ಉಡುಪಿ: ಲಸಿಕಾ ಕೇಂದ್ರಕ್ಕೆ ಬರುವವರು ಈ ಸೂಚನೆ ಕಡ್ಡಾಯವಾಗಿ ಪಾಲಿಸತಕ್ಕದ್ದು

ಉಡುಪಿ ಮೇ.10(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಕೋವಿಡ್ ಲಸಿಕೆ ಲಭ್ಯತೆ ಕುರಿತು ಗೊಂದಲಗಳು ಏರ್ಪಟ್ಟಿದೆ. ಇದರಿಂದ ಲಸಿಕಾ ಕೇಂದ್ರ ಗಳಲ್ಲಿ ‌ಅಗತ್ಯಕ್ಕಿಂತ ಹೆಚ್ಚಿನ ಜನರು ಲಸಿಕೆಗಾಗಿ ಕಾದು ಲಸಿಕೆ ಸಿಗದೇ ವಾಪಾಸ್ಸಾಗುತ್ತಿರುವುದು ಕಂಡು ಬಂದಿದೆ.

ಈ ಹಿನ್ನೆಲೆಯಲ್ಲಿ ನಾಳೆ (ಮೇ11) ಜಿಲ್ಲೆಯಲ್ಲಿ ಲಸಿಕೆ ವಿರತರಣೆ ಆರೋಗ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ. ಆ ಮೂಲಕ, ನಾಳೆ ಜಿಲ್ಲಾ ಆಸ್ಪತ್ರೆಯ ಸೈಂಟ್ ಸಿಸಿಲೀಸ್ ಶಾಲೆಯ ಲಸಿಕಾ ಕೇಂದ್ರದಲ್ಲಿ 45 ವರ್ಷ ಮೇಲ್ಪಟ್ಟ ವಯಸ್ಸಿನವರಲ್ಲಿ, ಪ್ರಥಮ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದು 8 ವಾರ ಮೀರಿದವರಿಗೆ ಸುಮಾರು 100 ಡೋಸ್ ಲಸಿಕೆಯನ್ನು ನೀಡಲು ಲಸಿಕಾ ಶಿಬಿರವನ್ನು ಏರ್ಪಡಿಸಲಾಗಿದೆ. 

18 ರಿಂದ 44 ವಯಸ್ಸಿನವರೆಗಿನ ಫಲಾನುಭವಿಗಳಲ್ಲಿ 150 ಜನರಿಗೆ ಆನ್‌ ಲೈನ್ ರಿಜಿಸ್ಟ್ರೇಷನ್ ಮಾಡಿಕೊಂಡು ಜಿಲ್ಲಾ ಆಸ್ಪತ್ರೆಯ ಸೈಂಟ್ ಸಿಸಿಲೀಸ್ ಶಾಲೆಯ ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆಯಲು ಲಸಿಕಾ ಶಿಬಿರವನ್ನು ಏರ್ಪಡಿಸಲಾಗಿದೆ.

ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಮೆಮೋರಿಯಲ್ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉಡುಪಿಯಲ್ಲಿ 18 ರಿಂದ 44 ವರ್ಷದವರಿಗೆ ಕೋವಿಶೀಲ್ಡ್ ಲಸಿಕೆ ಪಡೆಯ 150ಡೋಸ್ ಲಸಿಕೆ ಲಭ್ಯವಿರುತ್ತದೆ.

ಇನ್ನು 18 ರಿಂದ 44 ವಯಸ್ಸಿನವರೆಗಿನ ಫಲಾನುಭವಿಗಳು ಲಸಿಕಾ ಶಿಬಿರಕ್ಕೆ ತೆರಳುವಾಗ ನೋಂದಣಿ ಗೊಂಡಿರುವ ಮೊಬೈಲ್ ಸಂಖ್ಯೆಗೆ ಬಂದಿರುವಂತಹ ವಿಶೇಷ ನೋಂದಣಿ ಸಂಖ್ಯೆ ಇರುವ ಎಸ್ಎಮ್ಎಸ್ ನ್ನು ಪೋಲೀಸರಿಗೆ ತೋರಿಸಿ ಲಸಿಕಾ ಕೇಂದ್ರಕ್ಕೆ ತೆರಳಬಹುದು.

ಹಾಗೂ 18 ರಿಂದ 44 ವಯಸ್ಸಿನವರೆಗಿನ ಫಲಾನುಭವಿಗಳು selfregistration.cowin.gov.in ಅಥವಾ ಆರೋಗ್ಯ ಸೇತು ಆಪ್ ಮೂಲಕ ತಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿ ನೋಂದಣಿ ಮಾಡಬಹುದಾಗಿದೆ. ಲಸಿಕಾ ಕೇಂದ್ರಕ್ಕೆ ಬರುವ ಮುಂಚಿತವಾಗಿ ಲಸಿಕಾ ಕೇಂದ್ರ ಆಯ್ಕೆ ಮಾಡಿರುವ ದೃಢೀಕರಣ ಮಾಹಿತಿ, ಆಧಾರ್ ಕಾರ್ಡ್, Secret Code ಹೊಂದಿರುವ ಮಾಹಿತಿ ಮೊಬೈಲ್‌ನಲ್ಲಿ ಕಡ್ಡಾಯವಾಗಿರಬೇಕು. ಹಾಗೂ ಲಸಿಕಾ ಕೇಂದ್ರಕ್ಕೆ ತೆರಳುವ ಸಂದರ್ಭದಲ್ಲಿ Special Secret Code ನ್ನು ಪೊಲೀಸರಿಗೆ ತೋರಿಸಿ ತೆರಳ ಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!