ರಾಷ್ಟ್ರಪತಿ ಮತ್ತು ಮುಖ್ಯಮಂತ್ರಿ ಪದಕ ವಿಜೇತ ನಿವೃತ್ತ ಪೊಲೀಸ್ ಉಪನಿರೀಕ್ಷಕ ಸೀತಾರಾಮ ನಿಧನ

ಮಂಗಳೂರು ಮೇ.6(ಉಡುಪಿ ಟೈಮ್ಸ್ ವರದಿ): ಮಂಗಳೂರು ನಿವೃತ್ತ ಪೊಲೀಸ್ ಉಪನಿರೀಕ್ಷಕ ಸೀತಾರಾಮ ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.

ಮೂಲತಃ ಕಾಸರಗೋಡಿನವರಾದ ಇವರು ಪೊಲೀಸ್ ಕಾನ್ಸ್ಟೇಬಲ್ ಆಗಿ ಮಂಗಳೂರಿನಲ್ಲಿ ಸೇವೆ ಆರಂಭಿಸಿದ್ದರು. 37 ವರುಷಗಳ ಕಾಲ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಪೊಲೀಸ್ ಉಪನಿರೀಕ್ಷಕರಾಗಿ ನಿವೃತ್ತಿ ಹೊಂದಿದ್ದರು. ಇಲಾಖೆಯಲ್ಲಿ ಸಲ್ಲಿಸಿದ ದಕ್ಷ ಸೇವೆಗೆ ರಾಷ್ಟ್ರಪತಿಗಳು ಮತ್ತು ಮುಖ್ಯಮಂತ್ರಿಗಳಿಂದ ಪದಕವನ್ನು ಪಡೆದಿದ್ದರು.

ಮಂಗಳೂರು, ಮಗೋಡು, ಸಿರಿಸಿ, ಸಕಲೇಶಪುರದಲ್ಲಿ ಸೇವೆ ಸಲ್ಲಿಸಿದ್ದ ಅನುಭವ ಹೊಂದಿದ್ದ ಇವರು, ತಮ್ಮ ಹೆಚ್ಚಿನ ಸೇವೆಯನ್ನು ಮಂಗಳೂರಿನಲ್ಲಿ ಸಲ್ಲಿಸಿ ಪೊಲೀಸ್ ಲೇನ್ ನಲ್ಲಿ ನೆಲೆಸಿದ್ದರು.

Leave a Reply

Your email address will not be published. Required fields are marked *

error: Content is protected !!