ಯುವತಿಗೆ ಪ್ರಥಮ ಚಿಕಿತ್ಸೆ ನೀಡಿದ 10ನೇ ತರಗತಿ ವಿದ್ಯಾರ್ಥಿನಿ, ವಿಡಿಯೋ ವೈರಲ್
ಬ್ರಹ್ಮಾವರ: ರವಿವಾರ ಬಾರ್ಕೂರಿನ ಚೌಳಿ ಕೆರೆಗೆ ಕಾರು ಉರುಳಿ ಜೀವನ್ಮರಣ ಸ್ಥಿತಿಯಲ್ಲಿದ್ದ ಇಬ್ಬರನ್ನು ರಕ್ಷಿಸಲು ಕೆರೆಗೆ ಧುಮುಕಿದ ಸ್ಥಳೀಯರ ಸಮಯ ಪ್ರಜ್ಞೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಕಾರು ಕೆರೆಗೆ ಕವುಚಿ ಬಿಳುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ಬಂದ ಸ್ಥಳೀಯರು ಕಾರಿನಲ್ಲಿದ್ದ ಶ್ವೇತಳನ್ನು ಮೇಲಕ್ಕೆ ಎತ್ತಿದ್ದರು, ತಕ್ಷಣ ಅಲ್ಲೇ ಇದ್ದ 10ನೇ ತರಗತಿ ವಿದ್ಯಾರ್ಥಿನಿಯ ಸಮಯ ಪ್ರಜ್ಞೆಯಿಂದಾಗಿ ಯುವತಿಯ ದೇಹಕ್ಕೆ ಹೋಗಿದ್ದ ನೀರನ್ನು ಹೊರ ಹಾಕಿ ಆಕೆಯೇ ಉಸಿರಾಡುವಂತೆ ಪ್ರಥಮ ಚಿಕಿತ್ಸೆ ನೀಡಿದ್ದಳು. ವಿದ್ಯಾರ್ಥಿನಿ ಸಕಾಲಿಕ ಕ್ರಮಕ್ಕೆ ಜಿಲ್ಲೆಯ ಜನರಿಂದ ವ್ಯಾಪಕ ಪ್ರಶಂಸೆಗೆ ವ್ಯಕ್ತವಾಗಿದೆ.
ಇದೀಗಾ ವಿದ್ಯಾರ್ಥಿನಿ ನಮನ ನೀಡಿದ ಪ್ರಾಥಮಿಕ ಚಿಕಿತ್ಸೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉದ್ಯಮಿ ಸಂತೋಷ ಶೆಟ್ಟಿಯವರನ್ನು ಮೇಲಕ್ಕೆ ಎತ್ತಿ ಆಸ್ಪತ್ರೆಗೆ ಸಾಗಿಸುವ ಸಂದರ್ಭ ಮೃತ ಪಟ್ಟಿದ್ದರು. ಆಸ್ಪತ್ರೆಗೆ ದಾಖಲಾದ ಯುವತಿ ಸದ್ಯ ಜೀವಪಾಯದಿಂದ ಪಾರಾಗಿದ್ದಳೆ. ಲಿಟಲ್‌ರಾಕ್ ಶಾಲೆಯಲ್ಲಿ10ನೇ ತರಗತಿ ಕಲಿಯುತ್ತಿರುವ ನಮನ ಹಿರಿಯ ಉಪನ್ಯಾಸಕಿ, ಎನ್‌ಎಸ್‌ಎಸ್ ಅಧಿಕಾರಿ ಸವಿತಾ ಎರ್ಮಾಳ್ ಮತ್ತು ಕುಮಾರ್ ಅವರ ಪುತ್ರಿ.