ಅಂಗಡಿಗೆ ಡಿಕ್ಕಿ ಹೊಡೆದ ಬೈಕ್, ಸವಾರ ಗಂಭೀರ- ದೃಶ್ಯ ಸಿಸಿಟಿವಿಯಲ್ಲಿ ಸೆರೆ, ವಿಡಿಯೋ ವೈರಲ್!
ಮಂಗಳೂರು, ಮೇ 07: ಸ್ಕೂಟರ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬೈಕ್ ಸವಾರನೋರ್ವ ರಸ್ತೆ ಬದಿಯ ಅಂಗಡಿಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿರುವ ಘಟನೆ ಮಂಗಳೂರಿನ ಪದವಿನಂಗಡಿ ಬಳಿ ಇಂದು ಮಂಜಾನೆ ನಡೆದಿದೆ.
ಬೊಂದೇಲ್ ನಿವಾಸಿ ಪ್ರಶಾಂತ್ ಗಂಭೀರ ಗಾಯಗೊಂಡ ಬೈಕ್ ಸವಾರ. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆ ಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಇದೀಗ ಈ ಭೀಕರ ರಸ್ತೆ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬೋಂದೆಲ್ ನಿಂದ ಕೆಪಿಟಿ ಕಡೆಗೆ ವೇಗವಾಗಿ ಬೈಕ್ ನಲ್ಲಿ ಬರುತ್ತಿದ್ದ ಪ್ರಶಾಂತ್, ಎದುರುನಿಂದ ಅಡ್ಡಲಾಗಿ ಬಂದ ಸ್ಕೂಟರ್ ನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಅಂಗಡಿಯ ಗೋಡೆಗೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ತೀವ್ರ ತೆಗೆ ಬೈಕ್ ಸವಾರ ಗಾಳಿಯಲ್ಲಿ ಹಾರಿ ರಸ್ತೆಗೆ ಅಪ್ಪಳಿಸಿದ ದೃಶ್ಯ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾತ್ರವಲ್ಲದೆ ಈತನ ಬೈಕ್ ಹಿಂಬದಿಯಲ್ಲಿ ಬರುತ್ತಿದ್ದ ಮತ್ತೊಂದು ದ್ವಿಚಕ್ರ ವಾಹನವು ಬೈಕ್ ಗೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದಿದ್ದಾರೆ.