ಸಾಂಕ್ರಾಮಿಕ ರೋಗದ ತೀವ್ರ ಸ್ವರೂಪ: ಸರ್ಕಾರದ ಆದೇಶ ಸೇರ್ಪಡೆ ಮತ್ತು ಬದಲಾವಣೆ

ಉಡುಪಿ ಮೇ13(ಉಡುಪಿ ಟೈಮ್ಸ್ ವರದಿ): ಕೋವಿಡ್-19ರ ಎರಡನೇ ಅಲೆಯ ಸಾಂಕ್ರಾಮಿಕ ರೋಗವು ತೀವ್ರ ಸ್ವರೂಪವನ್ನು ಪಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಪ್ರಸರಣದ ಸರಪಳಿಯನ್ನು ಮುರಿಯಲು ಹೊರಡಿಸಲಾದ ಸರ್ಕಾರದ ಆದೇಶದಂತೆ ಈ ಕೆಳಕಂಡ ಸೇರ್ಪಡೆ ಮತ್ತು ಬದಲಾವಣೆ ಮಾಡಿ ಆದೇಶಿಸಿದೆ.

ಕೇವಲ ಈ ಕೆಳಕಂಡ ರಾಜ್ಯ ಸರ್ಕಾರದ ಕಛೇರಿಗಳು ಹಾಗೂ ಸ್ವಾಯತ್ತ ಸಂಸ್ದೆಗಳು, ಕಾರ್ಪೋರೇಷನ್ ಗಳು ಮತ್ತು ಇತರ ಸಂಸ್ದೆಗಳು(ಕಂಟೈನ್ಮೆಂಟ್ ವ್ಯಾಪ್ತಿಯ ಹೊರಗಡೆ) ಕಾರ್ಯನಿರ್ವಹಿಸಲು ಅನುಮತಿಸಲಾಗಿರುತ್ತದೆ. ಆರೋಗ್ಯ, ವೈದ್ಯಕೀಯ ಶಿಕ್ಷಣ, ಪೊಲೀಸ್, ಗೃಹ ರಕ್ಷಕದಳ, ಬಂಧಿಖಾನೆ, ನಾಗರೀಕ ರಕ್ಷಣೆ, ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳು, ವಿಪತ್ತು ನಿರ್ವಹಣೆ, ಕಂದಾಯ, ಸಾರಿಗೆ , ಕಾರ್ಮಿಕ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಕೇಂದ್ರ.

ಸರ್ಕಾರದ ಈ ಕೆಳತಿಳಿಸಿರುವ ಕಛೇರಿಗಳು, ಇದರ ಸ್ವಾಯತ್ತ ಸಂಸ್ದೆಗಳು / ಅಧೀನ ಕಛೇರಿಗಳು ಹಾಗೂ ಸಾರ್ವಜನಿಕ ನಿಗಮಗಳು ಕಂಟೈನ್ಮೆಂಟ್ ವ್ಯಾಪ್ತಿಯ ಹೊರಗೆ ಕಾರ್ಯಾಚರಿಸುವುದು. ರಕ್ಷಣೆ, ರಕ್ಷಣಾ ಘಟಕದ ಸಾರ್ವಜನಿಕ ಉದ್ಯಮಗಳು, ಕೇಂದ್ರ ಶಸ್ತ್ರಾಸ್ತ್ರ ಪೋಲಿಸ್ ಪಡೆಗಳು ಮತ್ತು ದೂರ ಸಂಪರ್ಕ ಸೇವೆಗಳು, ರಕ್ಷಣಾ ಘಟಕದಲ್ಲಿ ಶೇಕಡ 50ರಷ್ಟು ಸಿಬ್ಬಂದಿಗಳನ್ನೊಳಗೊಂಡು ಕರ್ತವ್ಯ ನಿರ್ವಹಿಸಲು ಅನುಮತಿಸಿದೆ.

ಬ್ಯಾಂಕುಗಳು, ಭಾರತೀಯ ರಿಸರ್ವ್ ಬ್ಯಾಂಕ್, ಭಾರತೀಯ ರಿಸರ್ವ್ ಬ್ಯಾಂಕ್ ನಿಯಂತ್ರಿತ ಹಣಕಾಸು ಮಾರುಕಟ್ಟೆಗಳು ಮತ್ತು ಸೂಕ್ಷ್ಮಹಣಕಾಸು ಸಂಸ್ದೆಗಳು, ಎನ್.ಪಿ.ಸಿ.ಎಲ್., ಸಿ.ಸಿ.ಐ.ಎಲ್ ನಂತಹ ಸಂಸ್ದೆಗಳು ,ಪಾವತಿ ವ್ಯವಸ್ಥೆ ನಿರ್ವಾಹಕರು ಮತ್ತು ಸ್ವತಂತ್ರ ಪ್ರಾಥಮಿಕ ವಿತರಕರು ಕನಿ ಸಿಬ್ಬಂದಿಗಳನ್ನು ಒಳಗೊಂಡು ಕಾರ್ಯಾಚರಿಸುವುದು. ಬ್ಯಾಂಕ್ ಗಳಲ್ಲಿ ಶೇಕಡ 50ರಷ್ಟು ಸಿಬ್ಬಂದಿಗಳನ್ನೊಳಗೊಂಡು ಕರ್ತವ್ಯ ನಿರ್ವಹಿಸಲು ಅನುಮತಿಸಿದೆ. ಈ ಕೆಳಕಂಡ ಚಟುವಟಿಕೆಗಳನ್ನು ಹೊರತುಪಡಿಸಿ, ಉಳಿದಂತೆ ವ್ಯಕ್ತಿಗಳ ಸಂಚಾರವನ್ನು ಕಟ್ಟುನಿಟ್ಟಾಗಿ ನಿಷಧಿಸಲಾಗಿದೆ.

ರೋಗಿಗಳು ಮತ್ತು ಅವರ ಪರಿಚಾರಕರಿಗೆ ತುರ್ತು ಸಂದರ್ಭಗಳಲ್ಲಿ ಸಂಚರಿಸಲು ಅನುಮತಿ ನೀಡಲಾಗಿದೆ. ಅಔಗಿIಆ ೧೯ ವ್ಯಾಕ್ಸಿನೇಷನ್ ಗೆ ಸಂಬಂಧಿಸಿದ ಸಂಚಾರವನ್ನು, ವ್ಯಾಕ್ಸಿನೇಷನ್ ಗಾಗಿ ಮುಂಗಡವಾಗಿ ಕಾಯ್ದಿರಿಸಿದ ಹಾಗೂ ಈ ಬಗ್ಗೆ SMS ನೊಂದಿಗೆ ಖಚಿತತೆ ಹೊಂದಿರುವವರಿಗೆ ಮಾತ್ರ ಅನುಮತಿಸಿದೆ.ಪರೀಕ್ಷೆಯ ಉದ್ದೇಶಕ್ಕಾಗಿ ಕನಿಷ ಪುರಾವೆಗಳೊಂದಿಗೆ ಸಂಚರಿಸಲು ಅನುಮತಿ ನೀಡಲಾಗಿದೆ.

ಈ ಕೆಳಗಿನ ವಾಣಿಜ್ಯ ಮತ್ತು ಖಾಸಗಿ ಸಂಸ್ಥೆಗಳ ಕಾರ್ಯನಿರ್ವಹಣೆಯನ್ನು ಅನುಮತಿಸಲಾಗಿದೆ.
ಬ್ಯಾಂಕುಗಳು ಮತ್ತು ವಿಮಾ ಕಚೇರಿಗಳಲ್ಲಿ ಶೇಕಡ 50ರಷ್ಟು ಸಿಬ್ಬಂದಿಗಳನ್ನೊಳಗೊಂಡು ಕರ್ತವ್ಯ ನಿರ್ವಹಿಸಲು ಮತ್ತು ಎಟಿಎಂ ಗಳನ್ನು ಕಾರ್ಯಾಚರಿಸಲು ಅನುಮತಿಸಿದೆ.ಅಗತ್ಯ ವಸ್ತುಗಳನ್ನು ಇ-ಕಾಮರ್ಸ್ ಮತ್ತು ಹೋಮ್ ಡೆಲಿವರಿ ಮೂಲಕ ಸರಬರಾಜು ಮಾಡಲು ಅನುಮತಿಸಲಾಗಿದೆ.

ಸೇರ್ಪಡೆ: ಕೇಂದ್ರ ಸರ್ಕಾರದ ಈ ಕೆಳತಿಳಿಸಿರುವ ಕಛೇರಿಗಳು, ಇದರ ಸ್ವಾಯತ್ತ ಸಂಸ್ದೆಗಳು / ಅಧೀನ ಕಛೇರಿಗಳು ಹಾಗೂ ಸಾರ್ವಜನಿಕ ನಿಗಮಗಳು ಕಂಟೈನ್ಮೆಂಟ್ ವ್ಯಾಪ್ತಿಯ ಹೊರಗೆ ಕಾರ್ಯಾಚರಿಸುವುದು: ರಾಜತಾಂತ್ರಿಕ ಮಿಷನ್ ಮತ್ತು ಸಂಬಂಧಿತ ಕಚೇರಿಗಳು ಸಾಮಾಜಿಕ ವಲಯ (ಕೆಳಕಂಡ ಚಟುವಟಿಕೆಗಳು ಕಂಟೈನ್ಮೆಂಟ್ ವಲಯದ ಹೊರಗಡೆ ಅನುಮತಿಸಲಾಗಿದೆ) ಕೋವಿಡ್ ಸಮುಚಿತ ವರ್ತನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ವ್ಯಾಪ್ತಿಗೊಳಪಟ್ಟು ಯಾವುದೇ ಸ್ಥಳದಲ್ಲಿ 40 ಕ್ಕಿಂತ ಹೆಚ್ಚು ಕಾರ್ಮಿಕರನ್ನು ನಿಯೋಜನೆ ಮಾಡದೆ MNREGA ಕೆಲಸಗಳನ್ನು ನಿರ್ವಹಿಸಲು ಅನುಮತಿ ನೀಡಲಾಗಿದೆ. ಮೇಲಿನ ಆದೇಶಗಳನ್ನು ಪಾಲಿಸದೇ ಇದ್ದವರ ಮೇಲೆ ಪೋಲಿಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳ ಪ್ರಕಾರ ನಿಯಮಾನುಸಾರ ಕಠಿಣ ಕ್ರಮಕೈಗೊಳ್ಳ ಲಾಗುವುದು. ಈ ಆದೇಶವು ಸರಕಾರದಿಂದ ನಡೆಸಲ್ಪಡುವ ಯಾವುದೇ ಕಾರ್ಯಕ್ರಮ, ಸಭೆಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!