ಉಡುಪಿ: ಬಿಪಿ ಮಾತ್ರೆ ನೀಡದ ಮೆಡಿಕಲ್ ಶಾಪ್ ಮಾಲಕನಿಗೆ ತಂದೆ ಮಗನಿಂದ ಹಲ್ಲೆ

ಉಡುಪಿ ಮೇ. 11(ಉಡುಪಿ ಟೈಮ್ಸ್ ವರದಿ): ಔಷಧಿ ಅಂಗಡಿ ಮುಚ್ಚಿ ಮನೆಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ. 

ಈ ಬಗ್ಗೆ ಪುಷ್ಪರಾಜ್ ಶೆಟ್ಟಿ ಎಂಬವರು ದೂರು ನೀಡಿದ್ದು, ಇವರು ಪುತ್ತೂರು ಗ್ರಾಮದ ಕೊಡಂಕೂರಿನಲ್ಲಿ ಶ್ರೀಸಾಯಿ ಮೆಡಿಕಲ್ ಶಾಫ್‌ ನಡೆಸಿಕೊಂಡಿದ್ದು, ಮೇ.10 ರಂದು, ರಾತ್ರಿ ಸರಕಾರಿ ಆದೇಶದಂತೆ  ತನ್ನ ಮೆಡಿಕಲ್ ಶಾಫ್‌ನ್ನು ಮುಚ್ಚಿ ಹೊರಡುವಾಗ   ಹರೀಶ್ ಹಾಗೂ ಆತನ ಮಗನು ಮೆಡಿಕಲ್ ಬಳಿ ಬಂದು ಪುಷ್ಪರಾಜ್ ಶೆಟ್ಟಿ ಅವರನ್ನು ತಡೆದು ನಿಲ್ಲಿಸಿ ಬಿ.ಪಿ ಖಾಯಿಲೆಗೆ ಮೆಡಿಸಿನ್ ಕೊಡುವಂತೆ ಒತ್ತಾಯಿಸಿದರು.

ಈ ವೇಳೆ ಬೆಳಿಗ್ಗೆ ಕೊಡುವುದಾಗಿ ತಿಳಿಸಿದಾಗ, ಮಾತಿಗೆ ಮಾತು ಬೆಳೆದು ಹರೀಶನು ಕೈಯಲ್ಲಿದ್ದ ಕೀ ಬಂಚ್ ನಿಂದ ಹಾಗೂ ಅವರ ಮಗ ಕೈಯಿಂದ ಪುಷ್ಪರಾಜ್ ಅವರಿಗೆ ಹೊಡೆದಿದ್ದಾರೆ. ಪರಿಣಾಮ ಪುಷ್ಪರಾಜ್ ಅವರ ಮುಖಕ್ಕೆ ಗಾಯವಾಗಿದೆ. ಅಲ್ಲದೆ ಪುಷ್ಪರಾಜ್ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಾಗಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

1 thought on “ಉಡುಪಿ: ಬಿಪಿ ಮಾತ್ರೆ ನೀಡದ ಮೆಡಿಕಲ್ ಶಾಪ್ ಮಾಲಕನಿಗೆ ತಂದೆ ಮಗನಿಂದ ಹಲ್ಲೆ

Leave a Reply

Your email address will not be published. Required fields are marked *

error: Content is protected !!