ಜೂನ್ 1 ರಿಂದ ದಿನಕ್ಕೆ 200 ನಾನ್ ಎಸಿ ರೈಲುಗಳ ಸಂಚಾರ ಪ್ರಾರಂಭ
ನವದೆಹಲಿ: ರೈಲ್ವೆ ಪ್ರಯಾಣಿಕರಿಗೆ ಶುಭ ಸುದ್ದಿ! ಜೂನ್ 1 ರಿಂದ ದಿನಕ್ಕೆ 200 ನಾನ್ ಎಸಿ ಪ್ರಯಾಣಿಕರ ರೈಲು ಸಂಚಾರ ಪ್ರಾರಂಭವಾಗಲಿದೆ. ಈ ಕುರಿತು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಟ್ವೀಟ್ ಮಾಡಿದ್ದಾರೆ:
“ಭಾರತೀಯ ರೈಲ್ವೆ ಜೂನ್ 1 ರಿಂದ ದಿನಕ್ಕೆ 200 ಎಸಿ ಅಲ್ಲದ (ನಾನ್ ಎಸಿ) ರೈಲುಗಳನ್ನು ಟೈಮ್ ಟೇಬಲ್ ಪ್ರಕಾರ ಓಡಿಸಲಿದೆ, ಆನ್‌ಲೈನ್ ಬುಕಿಂಗ್ ಶೀಘ್ರದಲ್ಲೇ ತೆರೆಯಲ್ಪಡುತ್ತದೆ.” ಹೇಳಿದ್ದಾರೆ.
ಇನ್ನು ದೇಶಾದ್ಯಂತ ಲಾಕ್ ಡೌನ್ ಪರಿಣಾಮದಿಂದ ಸಿಕ್ಕಿಹಾಕಿಕೊಂಡಿರುವ ವಲಸೆ ಕಾರ್ಮಿಕರಿಗೆ ಸಹ ರೈಲ್ವೆ ಇಲಾಖೆ ಒಳ್ಳೆ ಸುದ್ದಿ ಕೊಟ್ಟಿದೆ. ವಲಸೆ ಕಾರ್ಮಿಕರಿಗೆ ದೊಡ್ಡ ಪರಿಹಾರವಾಗಿ ಇಂದು 200 ಶ್ರಮಿಕ್ ರೈಲುಗಳನ್ನು ಓಡಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಈ ಸಂಖ್ಯೆಯನ್ನು ಗಮನಾರ್ಹವಾಗಿ ಹೆಚ್ಚಿಸಲಾಗುವುದು.
ಮುಂದಿನ ಎರಡು ದಿನಗಳಲ್ಲಿ ಭಾರತೀಯ ರೈಲ್ವೆ ಶ್ರಮಿಕ್ ವಿಶೇಷ ರೈಲುಗಳ ಸಂಖ್ಯೆಯನ್ನು ದಿನಕ್ಕೆ 400 ಕ್ಕೆ ದ್ವಿಗುಣಗೊಳಿಸುತ್ತದೆ.ಎಲ್ಲಾ ವಲಸಿಗರು ತಾವು ಇರುವ ಸ್ಥಳದಲ್ಲಿಯೇ ಇರಬೇಕೆಂದು ಕೋರಲಾಗಿದೆ, ಮುಂದಿನ ಕೆಲವು ದಿನಗಳಲ್ಲಿ ಭಾರತೀಯ ರೈಲ್ವೆ ಅವರನ್ನು ಮನೆಗೆ ಹಿಂದಿರುಗಿಸುತ್ತದೆ. ಎಂದು ಸಚಿವರು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.