ಬರೋಬ್ಬರಿ 9 ಮಕ್ಕಳಿಗೆ ಜನ್ಮ ನೀಡಿದ ಮಹಾ ತಾಯಿ!
ಮಾಲಿ ಮೇ.5: ಮಹಿಳೆಯರು ಅವಳಿ ಜವಳಿ, ತ್ರಿವಳಿ ಮಕ್ಕಳಿಗೆ ಜನ್ಮ ನೀಡುವ ಘಟನೆಗಳು ಅಲ್ಲಲ್ಲಿ ಸಾಮಾನ್ಯ ಎಂಬಂತೆ ನಡೆಯುತ್ತಿರುತ್ತದೆ.
ಆದರೆ ತ್ರಿವಳಿಗಿಂತ ಹೆಚ್ಚಿನ ಮಕ್ಕಳಿಗೆ ಜನ್ಮ ನೀಡಿದರೆ ಅದರು ಅಪರೂಪದ ಘಟನೆಯೆಂದು ಪರಿಗಣಿಸಲ್ಪಡುತ್ತದೆ. ಅಂತಹದ್ದೇ ಅಪರೂಪದ ಘಟನೆಯೊಂದು ಮಾಲಿ ದೇಶದಲ್ಲಿ ನಡೆದಿದೆ.
ಇಲ್ಲಿನ ಹಲೀಮಾ ಸಿಸ್ಸೆ ಎಂಬ 25 ರ ಹರೆಯದ ಮಹಿಳೆಯೊಬ್ಬರು ಬರೋಬ್ಬರಿ 9 ಮಕ್ಕಳಿಗೆ ಜನ್ಮ ನೀಡಿ ಮಹಾ ತಾಯಿ ಎನಿಸಿಕೊಂಡಿದ್ದಾರೆ. ಹಲೀಮಾ ಸಿಸ್ಸೆ ಅವರು ಗರ್ಭಿಣಿಯಾಗಿದ್ದಾಗ ವೈದ್ಯರು 7 ಶಿಶುಗಳು ಹೊಟ್ಟೆಯಲ್ಲಿ ಇರುವುದಾಗಿ ತಿಳಿಸಿದ್ದರು. ಆದರೆ ಇದೀಗ 9 ಮಕ್ಕಳಿಗೆ ಜನ್ಮ ನೀಡಿರುವುದು ಆಚ್ಚರಿ ಮೂಡಿಸಿದೆ.
ಈ ಬಗ್ಗೆ ಮಾಲಿ ಸರ್ಕಾರ ಕೂಡ ಖಚಿತ ಪಡಿಸಿದೆ. ಎಲ್ಲಾ ಮಕ್ಕಳನ್ನು ಸಿಸೇರಿಯನ್ ಮೂಲಕ ಹೆರಿಗೆ ಮಾಡಲಾಗಿದ್ದು, ಐದು ಹೆಣ್ಣು ಮತ್ತು ನಾಲ್ಕು ಗಂಡು ನವಜಾತ ಶಿಶುಗಳು ಹಾಗೂ ತಾಯಿ ಆರೋಗ್ಯವಾಗಿದ್ದಾರೆ ಎಂದು ಮಾಲಿಯ ಆರೋಗ್ಯ ಸಚಿವ ಫಾಂಟಾ ಸಿಬಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.