ಉಡುಪಿ: ಕಳೆದ ಬಾರಿಯಂತೆ ಈ ಬಾರಿಯೂ ಗಂಭೀರವಾಗಿ ಕರ್ಪ್ಯೂ ಜಾರಿ ಮಾಡಬೇಕು- ಸಂಸದೆ ಶೋಭಾ

ಉಡುಪಿ ಮೇ.6(ಉಡುಪಿ ಟೈಮ್ಸ್ ವರದಿ): ಹೆಚ್ಚುತ್ತಿರುವ ಕೋವಿಡ್ ನಿಯಂತ್ರಿಸಲು ಕಳೆದ ಬಾರಿಯಂತೆ ಈ ಬಾರಿಯೂ ಗಂಭೀರವಾಗಿ ಕರ್ಪ್ಯೂ ಜಾರಿ ಮಾಡಬೇಕು ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲೂ ಕೋವಿಡ್ ಹೆಚ್ಚಿನ ಸಂಖ್ಯೆಯ ಲ್ಲಿ ಪತ್ತೆಯಾಗುತ್ತಿದೆ. ಹೀಗಿರುವಾಗ ಕೋವಿಡ್ ಕರ್ಫ್ಯೂನಿಂದ ನಿಯಂತ್ರಣ ಕಷ್ಟ ಅನಿಸುತ್ತಿದೆ ಆದ್ದರಿಂದ ಕಳೆದ ಬಾರಿಯಂತೆ ಈ ಬಾರಿಯೂ  ಗಂಭೀರವಾಗಿ ಕರ್ಪ್ಯೂ ಜಾರಿ ಮಾಡಬೇಕು ಎಂದರು.

ಅವಶ್ಯಕ ವಸ್ತುಗಳಿಗೆ ಮಾತ್ರ ಅವಕಾಶ ನೀಡಿ ಉಳಿದಂತೆ ಪೂರ್ಣ ಲಾಕ್ಡೌನ್ ಮಾಡಬೇಕು. ಜನ ಈಗಿನಂತೆ ಓಡಾಡಿದರೆ ಕೋವಿಡ್ ನಿಯಂತ್ರಣ ಸಾಧ್ಯವಿಲ್ಲ. ಮದುವೆ, ದೇವಸ್ಥಾನ ಕಾರ್ಯಕ್ರಮ, ಭೂತಾರಾಧನೆ ಎಲ್ಲವೂ ನಡೆಯುತ್ತಿದೆ. ಜನ ಹೆಚ್ಚು ಬೆರೆಯುವುದರಿಂದ ರೋಗ ಹರಡುತ್ತದೆ. ಮುಂಬೈ, ಬೆಂಗಳೂರಿನಿಂದಲೂ ಜನ ಉಡುಪಿ ಜಿಲ್ಲೆಗೆ ಬರುತ್ತಿದ್ದಾರೆ. ಹೊರ ಜಿಲ್ಲೆಗಳಿಂದ ಬಂದವರಿಗೆ ಆದ್ಯತೆ ಮೇಲೆ ಟೆಸ್ಟ್ ಮಾಡಿಸಬೇಕು. ಇವತ್ತಿಂದ ರ್ಯಾಪಿಡ್ ಟೆಸ್ಟ್ ಆರಂಭಿಸಲು ಸೂಚನೆ ನೀಡಿದ್ದೇನೆ. ಹೋಂ ಕ್ಚಾರಂಟೈನ್ ಕಡ್ಡಾಯ ಮಾಡಬೇಕು.15 ದಿನಗಳ ಕಟ್ಟುನಿಟ್ಟಿನ ಕ್ರಮ ಅನಿವಾರ್ಯ ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!