ಮೊದಲ ಬಾರಿಗೆ ಅರ್ಧದಲ್ಲೇ ರದ್ದಾದ ಬಿಗ್ ಬಾಸ್ ಶೋ!

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಹೆಚ್ಚಾಗಿ ಸೋಮವಾರದಿಂದ ಲಾಕ್‌ಡೌನ್ ವಿಧಿಸಿರುವ ಕಾರಣ ಕನ್ನಡ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ – 8 ತನ್ನ 71 ದಿನಗಳ ಜರ್ನಿಯನ್ನು ನಾಳೆಗೆ ಕೊನೆಗೊಳಿಸಲಿದೆ. ವಾರಾಂತ್ಯದ ಕಾರ್ಯಕ್ರಮ ನಡೆಸಿ ಕೊಡಲು ನಟ ಕಿಚ್ಚ ಸುದೀಪ್ ಕೂಡ ಅನಾರೋಗ್ಯದಿಂದಾಗಿ ಬಂದಿರಲಿಲ್ಲ, ಆದರೆ ಇದೀಗ ಬಿಗ್ ಬಾಸ್ ಅಧಿಕೃತವಾಗಿ ತನ್ನ 8 ನೇ ಆವೃತ್ತಿಯನ್ನು ರದ್ದುಗೊಳಿಸುತ್ತಿದೆ ಎಂದು ತಿಳಿದು ಬಂದಿದೆ.

ಈ ಕುರಿತು ವಾಹಿನಿಯ ಬ್ಯುಸಿ ನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ತಮ್ಮ ಇನ್ಟಾಗ್ರಾಮ್ ನಲ್ಲಿ ಮಾಹಿತಿ ನೀಡಿದ್ದು, “ಬಿಗ್ ಬಾಸ್ ಮನೆಯೊಳಗಡೆ ಇರುವ ಮಂದಿಗೆ ಕೊರೊನಾ ವಿಷಯದಲ್ಲೊ ಹೊರಗೆ ನಡೆಯುತ್ತಿರುವ ಸಂಕಷ್ಟ, ಸಂಕಟಗಳು ತಿಳಿಯುತ್ತಿಲ್ಲ. ಹೊರಗಿನ ಪರಿಸ್ಥಿತಿಯನ್ನು ನೋಡುತ್ತಿದ್ದರೆ ನಿಜಕ್ಕೂ ಮನಸ್ಸಿಗೆ ತುಂಬಾ ಬೇಜಾರ್ ಆಗುತ್ತದೆ. ಸ್ಪರ್ಧಿಗಳೀಗ ಐಸೋಲೇಷನ್ ನಲ್ಲಿ ಇರುವುದರಿಂದ ಸುರಕ್ಷಿತವಾಗಿದ್ದಾರೆ. ಅವರನ್ನು ನಾಳೆ ಮನೆಯ ಹೊರಗೆ ಕರೆದು ಸುರಕ್ಷಿತವಾಗಿ ಅವರವರ ಮನೆಗೆ ಕಳುಹಿಸಿ ಕೊಡುತ್ತೇವೆ” ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!