ಉಪ್ಪೂರು: ರುದ್ರ ಭೂಮಿಯಲ್ಲೊಂದು ಶಟಲ್ ಬ್ಯಾಡ್ಮಿಂಟನ್ ಕೊರ್ಟ್…!

ಉಡುಪಿ ಮೇ.5(ಉಡುಪಿ ಟೈಮ್ಸ್ ವರದಿ): ಉಪ್ಪೂರು ಗ್ರಾಮದ ಒಂದನೇ ವಾರ್ಡಿನ ಮುಟ್ಟಿಕಲ್ ಭಾಗದ ಸರ್ವೆ ನಂಬರ್ 221ರ ಹಿಂದೂ ರುದ್ರ ಭೂಮಿಯ ಕಟ್ಟಡದೊಳಗೆ ಶಟಲ್ ಬ್ಯಾಡ್ಮಿಂಟನ್ ಕೊರ್ಟ್ ನಿರ್ಮಾಣ ಮಾಡಿರುವುದಕ್ಕೆ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿದೆ.

ಈ ಯೋಜನೆಯ ವಿರುದ್ದ ಧ್ವನಿ ಎತ್ತಿರುವ ಗ್ರಾಮಸ್ಥರು, ಗ್ರಾಮ ಪಂಚಾಯತಿಯ ಸಭೆಯಲ್ಲಿ ನಿರ್ಣಯವಾಗದೇ ಇರುವುದರಿಂದ ಈ ಜಾಗದಲ್ಲಿ ಅಕ್ರಮವಾಗಿ ಕ್ರೀಡಾಂಗಣವನ್ನು ನಿರ್ಮಿಸುವುದು ಸರಿನಾ…? ಎಂದು ಪ್ರಶ್ನಿಸಿದ್ದು, ಅಧಿಕಾರವಿದೆಯೆಂದು ಏನೂ ಬೇಕಾದರೂ ಮಾಡಬಹುದೇ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕ್ರೀಡಾಂಗಣವನ್ನು ನಿರ್ಮಿಸಿರುವುದು ಸರಕಾರಿ ಜಾಗದಲ್ಲಿ, ಅದೂ ಹಿಂದೂ ರುದ್ರಭೂಮಿಯ ಒಳಭಾಗದಲ್ಲಿ. ಈ ರುದ್ರ ಭೂಮಿಯು 2021ರಲ್ಲಿ ಉಪ್ಪೂರು ಗ್ರಾಮ ಪಂಚಾಯತ್ತಿಗೆ ಹಸ್ತಾಂತರಗೊಂಡಿದ್ದು ಇದರ ಬಳಕೆ ಯಾವುದಕ್ಕೆ ಮತ್ತು ಇಲ್ಲಿ  ಯಾವ ಚಟುವಟಿಕೆ ನಡೆಸಬೇಕು ಎನ್ನುವುದನ್ನು ಸ್ಥಳಿಯಾಡಳಿತವಾದ ಉಪ್ಪೂರು  ಪಂಚಾಯತ್ ನಿರ್ಣಯವನ್ನು ಮಾಡಬೇಕಿದೆ. ಈ ರುದ್ರ ಭೂಮಿ ಜಾಗದ ಅಭಿವೃದ್ಧಿಗೆ ಮತ್ತು ಕಾಮಗಾರಿಗಳಿಗೆ ಹಾಗೂ ಸ್ಮಶಾನಕ್ಕೆ ಬೇಕಾಗುವ ಸಾಮಗ್ರಿಗಳನ್ನು  ಮಾಜಿ ಶಾಸಕರು ನೀಡಿದ್ದರು. ಆದರೆ ಈ ರುದ್ರ ಭೂಮಿಯ ಜಾಗದಲ್ಲಿ ಅಕ್ರಮವಾಗಿ ಕಾನೂನು ಬಾಹಿರವಾಗಿ ಬ್ಯಾಡ್ಮಿಂಟನ್ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. 

ಇನ್ನು ಈ ಕಾಮಗಾರಿಯ ಜೊತೆಗೆ ಬೇರೆ ಬೇರೆ ಅವ್ಯವಹಾರವೂ ನಡೆದಿರುತ್ತದೆ ಎಂದು ಆರೋಪಿಸಿರುವ ಗ್ರಾಮಸ್ಥರು ಈ ಕಾಮಗಾರಿಗೆ ಮುಖ್ಯ ಕಾರಣಕರ್ತರು ರುದ್ರಭೂಮಿಯ ಉಸ್ತುವಾರಿಯನ್ನು ಹೊತ್ತಿರುವ ಜಯಕರ ಆಚಾರಿಯವರು. ಇದರ ಜೊತೆಗೆ ಈಗಿನ ಗ್ರಾಮ ಪಂಚಾಯತ್ ಸದಸ್ಯನೊಬ್ಬ ತನ್ನ ಹೆಸರನ್ನು ಗಳಿಸುವ ಒಂದು ಒಂದು ಹುನ್ನಾರವಿದೆ, ಅದಲ್ಲದೇ ಬೇರೆ ಬೇರೆ ಅವ್ಯವಹಾರವೂ ನಡೆದಿರುತ್ತದೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಲಂಕುಷವಾಗಿ ತನಿಖೆ ನಡೆಸಬೇಕು ಹಾಗೂ ಈ ಅವವ್ಯಸ್ಥಿತ  ಅವ್ಯವಹಾರದ ಹಿಂದೆ ಸ್ಥಳಿಯಾಡಳಿತ ಹಾಗೂ ಜನ ಪ್ರತಿನಿಧಿಗಳ ಕುಮ್ಮಕ್ಕು ಇದೆ. ಈ ಎಲ್ಲಾ ಅವ್ಯವಸ್ಥೆ ಯೋಜನೆಗೆ ಆದಷ್ಟೂ ಬೇಗ ಕಡಿವಾಣವನ್ನು ಹಾಕದಿದ್ದರೆ ಮುಂದಿನ ದಿನಗಳಲ್ಲಿ ಊರಿನ ಜನರು ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಿ ನೋವು ಕಷ್ಟದ ಫಲವನ್ನು ಅನುಭವಿಸಬೇಕಾಗಬಹುದು‌ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. 

ಕೋವಿಡ್ ಸಂಕಷ್ಟದ ಸಮಯದಲ್ಲಿ ಜನರಿಗೆ ಲಾಭವಿಲ್ಲದ ಇಂತಹ ಯೋಜನೆಗಳು ಅಗತ್ಯವಿದೆಯೇ ಎಂದು ಕೇಳಿರುವ ಗ್ರಾಮಸ್ಥರು ಈ ಯೋಜನೆಯನ್ನು ಮೇ.5 ರಂದು ಈಗಿನ  ಕೊಳಲಗಿರಿ ಒಂದನೇ ವಾರ್ಡಿನ ಪಂಚಾಯತ್ ಸದಸ್ಯ ಹಾಗೂ ಇಲೆವೆನ್ ಸ್ಟಾರ್ಸ್ ಸ್ಪೋರ್ಟ್ಸ್ ಕ್ಲಬ್, ಮುಟ್ಟಿಕಲ್ ಇವರೊಂದಿಗೆ ಸೇರಿ ನಿರ್ಮಿಸಿದ್ದು, ಉಪ್ಪೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣರಾಜ್ ಕೋಟ್ಯಾನ್, ಉಪಾಧ್ಯಕ್ಷೆ ವಿದ್ಯಾ ಆಚಾರ್ಯ ಉದ್ಘಾಟಿಸಿದ್ದಾರೆ ಎಂದು ತಿಳಿಸಿದ್ದಾರೆ.

2 thoughts on “ಉಪ್ಪೂರು: ರುದ್ರ ಭೂಮಿಯಲ್ಲೊಂದು ಶಟಲ್ ಬ್ಯಾಡ್ಮಿಂಟನ್ ಕೊರ್ಟ್…!

  1. ಶುದ್ಧ ಸುಳ್ಳು ಆರೋಪ,,, ಗ್ರಾಮದ ಅಭಿವೃದ್ದಿಯನ್ನು ಸಹಿಸದ ಮಾಜಿ ಸದಸ್ಯನ ಸುಳ್ಳು ಆಪಾದನೆ.

  2. ಸುಮ್ಮನೆ ಕೈಲಾಗದವನು ಹೀಗೆ ಮಾಡೋದು… ಇವರ ಮನಸ್ಥಿತಿ ನೋಡಿದರೆ ಅಯ್ಯೋ ಅನ್ನಿಸುತ್ತೆ…. ಪಾಪ ಚುನಾವಣೆ ಅಲ್ಲಿ ಹೀನಾಯ ಸೋಲು.. ಅದರಿಂದಾಗಿ ಮಾನಸಿಕ ಒತ್ತಡ ಮತ್ತು ಚುನಾವಣೆ ಸೋಲು e ರೀತಿ ಮಾಡುವಂತೆ ಮಾಡಿದೆ ಅಷ್ಟೇ… ಯಾರೋ ಹೇಳಿದ ವಿಷಯ ಕೇಳುವ ಮುನ್ನ ಉಡುಪಿ ಟೈಮ್ಸ್ ನವರು ವಿಷಯ ಏನು ಅಂತ ಸರಿಯಾಗಿ ತಿಳಿದುಕೊಂಡು ಆನಂತರ ಪ್ರಕಟಿಸಿದರೆ ಒಳ್ಳೆಯದು… ಸುಮ್ಮನೆ ಗೊತ್ತಿಲ್ಲದ ವಿಷಯ ಪ್ರಕಟಸಿಟಬೇಡಿ… ಯಾಕೆಂದರೆ ಪ್ರತಿಯೊಂದು ಕತೆಗೂ ಎರಡು ಭಾಗ ಇರುತ್ತೆ… ನೀವು ಅದನ್ನ ತಿಳಿದು ಕೊಳ್ಳಲು ಪ್ರಯತ್ನಪಡಿ

    ಪ್ರಶಾಂತ್ ವೆಂಕಟೇಶ್ ದೇವಾಡಿಗ
    ಸಿವಿಲ್ ಎಂಜಿನಿಯರ್
    ಮುಟ್ಟಿಕಲ್

Leave a Reply

Your email address will not be published. Required fields are marked *

error: Content is protected !!