3ನೇ ಅಲೆ ಇದಕ್ಕಿಂತ ಕೆಟ್ಟದಾಗಿರುತ್ತೆ, 4 ಪಟ್ಟು ಹೆಚ್ಚು ರೋಗಿಗಳನ್ನು ನಿಭಾಯಿಸಲು ಕಾರ್ಯಕ್ರಮ ರೂಪಿಸುತ್ತೇವೆ: ಶೋಭಾ

ಉಡುಪಿ ಮೇ.5(ಉಡುಪಿ ಟೈಮ್ಸ್ ವರದಿ) : ಕೋವಿಡ್ ನಿರ್ವಹಣೆಗೆ ಉಡುಪಿ ಜಿಲ್ಲೆಗೆ ಸಮರ್ಪಕ ಆಕ್ಸಿಜನ್ ಪೂರೈಕೆ ಆಗುತ್ತಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಕ್ಸಿಜನ್ ಉತ್ಪಾದನೆ ಆಗುತ್ತಿದೆ. ಆದರೆ ಅಸಮರ್ಪಕ ನಿರ್ವಹಣೆಯಿಂದ ಕೆಲವೆಡೆ ಸಮಸ್ಯೆ ಉಂಟಾಗಿದೆ. ಚಾಮರಾಜನಗರದ ಘಟನೆ ಬಳಿಕ ಸರಕಾರ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತಿದ್ದು ಪರಸ್ಪರ ಜಿಲ್ಲೆಯ ಜೊತೆ ಹೊಂದಾಣಿಕೆ ಮಾಡಲಾಗುತ್ತಿದೆ ಎಂದರು.

ಕರ್ನಾಟಕದಲ್ಲಿನ ಕೋವಿಡ್ ಬೆಡ್ ದಂಧೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ಇದೊಂದು ಅಮಾನವೀಯ ಬೆಳವಣಿಗೆ. ಬೆಡ್ ದಂದೆ ಕೊಲೆ ಮಾಡಿದಕಿಂತ ಘೋರ ಅಪರಾಧವಾಗಿದ್ದು, ಬೆಡ್ ದಂದೆ ಮಾಡಿದವರಿಗೆ 347 ಕೇಸು ದಾಖಲಿಸಬೇಕು ಎಂದರು.

ಪರಿಸ್ಥಿತಿ ದುರುಪಯೋಗ ಮಾಡುವವರು ರಾಕ್ಷಸರು. ಬೆಡ್ ದಂಧೆಯ  ವ್ಯವಸ್ಥಿತ ಜಾಲ ಸರ್ಕಾರಿ ವ್ಯವಸ್ಥೆಯ ಒಳಗೆ ನುಗ್ಗಿದ್ದು, ಈ ಕೃತ್ಯ ಎಸಗಿದವರ ವಿರುದ್ಧ ಕೊಲೆ ಕೇಸು ದಾಖಲು ಮಾಡಿ ಆ ಕಂಪನಿಯನ್ನು ಪೂರ್ತಿ ಬರ್ಕಾಸ್ತು ಮಾಡಬೇಕು. ಶಾಮೀಲಾದ ಎಲ್ಲರನ್ನೂ ಶಾಶ್ವತವಾಗಿ ಜೈಲಿನಲ್ಲಿ ಇಡಬೇಕು ಹಾಗೂ ಉಗ್ರ ಶಿಕ್ಷೆ ಕೊಡಬೇಕು ಎಂದು ಹೇಳಿದ್ದಾರೆ.

ಕರ್ನಾಟಕ ರಾಜ್ಯಕ್ಕೆ ಅಸಮರ್ಪಕ ಆಕ್ಸಿಜನ್ ಪೂರೈಕೆ ವಿಚಾರವಾಗಿ ಮಾತನಾಡಿದ ಅವರು, ಎಲ್ಲಾ ಸಂಸದರು ದೆಹಲಿಯ ಜೊತೆ ಸಂಪರ್ಕದಲ್ಲಿದ್ದೇವೆ. ಆಕ್ಸಿಜನ್ ಉತ್ಪಾದನೆ ಹೆಚ್ಚಳ ಮಾಡುವುದೊಂದೇ ಕೋವಿಡ್ ನಿರ್ವಹಣೆಗೆ ಪರಿಹಾರವಾಗಿದ್ದು, ಸಾಮರ್ಥ್ಯ ಮೀರಿ ಆಕ್ಸಿಜನ್ ಉತ್ಪಾದನೆಯಾಗುತ್ತಿದೆ.ತಾಲೂಕು ಆಸ್ಪತ್ರೆಯಲ್ಲಿ ಆಕ್ಷಿಜನ್ ಉತ್ಪಾದನೆಗೆ ಒತ್ತು ನೀಡುವ ಸಲುವಾಗಿ ಪಿಎಂ ಕೇರ್ ಮೂಲಕ ಪ್ರತಿ ತಾಲೂಕಿನಲ್ಲೂ ಆಕ್ಸಿಜನ್ ಉತ್ಪಾದನೆಗೆ ಹಣಕಾಸು ನೆರವು ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಎಲ್ಲಾ ಪ್ರಯತ್ನ ಮಾಡುತ್ತಿದೆ ಎಂದರು. ಇನ್ನು ಮೂರನೇ ಅಲೆ ಇದಕ್ಕಿಂತ ಕೆಟ್ಟದಾಗಿರುತ್ತೆ ಎಂಬುದನ್ನು ಅರಿತಿದ್ದೇವೆ ಆದ್ದರಿಂದ  ನಾಲ್ಕು ಪಟ್ಟು ಹೆಚ್ಚು ರೋಗಿಗಳನ್ನು ನಿಭಾಯಿಸಲು ಕಾರ್ಯಕ್ರಮ ರೂಪಿಸುತ್ತೇವೆ. ಆಸ್ಪತ್ರೆಯಲ್ಲಿ ಬೆಡ್ ಹೆಚ್ಚಳ ಮಾಡುವುದು, ಹಾಸ್ಟೆಲ್ ಗಳಲ್ಲಿ ರೋಗಿಗಳ ಚಿಕಿತ್ಸೆಗೆ ಕೋವಿಡ್ ಸೆಂಟರ್ ತೆರೆಯುತ್ತೇವೆ ಎಂದರು.

Leave a Reply

Your email address will not be published. Required fields are marked *

error: Content is protected !!