ಧರ್ಮಸ್ಥಳ ಸೇವಾ ಸ.ಬ್ಯಾಂಕ್‌ ಸಿಇಒ ಆತ್ಮಹತ್ಯೆ ಪ್ರಕರಣ: ಇಬ್ಬರು ನಿರ್ದೇಶಕರ ವಿರುದ್ದ ದೂರು ದಾಖಲು

ಬೆಳ್ತಂಗಡಿ, ಮೇ 05 (ಉಡುಪಿ ಟೈಮ್ಸ್ ವರದಿ) : ಧರ್ಮಸ್ಥಳ ಸೇವಾ ಸಹಕಾರಿ ಬ್ಯಾಂಕ್‌ ಸಿಇಒ ರವೀಂದ್ರನ್ ಡಿ. ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ನಿರ್ದೇಶಕರ ವಿರುದ್ದ ದೂರು ದಾಖಲಾಗಿದೆ.

ನಿರ್ದೇಶಕರಾದ ಜಯರಾಂ ಭಂಡಾರಿ ಹಾಗೂ ರಘುಚಂದ್ರ ವಿರುದ್ದ ಪ್ರಕರಣ ದಾಖಲಾಗಿದೆ. ರವೀಂದ್ರನ್‌ ಅವರು ಬರೆದಿದ್ದ ಡೆತ್ ನೋಟ್  ನ ಪ್ರತಿ ಅವರ ಮೊಬೈಲ್‌ನಲ್ಲಿ ದೊರಕಿತ್ತು. ಇದೀಗ ರವೀಂದ್ರನ್ ಡಿ ಅವರು ಆತ್ಮಹತ್ಯೆಗೂ ಮುನ್ನ ಬರೆದ ಪತ್ರ ಹಾಗೂ ಅವರ ಪತ್ನಿ ಉಷಾ ಎಂ.ಕೆ. ನೀಡಿದ ದೂರಿನ ಆಧಾರದಲ್ಲಿ ಇಬ್ಬರು ನಿರ್ದೇಶಕ ರ ವಿರುದ್ಧ ಪ್ರಕರಣ  ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ರವೀಂದ್ರನ್ ಅವರು ಮೇ.3 ರಂದು ಬೆಳ್ಳಗ್ಗೆ 7:30ರ ವೇಳೆಗೆ ಕಛೇರಿಗೆ ಬಂದು ತಮ್ಮ ಹಾಜರಿಯನ್ನು ನಮೂದಿಸಿದ್ದರು. ಅದರೆ  ಮಧ್ಯಾಹ್ನದ ವೇಳೆಗೆ ಸಂಘದ ಅಟಲ್ ಜಿ ಸಭಾಭವನದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು.
ಇನ್ನು ಅವರ ಡೆತ್ ನೋಟ್ ನಲ್ಲಿ ಮೋಸದಿಂದ ಅಧ್ಯಕ್ಷರ ಮೇಲೆ ಒತ್ತಡ ಹೇರಿದವರನ್ನು ಕ್ಷಮಿಸಲ್ಲ. ಸಂಘಕ್ಕಾಗಿ ಇಡೀ ಜೀವನವನ್ನು ಮುಡಿಪಾಗಿಟ್ಟು ಈಗ ಕೊನೆಗಾಲದಲ್ಲಿ ಮುಟ್ಟಾಳರಿಂದ ಅವಮಾನಕ್ಕೆ ಒಳಗಾಗಲು ಬಯಸಲ್ಲ ಎಂದು ಬರೆದಿದ್ದರು. ಈ ಪತ್ರದ ಹಿನ್ನೆಲೆಯಲ್ಲಿ ನಿರ್ದೇಶಕರ ಮಾನಸಿಕ ಕಿರುಕುಳದಿಂದಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!