ಕಳೆದ ಬಾರಿಯಂತೆ ಶಾಲೆ, ವಸತಿಗ್ರಹ, ಸಮುದಾಯ ಭವನ ಕೋವಿಡ್ ಸೆಂಟರ್’ಗಳಾಗಿ ಪರಿವರ್ತಿಸಿ: ಯೋಗೀಶ್ ಶೆಟ್ಟಿ

ಉಡುಪಿ: ದೇಶದ ಇತರೆ ರಾಜ್ಯಗಳಲ್ಲಿ ಮತ್ತು ನಮ್ಮ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಆದ ಹಾಗೆ ಆಸ್ಪತ್ರೆಗಳಲ್ಲಿ , ಆಕ್ಸಿಜನ್ ಬೆಡ್, ವೆಂಟಿಲೇಟರ್,ಆಂಬುಲೆನ್ಸ್,ರಿಮಿಡಿಸಿವರ್, ಔಷಧಿ, ವ್ಯೆದ್ಯರು ,ನರ್ಸ್, ಇತರೆ ಸಿಬ್ಬಂದಿಗಳ ಕೊರತೆಗಳು ನಮ್ಮ ಜಿಲ್ಲೆಯಲ್ಲಿ ಆಗಬಾರದು ಇದಕ್ಕೆ ಮಾನ್ಯ ಜಿಲ್ಲಾಧಿಕಾರಿಯವರು ಸೂಕ್ತ ಕ್ರಮ ಕೈಗೊಳ್ಳಬೇಕು.

ಕೋವಿಡ್ 2ನೇ ಅಲೆಯನ್ನು ವ್ಯವಸ್ಥಿತವಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಕಳೆದ ಬಾರಿ ವ್ಯವಸ್ಥೆ ಮಾಡಿದ ರೀತಿಯಂತೆ ಶಾಲೆಗಳಲ್ಲಿ, ವಸತಿಗ್ರಹ, ಸಮುದಾಯ ಭವನಗಳನೆಲ್ಲಾ ಕೋವಿಡ್ ಸೆಂಟರ್ ಗಳಾಗಿ  ಪರಿವರ್ತಿಸಿ, ಪ್ರಾಥಮಿಕ ಲಕ್ಷಣಗಳು ಕಾಣಿಸಿದ ವ್ಯಕ್ತಿಗಳನ್ನು, ಈ ಸೆಂಟರ್ ಗಳಲ್ಲಿ  ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿದರೆ ಒಳಿತು.

ಪ್ರಾಥಮಿಕ ಲಕ್ಷಣ ಇದ್ದವರನ್ನು ಆಸ್ಪತ್ರೆಗಳಲ್ಲಿ ಸೇರಿಸಿ ಚಿಕಿತ್ಸೆ ನೀಡಿದರೆ, ಕೋವಿಡ್ ದೃಢಪಟ್ಟ ಮೇಜರ್ ಸಮಸ್ಯೆ ಆದ ವ್ಯಕ್ತಿಗೆ ಚಿಕಿತ್ಸೆ ನೀಡುವಾಗ ಆಸ್ಪತ್ರೆಗಳ ಸಮಸ್ಯೆ, ಆಕ್ಸಿಜನ್, ಬೆಡ್,ವೆಂಟಿಲೇಟರ್ ಲಭ್ಯತೆ ಸಮಸ್ಯೆಯಾಗಿ ಟ್ರೀಟ್ಮೆಂಟ್ನಿಂದ ಅಂತವರು ವಂಚಿತ ರಾಗಬಾರದು ಆದುದರಿಂದ ಕೋವಿಡ್ ಪೇಷಂಟನ ಚಿಕಿತ್ಸೆ ಬಗ್ಗೆ ಜಿಲ್ಲಾಡಳಿತ ಸೂಕ್ತ ಗಮನ ಹರಿಸಬೇಕು. ಏನು ನ್ಯೂನತೆ ಆದರೂ ಸರಕಾರ, ಜಿಲ್ಲಾಡಳಿತ ನೇರ ಹೊಣೆಯಾಗುತ್ತದೆ. ಅಂತೆಯೇ ನಾಗರಿಕ ಸಹಾಯವಾಣಿ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಬೇಕು.

ಜಿಲ್ಲೆಯಲ್ಲಿ ಕೊರೋನ ರೋಗ ನಿರೋದಕ ಲಸಿಕೆಯು ಸಮರ್ಪಕವಾಗಿ ಸರಕಾರಿ ಆಸ್ಪತ್ರೆ ಗಳಲ್ಲಿ ಲಭ್ಯವಿಲ್ಲದೆ ಜನರು ಸರತಿ ಸಾಲಿನಲ್ಲಿ ನಿಂತು ಸರಿಯಾದ ಮಾಹಿತಿ ಇಲ್ಲದೆ ಬಳಲುತಿದಾರೆ.ಇದಕ್ಕೆ ತಕ್ಕ ವ್ಯವಸ್ಥೆ/ಮಾಹಿತಿಯನ್ನು ನೀಡಬೇಕು.ನಮ್ಮ ಜಿಲ್ಲೆಯಲ್ಲಿ ಕೋವಿಡ್ ಲಸಿಕೆಯು ನಿರಂತರ ಲಭ್ಯವಿರಬೇಕು. ನಮ್ಮ ಪಕ್ಷದ ನಾಯಕರಿಗೆ,ಕಾರ್ಯಕರ್ತರಿಗೆ, ಈಗಾಗಲೇ ಜನಸಾಮಾನ್ಯರೊಂದಿಗೆ ನಿಕಟ ಸಂಪರ್ಕದಲ್ಲಿದು ಅವರಿಗೆ ಸಹಾಯವನ್ನು ಮತ್ತು ಇನ್ನಿತರ ವ್ಯವಸ್ಥೆಯನ್ನು ಮಾಡಿ ಕೊಡಬೇಕೆಂದು ಸೂಚಿಸಿರುತೇನೆ. ಅಂತೆಯೇ ನಾನು ಕೂಡ ಜನಸಾಮಾನ್ಯರೊಂದಿಗೆ ಇದ್ದು ಸಹಾಯ ಮಾಡುತ್ತಿದ್ದೇನೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರು 

Leave a Reply

Your email address will not be published. Required fields are marked *

error: Content is protected !!