ಕೋವಿಡ್ ಎರಡನೇ ಅಲೆ: ಜೈಲುಗಳಲ್ಲಿರುವ ಕೈದಿಗಳ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ

ನವದೆಹಲಿ: ದೇಶದಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ಅತ್ಯಂತ ಹೆಚ್ಚಳ ಗಮನಿಸಿದ ಸುಪ್ರೀಂ ಕೋರ್ಟ್, ಜೈಲುಗಳಲ್ಲಿರುವ ಕಳೆದ ವರ್ಷ ಜಾಮೀನು ಅಥವಾ ಪೆರೋಲ್ ಪಡೆದ ಎಲ್ಲ ಕೈದಿಗಳನ್ನು ಕೂಡಲೇ ಬಿಡುಗಡೆ ಮಾಡಲು ಆದೇಶಿಸಿದೆ.

ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಮತ್ತು ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ನ್ಯಾಯಪೀಠವು ಕಳೆದ ಮಾರ್ಚ್‌ನಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ರಾಜ್ಯಗಳ, ಕೇಂದ್ರಾಡಳಿತ ಪ್ರದೇಶದ ಜೈಲುಗಳಲ್ಲಿರುವ ಎಲ್ಲ ಕೈದಿಗಳನ್ನು ಕೋರ್ಟ್‌ನ ಆದೇಶ, ವಿಳಂಬವನ್ನು ತಪ್ಪಿಸದೆ ಬಿಡುಗಡೆ ಮಾಡಬೇಕು, “ನಮ್ಮ ಹಿಂದಿನ ಆದೇಶಗಳಿಗೆ ಅನುಸಾರವಾಗಿ ಪೆರೋಲ್ ಪಡೆದ ಕೈದಿಗಳಿಗೆ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಸಲುವಾಗಿ ಮತ್ತೆ 90 ದಿನಗಳ ಕಾಲ ಪೆರೋಲ್ ನೀಡಬೇಕು” ಎಂದು ನ್ಯಾಯಪೀಠವು ಸುಪ್ರೀಂ ಕೋರ್ಟ್‌ ವೆಬ್ ಸೈಟ್ ನಲ್ಲಿ  ಅಪ್‌ಲೋಡ್ ಮಾಡಿದ ಆದೇಶದಲ್ಲಿ ತಿಳಿಸಿದೆ.

ತೀರ್ಪನ್ನು ಉಲ್ಲೇಖಿಸಿ ಸರ್ವೋಚ್ಚ ನ್ಯಾಯಾಲಯವು ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸುವ ಪ್ರಕರಣಗಳಲ್ಲಿಕೈದಿಗಳನ್ನು ಯಾಂತ್ರಿಕವಾಗಿ ಬಂಧಿಸದಂತೆ ಅಧಿಕಾರಿಗಳನ್ನು ಕೇಳಿದೆ. ಈ ವಿಷಯದ ಬಗ್ಗೆ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ಹೊಸ ಕೈದಿಗಳ ಬಿಡುಗಡೆಯನ್ನು ಪರಿಗಣಿಸುವಂತೆ ಹೈ-ಪವರ್  ಸಮಿತಿಗಳಿಗೆ ನಿರ್ದೇಶನ ನೀಡಿತು

Leave a Reply

Your email address will not be published. Required fields are marked *

error: Content is protected !!