ಧರ್ಮಸ್ಥಳ ಬ್ಯಾಂಕ್’ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆತ್ಮಹತ್ಯೆ ಪ್ರಕರಣ: ಇಬ್ಬರ ಹೆಸರು ಬರೆದ ಡೆತ್ ನೋಟ್ ಪತ್ತೆ!
ಉಡುಪಿ ಮೇ.4(ಉಡುಪಿ ಟೈಮ್ಸ್ ವರದಿ): ಧರ್ಮಸ್ಥಳ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಇದೀಗ, ಧರ್ಮಸ್ಥಳ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನ್ ಡಿ. ಅವರು ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದರು ಎಂಬ ಮಾಹಿತಿ ಯೊಂದು ವರದಿಯಾಗಿದೆ. ಇನ್ನು ಡೆತ್ ನೋಟ್ ನಲ್ಲಿ ಜಯರಾಮ್ ಭಂಡಾರಿ ಮತ್ತು ರಘುಚಂದ್ರ ಎಂಬವರ ಹೆಸರು ಪ್ರಸ್ತಾಪಿಸಿದ್ದು, ಮೋಸದಿಂದ ಅಧ್ಯಕ್ಷರ ಮೇಲೆ ಒತ್ತಡ ಹೇರಿದ ಇವರನ್ನು ಕ್ಷಮಿಸುವುದಿಲ್ಲ ಎಂದು ಬರೆದಿದ್ದಾರೆ.
ಜೊತೆಗೆ ನನ್ನ ಮಗಳಿಗೆ ಕ್ಲರ್ಕ್ ಕೆಲಸ ಕೊಡಿಸಿ ಎಂದಿರುವ ಅವರು, ಇಡೀ ಜೀವನವನ್ನು ಸಂಘಕ್ಕಾಗಿ ಮೀಸಲಿಟ್ಟ ನಾನು ಅಂತ್ಯಕಾಲದಲ್ಲಿ ಮುಟ್ಟಳರಿಂದ ಅಮಾನತಾಗಲು ಬಯಸೋದಿಲ್ಲ. ಸನ್ಮಿತ್ರ ಸಹೋದ್ಯೋಗಿಗಳಿಗೆ ಶುಭಾಶಯಗಳು. ಶತ್ರುಗಳನ್ನು ಸುಮ್ಮನೆ ಬಿಡೋದಿಲ್ಲ ಎಂದು ಬರೆದಿದ್ದಾರೆ.