ಕಾಪು: ಜನತೆ ತಾಲೂಕು ಆಡಳಿತದೊಂದಿಗೆ ಸಹಕರಿಸುವಂತೆ ಲಾಲಾಜಿ ಮನವಿ

ಕಾಪು: ಶಾಸಕರ ಕಚೇರಿಯಲ್ಲಿ ಕಾಪು ಕ್ಷೇತ್ರದ ಪೊಲೀಸ್ ಅಧಿಕಾರಿಗಳ ಜೊತೆ ಶಾಸಕ ಲಾಲಾಜಿ ಆರ್ ಮೆಂಡನ್ ಸಭೆ ನಡೆಸಿದರು. ರಾಜ್ಯದಲ್ಲಿ ಕೋವಿಡ್ 19 ನಿಮ್ಮಿತ್ತ ಲಾಕ್ ಡೌನ್ ಜಾರಿಯಲಿದ್ದು ಈ ಕುರಿತು ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಅಗತ್ಯ ವಸ್ತು ಖರೀದಿಸುವವರಿಗೆ, ಹಾಲು ಹಾಕುವವರಿಗೆ, ಕೃಷಿ ಉತ್ಪನ್ನಗಳ ಮಾರಾಟಗಾರರಿಗೆ, ಮೀನು ಮಾರಾಟಕ್ಕೆ, ಮಲ್ಲಿಗೆ ಮಾರಾಟಕ್ಕೆ, ಪಡಿತರ ತೆಗೆದುಕೊಂಡು ಹೋಗುವವರಿಗೆ 10 ಒಳಗೆ ಕಾರ್ಯನಿರ್ವಹಿಸುವಂತೆ ಹಾಗೂ ಜನ ಗುಂಪು ಗೂಡದಂತೆ ನೋಡಿ ಕೊಳ್ಳುವಂತೆ ಶಾಸಕರು ಸೂಚಿಸಿದರು.

ಕಾಪು ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಕಿಂತರ ಸಂಖ್ಯೆ ಹೆಚ್ಚುತಿದ್ದು ಮರಣ ಪ್ರಮಾಣವು ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಶಾಸಕರು ಅನಗತ್ಯವಾಗಿ ಓಡಾಡುವರಿಗೆ ಹಾಗೂ 10 ಗಂಟೆನಂತರ ಅನಿವಾರ್ಯ ಕಾರಣಗಳನ್ನು ಬಿಟ್ಟು ರಸ್ತೆಗೆ ಬರುವವರ ವಿರುದ್ದ ಕ್ರಮ ಕೈಗೊಳ್ಳಬೇಕಾಗಿ ಸೂಚಿಸಿದರು.

ಕಾಪು ಜನತೆಯೂ ಆಡಳಿತ ವರ್ಗದವರೊಂದಿಗೆ ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಸಹಕರಿಸಬೇಕೆಂದು ಮನವಿ ಮಾಡಿದರು. ಮದುವೆಗಳಿಗೆ 40 ಜನ ಮೀರದಂತೆ  ರಾಜ್ಯ ಸರಕಾರದ ಸೂಚನೆಯಂತೆ ಷರತ್ತಿನ ಮೇಲೆ ಅನುಮತಿ ನೀಡುವಂತೆ ಶಾಸಕರು ಸೂಚಿಸಿದರು. ಈ ಸಂದರ್ಭದಲ್ಲಿ ಕಾಪು ವೃತ ನಿರೀಕ್ಷಕರು ಪ್ರಕಾಶ್, ಕಾಪು ಎಸ್ಐ ರಾಘವೇಂದ್ರ, ಶಿರ್ವ ಎಸ್ಐ ಶ್ರೀಶೈಲ ಮುರುಗೋಡ್, ಶಿರ್ವ ಕ್ರೈಂ ಎಸ್ಐ ವೇದಾವತಿ, ಪಡುಬಿದ್ರೆ ಎಸ್ ಐ ದಿಲೀಪ್ ಕುಮಾರ್, ಪಡುಬಿದ್ರೆ ಕ್ರೈಂ ಎಸ್. ಐ ಜಯ, ಹಿರಿಯಡ್ಕ ಎಸ್ಐ ಪುಷ್ಪ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!