ಅಂದಿನ ಶಾಸಕ ಕಾಣೆ ಮೀನು ಹಾಕಿ ಊಟ ಮಾಡಿ ವಿಶ್ರಾಂತಿ- ಇಂದಿನ ಈ ಶಾಸಕರ ಹಡಿಲು ಭೂಮಿಯ ಕೃಷಿ: ಬಿರ್ತಿ ರಾಜೇಶ ಶೆಟ್ಟಿ

ರಮೇಶ್ ಕಾಂಚನರೇ, ಶಾಸಕರು ಮಾಡುತ್ತಿರುವ  ಹಡಿಲು ಭೂಮಿಯ ಕೃಷಿ ಬಗ್ಗೆ ನಿಮ್ಮ ಒಂದು ಹೇಳಿಕೆಯನ್ನು ನೋಡಿದೆ. ನಾನು ನಿಮ್ಮ ಸ್ಥಾನದಲ್ಲಿದ್ದರೆ ನಾನು ಕೂಡ ಇದೇ ಅಭಿಪ್ರಾಯವನ್ನು ಮಂಡಿಸುತ್ತಿದ್ದೆ ಯಾಕೆಂದರೆ ಕಾಂಗ್ರೆಸ್ನಲ್ಲಿ ನಿಮ್ಮ ನಾಯಕರು ಕೆಲಸ ಮಾಡುವಂತ ಸಮಯ ಬಹಳಷ್ಟು ಕಡಿಮೆ, ಆದರೆ ಬಿಜೆಪಿಗೆ ಬಂದ ಮೇಲೆ ಗೊತ್ತಾಯಿತು ರಘುಪತಿ ಭಟ್ಟರ ಕಾರ್ಯವೈಖರಿ ಏನೆಂದು.

ಕೆಲಸ ಮಾಡುವ ರೀತಿ ಮತ್ತು ಕಾರ್ಯಕರ್ತರ ಮೇಲಿನ ಪ್ರೀತಿ ಏನೆಂದು, ಶಾಸಕರು ಬೆಳಗ್ಗಿನ ಹೊತ್ತು ಕೋವಿಡ್ ಗೆ ಸಂಬಂಧಪಟ್ಟ ತಮ್ಮ ಎಲ್ಲಾ ಜವಾಬ್ದಾರಿಗಳನ್ನು ಪೂರೈಸಿಕೊಂಡು ಅವರಿಗೆ ಸಂಬಂಧಪಟ್ಟಂತ ಎಲ್ಲಾ ಆಸ್ಪತ್ರೆಗಳಲ್ಲಿ ರೋಗಿಗಳ ಬಗ್ಗೆ ಮತ್ತು ತಪಾಸಣೆಗಳ ಬಗ್ಗೆ ವಿಚಾರಿಸಿಕೊಂಡು ಉಳಿದಂತೆ ತಮ್ಮ ಬಿಡುವಿನ ಸಮಯವನ್ನು ಒಂದು ಪುಣ್ಯ ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿದ್ದಾರೆ. 

ಅದಲ್ಲದಿದ್ದರೆ ಇಂತಹ ಸಂದರ್ಭದಲ್ಲಿ ಇತರ ಶಾಸಕರoತೆ ತಾವು ಕೂಡ ಮನೆಯಲ್ಲಿ ಸುಮ್ಮನೆ ಮಲಗ ಬಹುದಿತ್ತು. ಬಿಟ್ಟರೆ ಯಾವುದೇ,ಸಭೆ ಸಮಾರಂಭ, ಅಥವಾ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸುವಂತಹ ಅವಕಾಶಗಳು ಇರುವುದಿಲ್ಲ. ಶಾಸಕರ ಈ ನಿರ್ಧಾರದಿಂದ ಕ್ಷೇತ್ರದಲ್ಲಿ ಬಾಕಿ ಇರುವ ಅದೆಷ್ಟೋ ತೋಡುಗಳನ್ನು ಹೂಳೆತ್ತುವ ಕೆಲಸ ಮತ್ತು ನೀರು ಸರಾಗವಾಗಿ ಹರಿದು ಹೋಗುವಂತ ವ್ಯವಸ್ಥೆಗಳು ಮಳೆಗಾಲದಲ್ಲಿ ನೆರೆಯ ಸಮಸ್ಯೆ ಗಳಿಗೆ ಪರಿಹಾರ  ಶಾಸಕರು ಮಾಡಿಕೊಟ್ಟಿದ್ದಾರೆ. ಅದಲ್ಲದೆ ಭೂಮಿ ತಾಯಿಗೆ ಹಸಿರು ಸೀರೆಯನ್ನು ಉಡಿಸಿ ಕಂಗೊಳಿಸುವಂತೆ ಮಾಡುವ ಪುಣ್ಯ ಕೆಲಸಕ್ಕೆ ಕೈ ಹಾಕಿದ್ದಾರೆ. ಒಬ್ಬ ಶಾಸಕನಾಗಿ ಇಂತಹ ಪರಿಸ್ಥಿತಿಯಲ್ಲಿ ಜನರ ಅರೋಗ್ಯದ ಚಿಕಿತ್ಸೆ ಬಗ್ಗೆ ಸಂಭಂದ ಪಟ್ಟ ಎಲ್ಲಾ ಸಚಿವರೊಂದಿಗೆ, ಅಧಿಕಾರಿಗಳೊಂದಿಗೆ ಒತ್ತಾಯ, ಚರ್ಚೆ ಮಾಡಬಹುದೇ ವಿನಃ ಅದರಿಂದ ಹೆಚ್ಚು ಇನ್ನೇನು ಮಾಡಲು ಸಾಧ್ಯ ಹೇಳಿ.

ಯಾಕೆಂದರೆ ಇದು (ವಿಶ್ವ) ದೇಶದ ಸಮಸ್ಯೆ. ಇಂತಹ ಪುಣ್ಯ ಕೆಲಸದಲ್ಲಿ ನಾವು ತೊಡಗಿಸಿಕೊಂಡರೆ ನಮಗೂ ಪುಣ್ಯ ಸಿಗುತ್ತದೆ ಆಗದಿದ್ದರೆ ಸುಮ್ಮನೆ ಕುಳಿತರೂ ಸ್ವಲ್ಪ ಪುಣ್ಯಆದರೂ ಸಿಗಬಹುದು. ಬಿಟ್ಟರೆ ವ್ರತಾ ಟೀಕೆ ಮಾಡಿ ಶುದ್ಧವಾಗಿರುವ ಈ ಕೆಲಸಕ್ಕೆ  ರಾಜಕೀಯ ಬಣ್ಣ ಹಾಕಿ ಪಾಪ ಕಟ್ಟಿಕೊಳ್ಳಬೇಡಿ. ಯಾಕೆಂದರೆ ಮೊದಲಿನಿಂದಲೂ ಶಾಸಕರು ಹೇಳಿದ ಒಂದೇ ಮಾತು ಇದು ಪಕ್ಷಾತೀತ ಪವಿತ್ರವಾದ ಕೆಲಸ ಎಂದು. ಬೇಕಾದರೆ ನಿಮ್ಮ ಪಕ್ಷದ ಅಧ್ಯಕ್ಷರು ಎಲ್ಲಾದರೂ ಇದ್ದರೆ ವಿಚಾರಿಸಿಕೊಳ್ಳಿ.

ಅಂದಿನ ನಮ್ಮ ನಾಯಕರುಗಳು ಕಾಣೆ ಮೀನು ಹಾಕಿ ಊಟ ಮಾಡಿ ವಿಶ್ರಾಂತಿ ಪಡೆಯುವ ಸಮಯವನ್ನು ಇಂದಿನ ಈ ಶಾಸಕರು ಇದಕ್ಕೆ ಉಪಯೋಗಿಸುತ್ತಿದ್ದಾರೆ ಅಷ್ಟೇ ಮಿತ್ರ.  ಏಕೆಂದರೆ ಎರಡೂ ಪಕ್ಷದಲ್ಲಿದ್ದು ಅನುಭವಿಸಿ ಬಂದ ಅನುಭವದ ಮಾತು.

ಬಿರ್ತಿ ರಾಜೇಶ ಶೆಟ್ಟಿ ಬ್ರಹ್ಮಾವರ

2 thoughts on “ಅಂದಿನ ಶಾಸಕ ಕಾಣೆ ಮೀನು ಹಾಕಿ ಊಟ ಮಾಡಿ ವಿಶ್ರಾಂತಿ- ಇಂದಿನ ಈ ಶಾಸಕರ ಹಡಿಲು ಭೂಮಿಯ ಕೃಷಿ: ಬಿರ್ತಿ ರಾಜೇಶ ಶೆಟ್ಟಿ

  1. ಅಸಹಾಯಕ ಸ್ಥಿತಿಯಲ್ಲೂ ತನ್ನ ಸ್ವಂತ ನೆಲೆಯಲ್ಲಿ mla ಯವರು ಈ ಪೆಂಡಮಿಕ್ ಮತ್ತು ಜನರ ಆರ್ಥಿಕತೆಯ ಬಗ್ಗೆ ಧ್ವನಿಎತ್ತಿದ ಮತ್ತು ತನ್ನ ಹೇಳಿಕೆಯನ್ನು ಬಹಿರಂಗವಾಗಿ ನೀಡಿದ ಶಾಸಕರಲ್ಲಿ ರಘುಪತಿ ಭಟ್ ಎಂದು ಹೇಳಿದರೆ ಎರಡು ಮಾತಿಲ್ಲ, ಯಾಕೆಂದರೆ ಈ ಸರಕಾರದ ಬಗ್ಗೆ ಕೆಲವು ಲೋಪದ ಬಗ್ಗೆ ಟೀಕಿಸುವುದು ತನ್ನ ಮುಂದಿನ ಅಸ್ತಿತ್ವದ ಪ್ರಶ್ನೆಯು ಹೌದು. ತ್ವರಿತವಾಗಿ ಅಂಗಡಿ ಬಾಗಿಲುಗಳನ್ನು ಮುಚ್ಚಲು ತಿಳಿಸಿ ಸಿಎಂ ಆದೇಶ ಮಾಡಿದಾಗ ತಾನು ನೇರವಾಗಿ ಅಧಿಕಾರಿಗಳಿಗೆ ನೇರವಾಗಿ ಕರೆ ಮಾಡಿದ್ದು ಜನರಿಗೆ ಕಷ್ಟವಾಗುತ್ತದೆ ಇದರಿಂದ ಎಂದು ಯಾವುದೇ ದಿಢೀರ್ ನಿರ್ಧಾರ ಬಗ್ಗೆ ವೈಯುಕ್ತಿಕವಾಗಿ ಸರಕಾರದ ಆದೇಶದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ವ್ಯಕ್ತಿ ಇನ್ನು ಹಡಿಲು ಭೂಮಿಯ ಬಗ್ಗೆ ತೆಗೆದು ಕೊಂಡ ಕ್ರಮವು ಪ್ರಕೃತಿಯ ಹಿತ ದ್ರಷ್ಠಿಯ ಸರಿಯಾದ ನಿರ್ಧಾರವಾಗಿದೆಎಂದು ನನ್ನ ವೈಯುಕ್ತಿಕ ಅಭಿಪ್ರಾಯ ಇದ್ರಲ್ಲಿ ಎರಡು ಮಾತಿಲ್ಲ .

  2. Andhina shashakaru madida abiyruddiya karyagalu indhigu shashvathavagi namma nimmellara mundhide,avara mundhalochane bada janara kalaji yellavu adhbutha.
    sathyadha hadhiyalli nadeda pramod madvarajarige pramod madvarajare saati…yaaro yeno helida kudale adhannu nambuvastu udupi ya prajnavantha janathe murkaralla✌

Leave a Reply

Your email address will not be published. Required fields are marked *

error: Content is protected !!