ಡಕಾಯಿತರಿಗೆ ಸೋಂಕು: ಪೊಲೀಸ್ ಸಿಬ್ಬಂದಿ, ಜಡ್ಜ್ ಗೆ ಕ್ವಾರಂಟೈನ್

ವಿಜಯಪುರ: ದರೋಡೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದ ಮೂವರು ದರೋಡೆಕೋರರ ಪೈಕಿ, ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರ ಜೊತೆ ಸಂಪರ್ಕದಲ್ಲಿದ್ದ 22 ಪೊಲೀಸರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

ಆಲಮೇಲ ಠಾಣೆ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣದ ಆರೋಪಿಗಳು ಜೂ. 17ರಂದು ಸಿಕ್ಕಿ ಬಿದ್ದಿದ್ದರು. ಬಳಿಕ ಅವರನ್ನು ಸಿಂದಗಿ ತಾಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ಹಾಗೂ ಕೊರೊನಾ ಪರೀಕ್ಷೆಗೊಳಪಡಿಸಲಾಗಿತ್ತು.ಜೂನ್ 20 ರಂದು ವರದಿ ಬಂದಿದ್ದು, ಮೂವರಲ್ಲಿ ಇಬ್ಬರು ಡಕಾಯಿತರಿಗೆ ಸೋಂಕು ದೃಢಪಟ್ಟಿತ್ತು, ಹೀಗಾಗಿ ಅವರನ್ನು ಜೈಲಿನಿಂದ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಈ  ಡಕಾಯಿತರು ಜೊತೆ ಸುಮಾರು 39 ಪೊಲೀಸ್ ಸಿಬ್ಬಂದಿ ಪ್ರಾಥಮಿಕ ಮತ್ತು ದ್ವಿತೀಯಸಂಪರ್ಕದಲ್ಲಿದ್ದರು

ಇಬ್ಬರು ಇನ್ಸ್ ಪೆಕ್ಟರ್ ಸೇರಿದಂತೆ 14 ಪೋಲೀಸ್ ಸಿಬ್ಬಂದಿ, ಜೆಎಂಎಫ್ ಸಿ ನ್ಯಾಯಾಲಯದ ಜಡ್ಜ್ ಮತ್ತು ಸಿಬ್ಬಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

14 ಮಂದಿ ಪೊಲೀಸರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು ಸಾಂಸ್ಥಿಕ ಕ್ವಾರಂಟೈನ್ ಗೆ ಒಳ ಪಡಿಸಲಾಗಿದೆ. ಈ ಮೂವರು ಡಕಾಯಿತರು ವಿವಿಧ ಜೈಲಿನಲ್ಲಿದ್ದರು. ಅವರಲ್ಲಿ ಇಬ್ಬರಿಗೆ ಕೊರೋನಾ ಸೋಂಕು ದೃಡವಾಗಿದೆ ಎಂದು ಎಸ್ ಅನುಪಮ್ ಅಗರ್ ವಾಲ್ ತಿಳಿಸಿದ್ದಾರೆ,. ನಾವು ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಿಲ್ಲ, ಸಿಬ್ಬಂದಿಯನ್ನು ಕೋವಿಡಾ ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ತಿಳಿಸಿದ್ದಾರೆ.

ಇನ್ನು ಭಾನುವಾರ ಒಂದೇ ದಿನ 39 ಜನರಿಗೆ ಸೋಂಕು ದೃಢಪಟ್ಟಿರುವುದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ. ಹೊಸ ಪ್ರಕರಣಗಳೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 286ಕ್ಕೇರಿದೆ.

Leave a Reply

Your email address will not be published. Required fields are marked *

error: Content is protected !!