ರಾಜ್ಯಾದ್ಯಂತ ಮೇ 10 ರಿಂದಲೇ ಲಾಕ್‌ಡೌನ್‌- ಇಂದು ಸಂಜೆ ಪ್ರಕಟ ?

ಬೆಂಗಳೂರು: ರಾಜ್ಯಾದ್ಯಂತ ಮೇ 10 ರಿಂದಲೇ ಲಾಕ್‌ಡೌನ್‌ ಮಾಡಲು ಬಹುತೇಕ ತೀರ್ಮಾನ ಆಗಿದ್ದು, ಸಂಜೆ ನಡೆಯಲಿರುವ ಸಚಿವರು ಮತ್ತು ಅಧಿಕಾರಿಗಳ ಜತೆಗಿನ ಮತ್ತೊಂದು ಸುತ್ತಿನ ಸಭೆಯ ಬಳಿಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧಿಕೃತವಾಗಿ ನಿರ್ಧಾರವನ್ನು ಪ್ರಕಟಿಸಲಿದ್ದಾರೆ.

ಮೇ 10 ರಿಂದ ಒಟ್ಟು 14 ದಿನಗಳ ಲಾಕ್‌ಡೌನ್‌ ಆಗಲಿದೆ. ಅದರ ಸ್ವರೂಪ ಹೇಗಿರಲಿದೆ ಎಂಬುದನ್ನು ಪ್ರತ್ಯೇಕವಾಗಿ ಮಾರ್ಗ ಸೂಚಿಯನ್ನು ಹೊರಡಿಸಲಾಗುವುದು. ಪ್ರತಿ ನಿತ್ಯ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವುದು ಮತ್ತು ಸಾವಿನ ಸಂಖ್ಯೆಯೂ ಹೆಚ್ಚುತ್ತಿರುವುದರಿಂದ ಲಾಕ್‌ಡೌನ್‌ಗೆ ತಜ್ಞರೂ ಸಲಹೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ. 

Leave a Reply

Your email address will not be published. Required fields are marked *

error: Content is protected !!