ಮಂಗಳೂರು: 29 ಗರ್ಭಿಣಿಯರು, ಎರಡು ಶಿಶುಗೆ ಕೋವಿಡ್ ಪಾಸಿಟಿವ್!
ಮಂಗಳೂರು: ದಕ್ಷಿಣ ಕನ್ನಡ ಆರೋಗ್ಯ ಇಲಾಖೆ ಮಂಗಳೂರಿನ ಸರ್ಕಾರಿ ಲೇಡಿ ಗೊಸ್ಚೆನ್ ಆಸ್ಪತ್ರೆಯಲ್ಲಿ ಹೆಚ್ಚುವರಿ 14 ಬೆಡ್ ಗಳ ವಾರ್ಡ್ ಅನ್ನು ಗರ್ಭಿಣಿಯರು ಮತ್ತು ಕೋವಿಡ್ ಪಾಸಿಟಿವ್ ಬಂದಿರುವ ಹೊಸ ತಾಯಂದಿರಿಗಾಗಿ ನಿಗದಿಪಡಿಸಿದೆ.
ಕಳೆದ ಒಂದು ವಾರದಲ್ಲಿ, 25 ಗರ್ಭಿಣಿಯರು ಮತ್ತು ಹೊಸ ತಾಯಂದಿರಿಗೆ ಕೊರೋನಾ ವಕ್ಕರಿಸಿದೆ. ಅವರಲ್ಲಿ ಹೆಚ್ಚಿನವರಿಗೆ ಕೊರೋನಾ ಲಕ್ಷಣಗಳಿಲ್ಲ. ಅಲ್ಲದೆ ಎರಡು ನವಜಾತ ಶಿಶುಗಳಿಗೂ ಕೊರೋನಾ ದೃಢಪಟ್ಟಿದ್ದು ಈ ರೋಗಿಗಳ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ವಾಟ್ಸಾಪ್ ಗ್ರೂಪ್ ಅನ್ನು ರಚಿಸಲಾಗಿದೆ ಎಂದು ಲೇಡಿ ಗೊಸ್ಚೆನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಪ್ರಸಾದ್ ಎಂ ಆರ್ ಹೇಳಿದರು.
ತಾಲ್ಲೂಕು ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳು ಕಿರಿಯ ಆರೋಗ್ಯ ಸಹಾಯಕರ ಮೂಲಕ ಈ ರೋಗಿಗಳನ್ನು ಪರಿಶೀಲಿಸಲಾಗುತ್ತದೆ. ಒಮ್ಮೆ ರೋಗಿಗಳು ಡಿಸ್ಚಾರ್ಜ್ ಆದ ನಂತರ ಅವರು ಆರೋಗ್ಯ ಇಲಾಖೆಯ ಮೇಲ್ವಿಚಾರಣೆಯಿಂದ ಹೊರಗುಳಿಯುವುದರಿಂದ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನಾವು ‘ತಾಯಿ ಕಾರ್ಡ್’ ಅನ್ನು ಉಲ್ಲೇಖಿಸಿ ಅವರ ವಿವರಗಳನ್ನು ಸಂಗ್ರಹಿಸಿದ್ದೇವು. ಪ್ರಕರಣಗಳು ಹೆಚ್ಚಾಗಲು ಪ್ರಾರಂಭಿಸಿದಾಗ ನಾವು ಏಪ್ರಿಲ್‌ನಲ್ಲಿ ವಾಟ್ಸಾಪ್ ಗುಂಪನ್ನು ಪ್ರಾರಂಭಿಸಿದ್ದೇವೆ ಎಂದು ಅವರು ಹೇಳಿದರು.
‘ಕೋವಿಡ್ ರೋಗಿಗಳಿಗೆ ಪ್ರತ್ಯೇಕ ಕೊಠಡಿ ಮತ್ತು ಆಪರೇಷನ್ ಥಿಯೇಟರ್ ಇದೆ. ಈಗ ಗರ್ಭಿಣಿ ಮಹಿಳೆಯರಿಗೆ 25 ಬೆಡ್ ಗಳಿವೆ. ಕೋವಿಡ್-ಶಂಕಿತ ರೋಗಿಗಳಿಗೆ ನಾವು ಇನ್ನೂ 14 ಬೆಡ್ ಗಳನ್ನು ಸೇರಿಸಿದ್ದೇವೆ’ ಎಂದರು. ಮೇ 1 ಮತ್ತು 12ರ ನಡುವೆ 200ಕ್ಕೂ ಮಹಿಳೆಯರನ್ನು ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿದ್ದು ಅವರ ಪೈಕಿ 29 ಗರ್ಭಿಣಿಯರು ಮತ್ತು ಹೊಸ ತಾಯಂದಿರಿಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದರು.