ಉಡುಪಿ: ಅಧಿಕಾರಿಗಳ ಕಣ್ತಪ್ಪಿಸಿ ಬೆಳಗಾವಿಗೆ ಹೊರಟಿದ್ದ ಖಾಸಗಿ ಬಸ್ ವಶಕ್ಕೆ
ಉಡುಪಿ, ಮೇ. 4(ಉಡುಪಿ ಟೈಮ್ಸ್ ವರದಿ): ಅಧಿಕಾರಿಗಳ ಕಣ್ತಪ್ಪಿಸಿ ಬೆಳಗಾವಿಗೆ ಹೊರಟಿದ್ದ ಖಾಸಗಿ ಬಸ್ ನ್ನು ಉಡುಪಿ ಪೊಲೀಸರು ಮುಟ್ಟುಗೋಲು ಹಾಕಿದ ಘಟನೆ ಇಂದು ನಗರ ಚೆಕ್ ಪೋಸ್ಟ್ ನಲ್ಲಿ ನಡೆದಿದೆ.
ರೋಗಿಯನ್ನು ಕರೆದುಕೊಂಡು ಹೋಗುವ ನೆಪದಲ್ಲಿ ಈ ಬಸ್ ಮಂಗಳೂರಿನಿಂದ ಬೆಳಗಾವಿಗೆ ಹೊರಟಿತ್ತು ಎಂದು ತಿಳಿದು ಬಂದಿದೆ. ಮಂಗಳೂರಿನಿಂದ ಹೊರಟಿದ್ದ ಈ ಬಸ್ ನಲ್ಲಿ ಓರ್ವ ರೋಗಿ ಹಾಗೂ 11 ಮಂದಿ ಪ್ರಯಾಣಿಕರು ಇದ್ದರು. ಈ ಬಸ್ ನ್ನು ಉಡುಪಿ ನಗರದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಬಸ್ ನ್ನು ನಿಲ್ಲಿಸಿದ್ದು ಈ ವೇಳೆ ಸಂಶಯಗೊಂಡ ಪೊಲೀಸರು ಪರಿಶೀಲನೆ ನಡೆಸಿ ಬಸ್ ನ್ನು ವಶಕ್ಕೆ ಪಡೆದಿದ್ದಾರೆ.
ಇದೀಗ ಬಸ್ ಸಂಚಾರಕ್ಕೆ ಅವಕಾಶವಿಲ್ಲದಿದ್ದರೂ ಪ್ರಯಾಣಿಕರ ಸಂಚಾರಕ್ಕೆ ಬಳಸಿಕೊಂಡ ಬಸ್ ನ್ನು ವಶಪಡಿಸಿ ಕೊಂಡ ಪೊಲೀಸರು ರೋಗಿಯನ್ನು ಕಳುಹಿಸಲು ಬದಲಿ ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.