ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಖ್ಯಾತ ಸಾಹಿತಿ ಡಾ.ಜಿ.ಭಾಸ್ಕರ್ ಮಯ್ಯ ಇನ್ನಿಲ್ಲ

ಕುಂದಾಪುರ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಖ್ಯಾತ ವೈಚಾರಿಕ ಸಾಹಿತಿ ಉಡುಪಿಯ ಡಾ.ಜಿ.ಭಾಸ್ಕರ್ ಮಯ್ಯ ಕೊವಿಡ್ ಗೆ ಇಂದು ಬಲಿಯಾಗಿದ್ದಾರೆ.

ಅವರಿಗೆ 70 ವರ್ಷ ವಯಸ್ಸಾಗಿತ್ತು. ಕಳೆದ 4 ದಿನಗಳಿಂದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮುಂಜಾನೆ 4:30ರ ಸುಮಾರಿಗೆ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆಂದು ಆಸ್ಪತ್ರೆಯ ಮೂಲಗಳು ತಿಳಿಸಿದೆ.

ಹಿಂದಿ ಸಾಹಿತ್ಯ ಅಧ್ಯಯನದಲ್ಲಿ ಮೇರು ವ್ಯಕ್ತಿತ್ವ ಹೊಂದಿದ್ದ ಡಾ.ಜಿ.ಭಾಸ್ಕರ್ ಮಯ್ಯ ಅವರ ವೈಚಾರಿಕ ಕೃತಿಗೆ ಕೇಂದ್ರ ಸರ್ಕಾರ 2004ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿತ್ತು. ಇವರು ಧೀರ್ಘಕಾಲ ಕುಂದಾಪುರ ಭಂಡಾರ್ ಕಾರ್ಸ್  ಕಾಲೇಜಿನಲ್ಲಿ ಹಿಂದಿ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸಿದ್ದರು. ವೈಚಾರಿಕ ಹಾಗೂ ಪ್ರಗತಿಪರ ಸಾಹಿತ್ಯದಲ್ಲಿ 50ಕ್ಕೂ ಹೆಚ್ಚು ಗ್ರಂಥ ರಚಿಸಿದ್ದ ಭಾಸ್ಕರ್ ಮಯ್ಯ ಅವರ ನಿಧನಕ್ಕೆ ಸಾಹಿತ್ಯ ಲೋಕ ಕಂಬನಿ ಮಿಡಿದಿದೆ.

 ಅಜನಭಿ ಪನ್ – ಏಕ್ ಅಧ್ಯಯನ ಶೀಲತಾ ಕುರಿತು ಅವರು ಹಿಂದಿಯಲ್ಲಿ ಬರೆದ ಪ್ರಬಂದದಲ್ಲಿ ಪಿ.ಹೆಚ್.ಡಿ ಪದವಿ ಗಳಿಸಿದ್ದರು. ಹಿಂದಿಯ ಹೆಸರಾಂತ ಸಾಹಿತಿ ಶ್ರೀ ಹರ್ ಶಂಕರ್ ಪರ್ಸಾಯಿ ಅವರ ಅನೇಕ ಬರಹಗಳನ್ನು ಕನ್ನಡಕ್ಕೆ ಬಾಷಾಂತರ ಮಾಡಿ ಸ್ವಂತ ಖರ್ಚಿನಲ್ಲಿ ಪ್ರಕಟಿಸಿದ್ದರು. ಇವರು ಧೀರ್ಘಕಾಲ ಕುಂದಾಪುರ ಭಂಡಾರ್ ಕಾರ್ಸ್  ಕಾಲೇಜಿನಲ್ಲಿ ಹಿಂದಿ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸಿದ್ದರು.  ಅವರು ಪತ್ನಿ ಹಾಗೂ ನಿವ್ರತ್ತ ಶಿಕ್ಷಕಿ ಕಮಲ ಹಾಗೂ ಮಗ ಪ್ರಜ್ಞಾನ, ಮಗಳು ಅಶ್ವಿನಿ, ಅಪಾರ ಬಂಧು ಬಳಗ ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ.

ಮಾರ್ಕ್ಸ್ವಾದಿ ಚಿಂತಕ, ಬರಹಗಾರ, ಭಾಷಾಂತರಕಾರ ಹೀಗೆ ಹಲವು ಪ್ರತಿಭೆಗಳ ವಿದ್ವಾಂಸರಾಗಿದ್ದರು.ವೈಚಾರಿಕ ಹಾಗೂ ಪ್ರಗತಿಪರ ಸಾಹಿತ್ಯದಲ್ಲಿ 50ಕ್ಕೂ ಹೆಚ್ಚು ಗ್ರಂಥ ರಚಿಸಿದ್ದ ಭಾಸ್ಕರ್ ಮಯ್ಯ ಅವರ ನಿಧನ ಸಾಹಿತ್ಯ ಲೋಕ ಮತ್ತು ಪ್ರಗತಿಪರ ಚಿಂತಕರಿಗೆ ತುಂಬಲಾರದ ನಷ್ಟವಾಗಿದೆ. ಪಕ್ಷದ ಉಡುಪಿ ಜಿಲ್ಲಾ ಮುಖಂಡರಾದ ಬಾಲಕ್ರಷ್ಣ ಶೆಟ್ಟಿ, ಕೆ.ಶಂಕರ್ ಮತ್ತು ಹೆಚ್.ನರಸಿಂಹ ಕಟ್ಟಡ ಕಾರ್ಮಿಕ ಸಂಘದ ಮುಖಂಡರಾದ ರಾಮ ಕಾರ್ಕಡ ಅವರು ಕೋವಿಡ್ ನಿಯಮ ಪಾಲಿಸಿ, ಅವರ ಮನೆಗೆ ತೆರಳಿ ಅಂತಿಮ ನಮನ ಸಲ್ಲಿಸಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

1 thought on “ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಖ್ಯಾತ ಸಾಹಿತಿ ಡಾ.ಜಿ.ಭಾಸ್ಕರ್ ಮಯ್ಯ ಇನ್ನಿಲ್ಲ

  1. ದುಃಖದ ಸಂಗತಿ. ಮ್ರತರ ಆತ್ಮಕ್ಕೆ ಶಾಂತಿ ಸಿಗಲಿ.

Leave a Reply

Your email address will not be published. Required fields are marked *

error: Content is protected !!