ಕುಕ್ಕಿಕಟ್ಟೆ: ವಿದ್ಯಾರ್ಥಿನಿ ನಿಲಯದ ವಾರ್ಡನ್ ನಿಧನ
ಉಡುಪಿ ಮೇ.11(ಉಡುಪಿ ಟೈಮ್ಸ್ ವರದಿ): ಅನಾರೋಗ್ಯದಿಂದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಉಡುಪಿಯಲ್ಲಿ ನಡೆದಿದೆ.
ಕುಕ್ಕಿಕಟ್ಟೆ ವಿದ್ಯಾರ್ಥಿನಿ ನಿಲಯದ ಉದ್ಯೋಗಿಯಾಗಿದ್ದ ಸರೋಜ ಮೃತಪಟ್ಟವರು. ಇವರು ಒಳಕಾಡು ಶಾಲೆಯಲ್ಲಿ ಅಂಗನವಾಡಿ ಶಿಕ್ಷಕಿ ಆಗಿಯೂ ಕೆಲಸ ಮಾಡಿದ್ದರು. ಇವರ ಸಹೋದರಿ ಓರ್ವರು ಸಂಪರ್ಕಕ್ಕೆ ಸಿಕ್ಕಿದ್ದರು. ಅದರೆ ಅನಿವಾರ್ಯ ಕಾರಣಗಳಿಂದ ಬರಲಾಗದ ಕಾರಣ ಸರೋಜಾ ಅವರ ಮೃತದೇಹವನ್ನು ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಯ ಶೈತ್ಯಾಗಾರದಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.