ಅಲ್ಪಸಂಖ್ಯಾತ ಸಮುದಾಯದವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವ ಬಗ್ಗೆ
ಉಡುಪಿ ಮೇ 11,(ಉಡುಪಿಟೈಮ್ಸ್ ವರದಿ): ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹಬ್ಬುತ್ತಿರುವ
ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ವಾಸಿಸುತ್ತಿರುವ ಅಲ್ಪಸಂಖ್ಯಾತರ ಸಮುದಾಯದವರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್,
ಬೌದ್ಧ ಮತ್ತು ಪಾರ್ಸಿ ಸಮುದಾಯದ ಜನಾಂಗದವರು, ತಮ್ಮ ಪ್ರದೇಶಗಳ ಹತ್ತಿರದ ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ
ಕೇಂದ್ರ ಅಥವಾ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್-19 ಟೆಸ್ಟಿಂಗ್ ಮಾಡಿಸುವ ಪ್ರಯೋಜನವನ್ನು
ಪಡೆದುಕೊಳ್ಳಬಹುದಾಗಿದೆ.
ಜಿಲ್ಲೆಯ ಆರೋಗ್ಯ ಕೇಂದ್ರಗಳ ವಿವರ ಹಾಗೂ ಕೋವಿಡ್-19 ಟೆಸ್ಟಿಂಗ್ ಮಾಡಿಸುವ ಕುರಿತು ಹೆಚ್ಚಿನ ಮಾಹಿತಿಗಾಗಿ ,
ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಮೌಲಾನಾ ಆಜಾದ್ ಭವನ, ಪಶು ಚಿಕಿತ್ಸಾಲಯದ ಹತ್ತಿರ, ಅಲೆವೂರು ರಸ್ತೆ, ಮಣಿಪಾಲ,
ಉಡುಪಿ, ದೂರವಾಣಿ: 0820-2574596. ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ. ತಾಲೂಕು ಕಂದಾಯ ನೌಕರರ ಕಟ್ಟಡ, ಹಳೆ
ತಹಶಿಲ್ದಾರರ ಕಛೇರಿ ಹಿಂಭಾಗ, ಹೊಸ ಬಸ್ ಸ್ಟಾಂಡ್, ಕುಂದಾಪುರ, ದೂರವಾಣಿ: 08254-230370, ಅಲ್ಪಸಂಖ್ಯಾತರ
ಮಾಹಿತಿ ಕೇಂದ್ರ, ನೆಲ ಮಹಡಿ, ಮಿನಿ ವಿಧಾನ ಸೌಧ, ತಾಲೂಕು ಕಛೇರಿ ಕಂಪೌOಡ್, ಕಾರ್ಕಳ, ದೂರವಾಣಿ: 08258-
231101 ಇಲ್ಲಿ ಸಂಪರ್ಕಿಸುವOತೆ , ಜಿಲ್ಲಾ ಅಧಿಕಾರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಉಡುಪಿ ಅವರ ಪ್ರಕಟಣೆ ತಿಳಿಸಿದೆ.