ಉಡುಪಿ: ಮೇ 15ರಿಂದ ನಗರದಲ್ಲಿ 2ನೇ ಡೋಸ್ ಲಸಿಕೆ ವಿತರಣೆ

ಉಡುಪಿ: ನಗರದಲ್ಲಿ 1ನೇ ಡೋಸ್ ಪಡೆದವರಿಗೆ 2ನೇ ಡೋಸ್ ಗೆ ಲಸಿಕೆ ವಿತರಣೆ ಮೇ 15ರ ಶನಿವಾರದಿಂದ ಆರಂಭಗೊಳ್ಳಲಿದೆ ಎಂಬುವುದಾಗಿ ಉಡುಪಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದ್ದಾರೆ.
ಮಾರ್ಚ್ 25ರೊಳಗೆ ಮೊದಲ ಡೋಸ್ ಪಡೆದವರಿಗೆ ಇದೀಗ 2ನೇ ಡೋಸ್ ಲಸಿಕೆ ವಿತರಣೆಗೆ ಸಿದ್ಧತೆ ನಡೆಸಲಾಗಿದೆ. ಉಡುಪಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 200 ಡೋಸ್, ಮಣಿಪಾಲ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 200 ಡೋಸ್, ಸೈಂಟ್ ಸಿಸಿಲೀಸ್ ಶಾಲೆಯಲ್ಲಿ 250 ಡೋಸ್, ಎಫ್.ಪಿ.ಎ.ಐ. ಕುಕ್ಕಿಕಟ್ಟೆಯಲ್ಲಿ 98 ಡೋಸ್, ಮಕ್ಕಳ ಆಸ್ಪತ್ರೆ ಉಡುಪಿಯಲ್ಲಿ 200 ಡೋಸ್ ಲಸಿಕೆ ವಿತರಣೆಗೆ ನಿರ್ಧರಿಸಲಾಗಿದೆ.ಫಲಾನುಭವಿಗಳಿಗೆ ಎಸ್.ಎಂ.ಎಸ್, ಸಂದೇಶ ಕಳುಹಿಸಲಾಗುವುದು ಹಾಗೂ ಎಸ್.ಎಂ.ಎಸ್. ಸಂದೇಶ ಹೊಂದಿರುವ ಫಲಾನುಭವಿಗಳು ಎಸ್.ಎಂ.ಎಸ್. ಸಂದೇಶದಲ್ಲಿ ನಿಗದಿಪಡಿಸಿದ ಲಸಿಕಾ ಕೇಂದ್ರಕ್ಕೆ ಆಧಾರ್ ಕಾರ್ಡ್ ನೊಂದಿಗೆ ತೆರಳಿ ಲಸಿಕೆ ಪಡೆಯಲು ಮನವಿ ಮಾಡಲಾಗಿದೆ.