ಉಡುಪಿ: ಇಂದೂ ಕೂಡ ಸಾವಿರ ದಾಟಿದ ಕೋವಿಡ್ ಪಾಸಿಟಿವ್ ಪ್ರಕರಣ, ಹತ್ತು ಜನರ ಬಲಿ!

ಉಡುಪಿ ಮೇ8(ಉಡುಪಿ ಟೈಮ್ಸ್ ವರದಿ): ಇಷ್ಟು ದಿನ ಜಿಲ್ಲೆಯಲ್ಲಿ ದಾಖಲೆ ಕೋವಿಡ್ ಪಾಸಿಟಿವ್ ಪ್ರಕರಣಗಳುಪತ್ತೆಯಾಗುತ್ತಿದ್ದರೆ ಇಂದು ದಾಖಲೆಯ ಪ್ರಮಾಣದಲ್ಲಿ ಸೋಂಕಿತರು ಮೃತಪಟ್ಟಿರುವುದು ವರದಿಯಾಗಿದೆ. ಇಂದು ಒಂದೇ ದಿನ ಜಿಲ್ಲೆಯಲ್ಲಿ 10 ಮಂದಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. 

ಈ ಪೈಕಿ ಉಡುಪಿಯಲ್ಲಿ 5, ಕಾರ್ಕಳದಲ್ಲಿ 4, ಕುಂದಾಪುರದಲ್ಲಿ ಒಬ್ಬರು ಸೇರಿ 6 ಮಂದಿ ಮಹಿಳೆಯರು ಹಾಗೂ ನಾಲ್ವರು ಪುರುಷರು ಸೋಂಕಿನಿಂದ ಮೃತಪಟ್ಟಿದ್ದಾರೆ.

ಜಿಲ್ಲೆ ಇಂದು 1047 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಈ ಪೈಕಿ ಉಡುಪಿ ತಾಲೂಕೊಂದರಲ್ಲೇ ಬರೋಬ್ಬರಿ 645  ಮಂದಿಯಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು ಕುಂದಾಪುರ 347, ಕಾರ್ಕಳ 45 ಹಾಗೂ ಹೊರ ಜಿಲ್ಲೆಯ 10 ಮಂದಿಯಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಈ ಮೂಲಕ ಒಂದೇ ಸಮನೆ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 5958 ಕ್ಕೆ ಏರಿಕೆಯಾಗಿದೆ. ಮೇ. 7 ರಂದು 328 ಮಂದಿ ಸೋಂಕಿತರು ಆಸ್ಪತ್ರೆಯಿಂದ ಗುಣಮುಖ ಹೊರ ಬಂದಿದ್ದು ಈ ವರೆಗೆ ಒಟ್ಟು 32,730 ಮಂದಿ ಗುಣಮುಖರಾಗಿದ್ದಾರೆ.

ಮೇ. 7 ರ ವೇಳೆಗೆ ಜಿಲ್ಲೆಯಲ್ಲಿ  ಒಟ್ಟು 5,25,950 ಮಂದಿಯನ್ನು ಕೋವಿಡ್  ಟೆಸ್ಟ್ ಗೆ ಒಳಪಡಿಸಿದ್ದು, ಈ ಪೈಕಿ 38,916 ಮಂದಿಯಲ್ಲಿ ಸೋಂಕು ದೃಢ ಪಟ್ಟಿದೆ. ಜಿಲ್ಲೆಯಲ್ಲಿ 228 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ

Leave a Reply

Your email address will not be published. Required fields are marked *

error: Content is protected !!