ಖಾಸಗಿ ಸುದ್ದಿ ವಾಹಿನಿಯ ಕ್ಯಾಮೆರಾ ಮ್ಯಾನ್ ಕೋವಿಡ್ ಗೆ ಬಲಿ
ಚಿತ್ರದುರ್ಗ: ಮಹಾಮಾರಿ ಕೋವಿಡ್ ಗೆ ಖಾಸಗಿ ಸುದ್ದಿ ವಾಹಿನಿಯ ಕ್ಯಾಮೆರಾ ಮ್ಯಾನ್ ಬಲಿಯಾಗಿದ್ದಾರೆ.
ಬಸವರಾಜ್ ಕೋಟಿ ಮೃತ ಕ್ಯಾಮೆರಾ ಮ್ಯಾನ್. ಕಳೆದ 10 ದಿನಗಳ ಹಿಂದೆ ಬಸವರಾಜ್ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಅಂದಿನಿಂದ ಇವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.