ಕೆಎಂಸಿ, ಡಾ.ಟಿಎಮ್ಎಪೈ ಉಡುಪಿ-ಕಾರ್ಕಳ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಲಭ್ಯವಿಲ್ಲ

ಮಣಿಪಾಲ, ಮೇ 14: ಪ್ರಸ್ತುತ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ, ಡಾ.ಟಿಎಮ್ಎ ಪೈ ಆಸ್ಪತ್ರೆ, ಉಡುಪಿ ಮತ್ತು ಟಿಎಮ್ಎಪೈ ರೋಟರಿ ಆಸ್ಪತ್ರೆ, ಕಾರ್ಕಳದಲ್ಲಿ ಕೋವಿಡ್ ಲಸಿಕೆಯು ಲಭ್ಯವಿರುವುದಿಲ್ಲ.

ಲಸಿಕೆ ಲಭ್ಯತೆ ಕುರಿತು ತಿಳಿದುಕೊಂಡು ಲಸಿಕೆಗಾಗಿ ಆಸ್ಪತ್ರೆಗೆ ಬರುವುದರಿಂದ ಸಾರ್ವಜನಿಕರು ತಮಗಾಗುವ ಅನಾನುಕೂಲತೆಯನ್ನು ತಪ್ಪಿಸಬಹುದು. 1ನೇ ಜೂನ್ ನಂತರ ಲಸಿಕೆ ದೊರೆಯುವ ಸಾಧ್ಯತೆ ಇದೆ.

ಲಸಿಕೆ ಸಾರ್ವಜನಿಕರಿಗೆ ದೊರಕುವಂತಾಗಳು ನಾವು ನೇರವಾಗಿ ಕಂಪನಿಯಿಂದ ಖರೀದಿಯ ಪ್ರಯತ್ನದಲ್ಲಿದ್ದೇವೆ. ಲಸಿಕೆ ಲಭ್ಯತೆ ಕುರಿತು ಸಾರ್ವಜನಿಕರಿಂದ ತುಂಬಾ ಕರೆಗಳು ಬರುತ್ತಿವೆ.

ಒಮ್ಮೆ ಲಭ್ಯ ವಾದ ನಂತರ ಸಾರ್ವಜನಿಕರಿಗೆ ಮಾಹಿತಿ ನೀಡುತ್ತೇವೆ. ಕಸ್ತೂರ್ಬಾ ಆಸ್ಪತೆ, ಮಣಿಪಾಲ: 0820  2922761 ಡಾ.ಟಿಎಂಎಪೈ ಆಸ್ಪತೆ, ಉಡುಪಿ :08202942126ಡಾ. ಟಿ ಎಂ ಎ ರೋಟರಿ ಪೈ ಆಸ್ಪತೆ, ಕಾರ್ಕಳ :08258230583 ಎಂದು ಮೂರು ಆಸ್ಪತೆಗಳ ಪ್ರಕಟಣೆ ತಿಳಿಸಿದೆ.

ಡಾ. ಟಿ ಎಂ ಎ ಪೈ ಆಸ್ಪತೆ, ಉಡುಪಿಯ ದೂರವಾಣಿ ಸಂಖ್ಯೆ ತಪ್ಪಾಗಿ ಪ್ರಕಟಗೊಂಡಿತ್ತು. ಡಾ ಅವಿನಾಶ ಶೆಟ್ಟಿ, ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ,  ಡಾ. ಶಶಿಕಿರಣ್  ಉಮಾಕಾಂತ್,  ಡಾಟಿಎಮ್ಎ ಪೈ  ಆಸ್ಪತ್ರೆ, ಉಡುಪಿ, ಡಾ. ಕೀರ್ತಿನಾಥ ಬಲ್ಲಾಳ, ಡಾ. ಟಿ ಎಂ ಎ ಪೈ ರೋಟರಿ ಆಸ್ಪತೆ, ಕಾರ್ಕಳ

Leave a Reply

Your email address will not be published. Required fields are marked *

error: Content is protected !!