಧನ
ಕಾಸರಗೋಡು: ಕೋಟ್ಯಾಂತರ ರೂ. ಹಣಕಾಸು ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಚೆರೂರು ಮೂಲದ ಜಲಾಲುದ್ದೀನ್, ಟಿಎಂ ಫೈಸಲ್ ಬಂಧಿತ ಆರೋಪಿಗಳು
ಕಾಸರಗೋಡು ಮೂಲದ ಜಲಾಲುದ್ದೀನ್ ಮತ್ತು ಪಾಡಿಯ ಐಟಿ ತಜ್ಞ ಮನ್‌ಶೀಫ್ ಎಂಬ ಇಬ್ಬರು ಮಲೇಷ್ಯಾ ಮೂಲದ ಮೈ ಕ್ಲಬ್ ಟ್ರೇಡರ್ಸ್ ಹೌಸ್ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ನಡೆಸುವುದಾಗಿ ತಿಳಿಸಿ ಶೇರುದಾರರನ್ನು ವಂಚಿಸಿದ್ದರು.
ಇವರಿಬ್ಬರೂ ಹೂಡಿಕೆದಾರರಿಂದ ಸುಮಾರು 150 ಕೋಟಿ ರೂ ಹಾಗೂ ಕೇರಳದ ಹಲವಾರು ಜಿಲ್ಲೆಗಳ ಸಾವಿರಾರು ಜನರಿಂದ ಸುಮಾರು 500 ಕೋಟಿ ರೂ ಪಡೆದು ವಂಚಿಸಿದ್ದಾರೆ. ಆರೋಪಿಗಳ ಸ್ನೇಹಿತ, ಕಂಪನಿಯ ನಿರ್ದೇಶಕರು ಇನ್ನೂ ವಿದೇಶದಲ್ಲಿ ವಾಸಿಸುತ್ತಿದ್ದಾರೆ ಮತ್ತು ಇವರು ಹಗರಣದ ಪ್ರಮುಖ ಸಹಚರರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.