ದ.ಕ ಮೇ.14 ಉಡುಪಿ ಟೈಮ್ಸ್ ವರದಿ): ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಲಾಕ್ ಡೌನ್ ಅವಧಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ನಿಗದಿ ಮಾಡಿದ ಸಮಯ ಬೆಳಿಗ್ಗೆ 6 ಗಂಟೆಯಿಂದ 9 ಗಂಟೆ ವರೆಗಿನ ಅವಧಿಯಲ್ಲಿ ಸಾರ್ವಜನಿಕರು ಮಾರುಕಟ್ಟೆಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದು, ಪಾಲಿಕೆ ಅಧೀನದ ಮಾರುಕಟ್ಟೆಗಳಲ್ಲಿ ಸ್ಥಳಾವಕಾಶದ ಕೊರತೆಯಿಂದ ಸಾರ್ವಜನಿಕರು ದೈಹಿಕ ಅಂತರವನ್ನು ಕಾಪಾಡಲು ಕಷ್ಟಸಾದ್ಯವಾಗಿದೆ.
ಆದ್ದರಿಂದ ಈ ಪ್ರದೇಶದ ಮಾರುಕಟ್ಟೆಗಳಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿ ಜನ ದಟ್ಟಣೆಯನ್ನು ನಿಯಂತ್ರಿಸುವುವ ಸಲುವಾಗಿ ವಿಕೇಂದ್ರಿಕೃತ ವ್ಯವಸ್ಥೆಯನ್ನು ಕಲ್ಪಿಸಲು ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 11 APMC ಚಿಲ್ಲರೆ ಮಳಿಗೆಗಳು ಹಾಗೂ 25 ವಲಯವಾರು ಮಾರುಕಟ್ಟೆಗಳನ್ನು ಸಿದ್ದಪಡಿಸಲಾಗಿದೆ.
ಸಾರ್ವಜನಿಕರು ತಮಗೆ ಅನುಕೂಲವಾಗುವ ಸಮೀಪದ ಮಾರುಕಟ್ಟೆಗಳಿಂದ ಖರೀದಿ ಪ್ರಕ್ರಿಯೆ ನಡೆಸಿ ಮಾರುಕಟ್ಟೆಗಳಲ್ಲಿ ಉಂಟಾಗುತ್ತಿರುವ ಜನದಟ್ಟಣೆಯನ್ನು ಕಡಿಮೆಮಾಡಿ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಸಹರಿಸುವಂತೆ ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಪ್ರಕಟಣೆಯಲ್ಲಿ ತಿಳಿದಿದ್ದಾರೆ.
| | |