ಮೇ.10 ರಿಂದ ಜಾರಿಯಾಗುವ ಲಾಕ್ ಡೌನ್- ಪರಿಷ್ಕೃತ ಮಾರ್ಗ ಸೂಚಿ ಪ್ರಕಟಿಸಿದ ಉಡುಪಿ ಜಿಲ್ಲಾಧಿಕಾರಿ

ಉಡುಪಿ ಮೇ.8(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೋನಾ ನಿಯಂತ್ರಿಸುವ ಸಲುವಾಗಿ ಪರಿಷ್ಕೃತ ಮಾರ್ಗ ಸೂಚಿಯನ್ನು ಸರಕಾರ ಜಾರಿ ಮಾಡಿದೆ. ಈ ನೂತನ ಮಾರ್ಗ ಸೂಚಿಯ ಪ್ರಕಾರ ಜಿಲ್ಲೆಯಲ್ಲಿ ಮೇ.10 ರ ಬೆಳಿಗ್ಗೆ 6 ಗಂಟೆಯಿಂದ ಮೇ.24 ರ ಬೆಳಿಗ್ಗೆ 6 ಗಂಟೆ ವರೆಗೆ ಉಡುಪಿ ಜಿಲ್ಲೆಯಾದ್ಯಂತ ಸಿಆರ್ ಪಿಸಿ ಸೆಕ್ಷನ್ 144(3) ಅನ್ವಯ ಮುಂದಿನ ಆದೇಶದ ಅವರೆಗೆ ನಿಷೇದಾಜ್ಞೆಯನ್ನು ವಿಧಿಸಲಾಗಿದೆ.

ಈ ಕುರಿತು ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಆದೇಶ ಹೊರಡಿಸಿದ್ದಾರೆ. ಈ ಆದೇಶದ ಪ್ರಕಾರ ನಿಷೇದಾಜ್ಞೆಯ ಅವಧಿಯಲ್ಲಿ ಜಿಲ್ಲೆಯಾದ್ಯಂತ ಕೆಲವೊಂದು ಚಟುವಟಿಕೆಗಳಿಗೆ  ಮಾತ್ರ ಅವಕಾಶ ನೀಡಲಾಗಿದೆ. ಅದರಂತೆ ಜಿಲ್ಲೆಯಲ್ಲಿ ಆಹಾರ, ದಿನಸಿ, ಹಣ್ಣುಗಳು ಮತ್ತು ತರಕಾರಿಗಳು,  ಮಾಂಸ ಮತ್ತು ಮೀನು ಮತ್ತು ಪಶು ಆಹಾರ ವ್ಯಾಪಾರ ಮಾಡುವ ಅಂಗಡಿಗಳಿಗೆ ಬೆಳಿಗ್ಗೆ 6 ರಿಂದ ಬೆಳಿಗ್ಗೆ 10 ರವರೆಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ.

ಎಲ್ಲಾ ವೈದ್ಯಕೀಯ ಸೇವೆಗಳು (ಆಯುಷ್ ಮತ್ತು ಪಶುವೈದ್ಯಕೀಯ ಆಸ್ಪತ್ರೆಗಳನ್ನು ಒಳಗೊಂಡು) ಕಂಟೈನ್ಮೆಂಟ್ ವಲಯದ ಹೊರಗಡೆ ಕಾರ್ಯಾಚರಣೆಯಲ್ಲಿರುತ್ತದೆ. ಕೃಷಿ ಮತ್ತು ಕೃಷಿ ಸಂಬಂಧಿಸಿದ ಕೆಲಸಗಳಿಗೆ (ಕಂಟೈನ್ಮೆಂಟ್ ವ್ಯಾಪ್ತಿಯ ಹೊರಗೆ ) ಬೆಳಿಗ್ಗೆ 6 ಗಂಟೆಯಿಂದ ಬೆಳಿಗ್ಗೆ 10 ಗಂಟೆಯವರೆಗೆ ಕಂಟೈನ್‌ ಮೆಂಟ್‌ ವಲಯದ ಹೊರಗಿನ ಕೃಷಿ ಉಪಕರಣ ಬಾಡಿಗೆ ಕೇಂದ್ರಗಳಿಗೆ, ಯಂತ್ರೋಪಕರಣಗಳಿಗೆ ಸಂಬಂಧಿಸಿದ ಅಂಗಡಿಗಳು ಮತ್ತು ಗೋದಾಮುಗಳು ಸೇರಿದಂತೆ ಎಲ್ಲಾ ಕೃಷಿ ಮತ್ತು ಸಂಬಂಧಿತ ಕಾರ್ಯಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ಖಾಲಿ ಸರಕು ಸಾಗಾಣಿಕಾ ವಾಹನಗಳೂ ಸೇರಿದಂತೆ ಎಲ್ಲಾ ರೀತಿಯ ಸರಕು ಸಾಗಾಣಿಕೆ ವಾಹನಗಳ ಸಂಚಾರವನ್ನು ಅನುಮತಿಸಲಾಗಿದೆ.

ಸ್ವತಂತ್ರ ಮದ್ಯದಂಗಡಿಗಳು ಮತ್ತು ಮಳಿಗೆಗಳಲ್ಲಿ  ಬೆಳಿಗ್ಗೆ 6 ರಿಂದ ಬೆಳಿಗ್ಗೆ 10 ರವರೆಗೆ ಪಾರ್ಸೆಲ್‌ ಕೊಂಡು ಹೋಗಲು ಮಾತ್ರ ಅನುಮತಿಸಲಾಗಿದೆ. ತಳ್ಳು ಗಾಡಿಗಳ ಮುಖಾಂತರ ಹಣ್ಣು ಮತ್ತು ತರಕಾರಿಗಳನ್ನು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ಯವರೆಗೆ ಮಾರಾಟ ಮಾಡಲು ಅನುಮತಿಸಲಾಗಿದೆ. ಬೆಳಿಗ್ಗೆ 6.00 ಗಂಟೆಯಿಂದ ಸಂಜೆ 6.00 ಗಂಟೆಯವರೆಗೂ ಹಾಪ್‌ ಕಾಮ್ಸ್‌ , Karnataka Milk Federation (KMF) ಹಾಲಿನ ಬೂತು ಮಾತ್ರ  ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ.

ಜನರು ಮನೆಯಿಂದ ಹೊರಕ್ಕೆ ಸಂಚರಿಸುವುದನ್ನು ಕಡಿಮೆ ಮಾಡಲು COVID 19 ನಿರ್ವಹಣೆಗಾಗಿರುವ ರಾಷ್ಟ್ರೀಯ ನಿರ್ದೇಶನಗಳಿಗೆ ಬದ್ಧರಾಗಿ 24×7ಹೋಮ್‌ ಡೆಲಿವರಿ ಸೇವೆಗಳನ್ನು ನೀಡಲು ಪ್ರೋತ್ಸಾಹಿಸಲಾಗಿದೆ. ಎಲ್ಲಾ ಆಹಾರ ಸಂಸ್ಕರಣೆ ಮತ್ತು ಸಂಬಂಧಿತ ಕೈಗಾರಿಕೆಗಳು. ಬ್ಯಾಂಕುಗಳು, ವಿಮಾ ಕಚೇರಿಗಳು ಮತ್ತು ಎಟಿಎಂ., ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮ., ದೂರಸಂಪರ್ಕ, ಇಂಟರ್ನೆಟ್ ಸೇವೆಗಳು, ಪ್ರಸಾರ ಮತ್ತು ಕೇಬಲ್ ಸೇವೆಗಳು. ಗುರುತಿನ ಚೀಟಿಯನ್ನು ಟೆಲಿಕಾಂ ಮತ್ತು ಇಂಟರ್ನೆಟ್ ಸೇವಾ ಪೂರೈಕೆದಾರ ಸಂಸ್ಥೆಗಳ ನೌಕರರು ಮತ್ತು ವಾಹನಗಳ ಅನಿಯಂತ್ರಿತ ಸಂಚಾರವನ್ನು ಅನುಮತಿಸಲಾಗಿದೆ.

IT ಹಾಗೂ ITeS ಕಂಪನಿಗಳ ಅವಶ್ಯ ಸಿಬ್ಬಂದಿಗಳು ಮಾತ್ರವೇ ಕಛೇರಿಗಳಲ್ಲಿ ಕಾರ್ಯನಿರ್ವಹಿಸುವುದು ಉಳಿದ ಸಿಬ್ಬಂದಿಗಳು ಮನೆಯಿಂದಲೇ ಕಾರ್ಯನಿರ್ವಹಿಸುವುದು. ಹೋಮ್‌ ಡೆಲಿವರಿ ಹಾಗೂ ಎಲ್ಲಾ ರೀತಿಯ ಇ-ಕಾಮರ್ಸ್‌ ಸೇವೆಗಳನ್ನು ಅನುಮತಿಸಲಾಗಿದೆ.  ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ವಿತರಣಾ ಘಟಕಗಳು ಮತ್ತು ಸೇವೆಗಳು.ಖಾಸಗಿ ಭದ್ರತಾ ಸೇವೆಗಳನ್ನು ಅನುಮತಿಸಲಾಗಿದೆ. ಮದುವೆ ಸಮಾರಂಭಗಳಲ್ಲಿ ಕೋವಿಡ್‌ ಮಾರ್ಗ ಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿ ಗೊಳಪಟ್ಟು 50 ಜನರ ಸೇರುವಿಕೆಗೆ ಅವಕಾಶ ಕಲ್ಪಿಸಲಾಗಿದೆ. ಶವಸಂಸ್ಕಾರ / ಅಂತ್ಯಕ್ರಿಯೆಗಳನ್ನು ಗರಿಷ್ಠ 5 ಜನರೊಂದಿಗೆ ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿಗೊಳಪಟ್ಟು ನಿರ್ವಹಿಸಲು ಅನುಮತಿಸಿದೆ.

ನಿಗದಿಯಾಗಿರುವ ವಿಮಾನ ಪ್ರಯಾಣ ಹಾಗೂ ರೈಲು ಪ್ರಯಾಣಗಳನ್ನು ಹೊರತುಪಡಿಸಿ ಎಲ್ಲಾ ರೀತಿಯ ಸಾರ್ವಜನಿಕ ಸಂಚಾರವನ್ನು ನಿರ್ಬಂಧಿಸಲಾಗಿದೆ. ಆಟೋ, ಕ್ಯಾಬ್‌ ಗಳು ಟ್ಯಾಕ್ಸಿಗಳ ಮೂಲಕ ರೈಲು ನಿಲ್ದಾಣ ಹಾಗೂ ವಿಮಾನ ನಿಲ್ದಾಣಗಳಿಗೆ ಪ್ರಯಾಣಿಸುವವರು ವಿಮಾನಯಾನ ಟಿಕಟ್ ಗಳು ಹಾಗೂ ರೈಲು ಪ್ರಯಾಣದ ಟಿಕೆಟ್‌ ಗಳನ್ನೇ ಪಾಸ್‌ ಗಳಂತೆ ಬಳಸಿಕೊಳ್ಳಬಹುದಾಗಿದೆ.

ಮಾಸ್ಕ್ ಧರಿಸುವುದು, ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಅತ್ಯವಶ್ಯಕ ಕ್ರಮವಾಗಿದ್ದು, ಮುಖಗವಸುಗಳನ್ನು ಧರಿಸದ ವ್ಯಕ್ತಿಗಳ ವಿರುದ್ಧ  ಮಹಾ ನಗರ  ಪಾಲಿಕೆ ಪ್ರದೇಶಗಳಲ್ಲಿ  ರೂ. 250/- ಮತ್ತು ಇನ್ನಿತರ ಪ್ರದೇಶಗಳಲ್ಲಿ ರೂ.100/- ದಂಡ ವಿಧಿಸಲಾಗುವುದು. ಕೋವಿಡ್‌ ನಿರ್ವಹಣೆಗಾಗಿ ರಾಷ್ಟ್ರೀಯ ನಿರ್ದೇಶನಗಳನ್ನು ಜಿಲ್ಲೆಯಾದ್ಯಂತ ಕಟ್ಟುನಿಟ್ಟಾಗಿ ಪಾಲಿಸುವುದು.

ಈ  ಆದೇಶಗಳನ್ನು  ಪಾಲಿಸದೇ ಇದ್ದವರ ಮೇಲೆ ಪೋಲಿಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು Disaster Management Act  2005 , ಮತ್ತು  IPC ಸೆಕ್ಷನ್ 188 ಪ್ರಕಾರ ನಿಯಮಾನುಸಾರ ಕಠಿಣ ಕ್ರಮಕೈಗೊಳ್ಳಲಾಗುವುದು. ಈ ಆದೇಶವು ಸರಕಾರದಿಂದ ನಡೆಸಲ್ಪಡುವ ಯಾವುದೇ ಕಾರ್ಯಕ್ರಮ, ಸಭೆಗಳಿಗೆ ಅನ್ವಯಿಸುವುದಿಲ್ಲ  ಎಂದು ಆದೇಶ ದಲ್ಲಿ ತಿಳಿಸಲಾಗಿದೆ.

14 thoughts on “ಮೇ.10 ರಿಂದ ಜಾರಿಯಾಗುವ ಲಾಕ್ ಡೌನ್- ಪರಿಷ್ಕೃತ ಮಾರ್ಗ ಸೂಚಿ ಪ್ರಕಟಿಸಿದ ಉಡುಪಿ ಜಿಲ್ಲಾಧಿಕಾರಿ

  1. ಮಾಸ್ಕ್ ಧರಿಸದೆ ಇದ್ದರೆ 5000/- ಫೈನ್ ಹಾಕಿ
    ಯಾಕೆಂದರೆ 100/-ಹಾಗೂ 250/- ಈಗಿನ ಜನರಿಗೆ ಜುಜುಬಿ ಆಗಿದೆ

  2. kelasave illade EMI kattod hege ?
    yallarigu onde rithi kanunu thanni
    beligge 6am to 10am varadalli 2 dina iddare saku allave ?
    dina shopping madlebekanta illa.
    sampoorna lockdown madi.

    pass antha madi janarannu free bittu yake police sibbandige thondare koduttiri avaru manushhare.

  3. Restion shop daily yake open bar daily yake open bank yake open

    Bank online network iruvaga yake

    Only medical &hospital & idhre sakalva

  4. ವಾರದಲ್ಲಿ ಎರಡು ದಿನ ಅಂಗಡಿ ಓಪನ್ ಮಾಡಬಹುದು ಹೇಗೆಂದರೆ ನಿಮಗೊಬ್ಬರಿಗೆ ಸಾಮಾನು ಖರೀದಿ ಮಾಡಲು ಮಾತ್ರಾ. ಯಾಕೆಂದರೆ ಭಾರತ 135 ಕೋಟಿ ಜನ ಸಂಖ್ಯೆ ಇರುವ ರಾಷ್ಟ್ರ. ವಾರದಲ್ಲಿ 2 ದಿನ ಇಟ್ಟಾಗ ಪ್ರತಿ ಕುಟುಂಬದ ಒಬ್ಬರು ಹೋದರೂ ಅಂಗಡಿ ನೂಕು ನುಗ್ಗಲು ಆಗುತ್ತೆ ಅಷ್ಟೇ…. ಆಮೇಲೆ ಜನಗಳಿಗೆ ಉಗಿತಾರೆ. ಯಾರೋ ಮಾಡೋ ತಪ್ಪಿಗೆ ಯಾರಿಗೋ ಶಿಕ್ಷೆ….

  5. ಎಂತಾ ರೂಲ್ಸ್ ರೀ ಇದು… ಬಡ ಜನರ ಪ್ರಾಣ ಹಿಂಡೋ ರೂಲ್ಸ್. Lackdown ಮಾಡಿ ಹಸಿವೆಯಿಂದ ಸಾಯೋ ಬದಲು, ಕೊರೊನ ಬಂದು ಬೇಗ ಸಾಯೋದೆ ಒಳ್ಳೇದು. ರಾಜಕೀಯದವರು, ಅಧಿಕಾರಿಗಳಿಗೆ ಫ್ರೀ ಸಿಗತ್ತೆ 14 days. ಬಡ ಜನರು ಕೂಲಿ ಕಾರ್ಮಿಕರು ಮಾತ್ರ ಬೀದಿ ಹೆಣವಾಗ್ತಾರೆ ಅಷ್ಟೇ. ಈ ಬಗ್ಗೆ ಮಾನವೀಯತೆ ತೋರಿಸೋ ಒಬ್ಬ ರಾಜಕೀಯ ಅಥವಾ ಅಧಿಕಾರಿಗಳು ಯಾರೂ ಇರಲ್ಲಾ. ಪೊಲೀಸ್ ನವರು ಅಂತೂ ಕೆಲವು ಕಡೆ ಹುಚ್ಚು ನಾಯಿಗೆ ಹೊಡೆದಾಗೆ ಹೊಡೀತಾರೆ. ಅವರಿಗೆ ಸಿಕ್ಕಿದ್ದೇ ಚಾನ್ಸ್ ಇದು. ಹಾಸ್ಪಿಟಲ್ಗಳಲ್ಲಿ ದಂದೆ ನಡೀತಿದ್ರು ಯಾವ ಒಬ್ಬ ಅಧಿಕಾರಿಗಳು ಈ ಬಗ್ಗೆ ಜಾಸ್ತಿ ಮಾತಾಡಲ್ಲ. ಏನೂ ತಪ್ಪು ಮಾಡದ ಮುಗ್ದ ಜನರ ಸಂಹಾರ ಈ lockdown. ಸಭೆ ಸಮಾರಂಭ ಫುಲ್ ಕ್ಲೋಸ್ ಮಾಡಿ, ಕೂಲಿ ಮಾಡೋ ಜನಕ್ಕಾದ್ರೂ ಅವಕಾಶ ಮಾಡಿ ಕೊಟ್ಟಿದ್ರೆ ಮನುಷ್ಯತ್ವ ಇರೋ ಸರ್ಕಾರ ಅನ್ನ ಬಹುದು ಇತು. ಇಲ್ಲಿ ಸಭೆ ಸಮಾರಂಭ 50 ಜನ ಸೇರಿ ಮಾಡಬಹುದು ಕೂಲಿ ಕೆಲಸ 5, 6 ಸೇರಿ ಮಾಡಬಾರದು. ಇದೆಂತಾ ಕಾನೂನು ಅಧಿಕಾರಿ ಮಹಾಶಯರೇ…. !!!!? ದಯವಿಟ್ಟು ಬಡ ಜನರು ರೊಚ್ಚಿಗೇಳೋ ಮುನ್ನ ನೀವು ಮನುಷ್ಯರಂತೆ ವರ್ತಿಸಿ…. ಇನ್ನು ಯಾವತ್ತೂ ಕೂಡ ಇಂತ ದುರ್ಬಲ ಸರ್ಕಾರ ಬೇಡ ನಮ್ಮ ರಾಜ್ಯಕ್ಕೆ. ಕೇಂದ್ರ ಸರ್ಕಾರದ ಮೇಲೆ ಕೆಲವೊಂದು ಜನಗಳಿಗೆ ನಂಬಿಕೆ ಇದೆ ಬಿಟ್ರೆ… ಮಾನವೀಯತೆ ಸತ್ತ ಅಧಿಕಾರಿಗಳು ಮತ್ತು ಸರ್ಕಾರಕ್ಕೆ ನನ್ನ ಧಿಕ್ಕಾರ….

  6. ಕೆಲವೊಂದು ಕೈಗಾರಿಕೆ / ಅಂಗಡಿ ಮುಂಗಟ್ಟು ಕೆಲಸದವರಿಗೆ ಅನಾನುಕೂಲ ವಾಗಿರುವುದು ಸತ್ಯ. ಆದರೆ ಇಂತಹಾ ಪರಿಸ್ಥಿತಿಯಲ್ಲಿ ಹೇಗೆ ನಿರ್ಭಂಧ ಹಾಕಿದರೂ ಸಹಾ ಎಲ್ಲಾ ಜನರನ್ನೂ ಸಹಾ ಮೆಚ್ಚಿಸಲು ಆಗಲ್ಲ.Full lockdown ಮಾಡಿದರೂ ಕಷ್ಟವೇ. ಹಾಗಾಗಿ ಈಗ ಹಾಕಿರುವ lock down rules ಪರವಾಗಿಲ್ಲ ಅನಿಸುತ್ತದೆ. ಜನರೂ mask, social distance, hand wash, ಇತ್ಯಾದಿ ಗೋಳನ್ನು ಅನುಸರಿಸುವ ಅಭ್ಯಾಸ ಬೆಳೆಸಿಕೊಂಡು ಬೀದಿ ಬೀದಿಗಳಲ್ಲಿ ಎಲ್ಲೆಂದರಲ್ಲಿ ಉಗಿಯುವ ಅಭ್ಯಾಸಗಳನ್ನು ಬಿಡಬೇಕಾಗುತ್ತದೆ.. ಭಾರತದಲ್ಲಿ ಸ್ವಚ್ಛತೆ ಇಲ್ಲ ದಿರುವುದೂ ಸಹಾ ಕೊರೋನಾ ಹಚ್ಚಾಗಲು ಮೂಲ ಕಾರಣ.

  7. Batre nimmappa maadi ittir papadavr hotte hoddu nav kooli madi badkak ondina dudidir oota illa … Bank sala katla ankand jeeva thinthr …. Nimmappa madad swalpa jasthi idr nmg Kodi 5savra yentha 5lakshve kodva …. Halkat

  8. ಉಡುಪಿಯ ಕ೦ಪನಿಗಳು ಒಪನ್ ಯಾಕೆ ? 800 ಜನ ಉದ್ಯೋಗಿ ಯಲ್ಲಿ 600 ಜನ ಹಿಂದಿ ಯವರು ಮಾಸ್ ಇಲ್ಲ ಸಾಮಾಜಿಕ ಅ೦ತರ ಮಾಡುದು ಸಾದ್ಯವಿಲ್ಲ ………..

  9. ಕೆಲಸವೇ ಇಲ್ಲ Emi ಕಟ್ಟೋದು ಹೇಗೆ? ಬ್ಯಾಂಕ್ ನವರು ಸುಮ್ನೆ ಇರ್ತಾರ ಅವರಿಗೆ ಟೈಮ್ ಟೈಮಿಗೆ Emi ಬಂದ್ರೆ ಆಯಿತು ..ಇಲ್ಲಾಂದ್ರೆ calls msg ಎಲ್ಲ ಬರುತ್ತೆ. ಈ ಟೈಮ್ಅಲ್ಲಿ ಹೇಗ್ ಕಟ್ಟೋದು..ಒಂದ್ ಕಡೆ ಮನೆಖರ್ಚು ಇನ್ನೊಂದ್ ಕಡೆ ಕೆಲಸ ಇಲ್ಲ. ಸಂಬಳ ಇಲ್ಲ.. ಏನ್ ಮಾಡೋದು .. ಈ Emi loans etc.. ಇದ್ರ ಬಗ್ಗೆ ಸರ್ಕಾರ ಬ್ಯಾಂಕ್ ನವರಿಗೆ ಏನಾದ್ರೂ ಸೂಕ್ತ ಆದೇಶ ಹೊರಡಿಸಿ … ಬಡ ಮತ್ತು ಮಧ್ಯಮ ವರ್ಗದವರನ್ನು ಉಳಿಸಿ..

  10. People those who have earnt money by proper way by swet and blood cant pay 5000 only people like you can pay because it’s not your swet and blood it’s other blood

  11. At Ambagilu d.c.office rord entrance business going on unabated
    No mask no social distance.retail coconut business starts at 7a.m.goes on till night 7 p.m.Hoysala van is moving d.c.office goers are moving in this road without eyes.big trucks from other states other districts.are arriving here for loading.min.100 vehicles including PvT.vehicles vans rickshaws are arriving daily breaking all rules.my efforts to contact muncipal office police station all failed.l do not understand whose failiure is this.even govt officials their drivers come there to sell coconuts and speaking even after committing problems.i do not understand.only God has to save tax payers and senior citizens
    You can visit the spot anytime with your squad.

    .

    M

Leave a Reply

Your email address will not be published. Required fields are marked *

error: Content is protected !!