ಉಡುಪಿ: ಬಿಜೆಪಿಯ ಹಿರಿಯ ಕಾರ್ಯಕರ್ತೆ ವನಜಾಕ್ಷಿ ಶಾಂತಾರಾಮ್ ನಿಧನ
ಉಡುಪಿ: ಬಿಜೆಪಿಯ ಹಿರಿಯ ಕಾರ್ಯಕರ್ತೆ, ಉಡುಪಿ ಮಹಿಳಾ ಗ್ರಾಹಕರ ಸಹಕಾರ ಸಂಘದ ಸ್ಥಾಪಕ ಸದಸ್ಯೆ, ಉಡುಪಿ ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಮಾಜಿ ಅಧ್ಯಕ್ಷೆ, 2 ಬಾರಿ ಉಡುಪಿ ನಗರಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿರುವ ವನಜಾಕ್ಷಿ ಶಾಂತಾರಾಮ್ ಅಲ್ಪಕಾಲದ ಅಸೌಖ್ಯದಿಂದ ಗುರುವಾರ ನಿಧನರಾಗಿದ್ದಾರೆ.
ಅವರ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ತೀವೃ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ನಿಧನದಿಂದ ಬಿಜೆಪಿ ಒಬ್ಬ ಹಿರಿಯ ಕಾರ್ಯಕರ್ತೆಯನ್ನು ಕಳೆದುಕೊಂಡಿದ್ದು ತುಂಬಾ ದುಃಖದ ವಿಚಾರವಾಗಿದೆ. ಭಗವಂತನು ಅವರ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ.