ಮೀನುಗಾರಿಕಾ ಬಂದರಿನಲ್ಲಿ ಸಾರ್ವಜನಿಕರು ಮೀನು ಖರೀದಿಗೆ ಅವಕಾಶವಿಲ್ಲ: ಜಿಲ್ಲಾಧಿಕಾರಿ

ಮಂಗಳೂರು, ಮೇ.03 :- ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿಚಿಲ್ಲರೆ ಮೀನು ಮಾರಾಟಗಾರರಿಂದ ಮೀನು ಮಾರಾಟ ಮಾಡುವುದು ಹಾಗೂ ಸಾರ್ವಜನಿಕರು ಮೀನು ಖರೀದಿ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಸೂಚಿಸಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶಾಸಕರು ಹಾಗೂ ಮೀನುಗಾರಿಕಾಇಲಾಖೆಯ ಅಧಿಕಾರಿಗಳ ಜೊತೆ ಹಳೆ ಬಂದರುಗಳಲ್ಲಿ ಕೋವಿಡ್ ಮಾರ್ಗ ಸೂಚಿಗಳನ್ನು ಪಾಲನೆ ಮಾಡುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾರ್ವಜನಿಕರು ಮೀನುಗಾರಿಕಾ ಬಂದರಿನಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಸಾಮಾಜಿಕಅಂತರವನ್ನು ಕಾಯ್ದುಕೊಳ್ಳದೆ ಮೀನು ಖರೀದಿಗೆ ಜನ ಜಂಗುಳಿಯಾಗುತ್ತಿದ್ದು, ಇದರಿಂದ ಸೋಂಕು ಹರಡುವ ಸಾಧ್ಯತೆ ಇರುವ ಹಿನ್ನಲೆ ಸಾರ್ವಜಿನಿಕರು ಮೀನುಗಾರಿಕಾ ಬಂದರಿನಲ್ಲಿ ಮೀನು ಖರೀದಿ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ, ಒಂದು ವೇಳೆ ನಿಯಮಗಳ ಉಲ್ಲಂಘನೆ ಮಾಡಿದರೆ ಅಂತವರ ವಿರುದ್ಧ ದಂಡ ವಸೂಲಿ ಮಾಡುವುದರೊಂದಿಗೆ ನಿರ್ದಾಕ್ಷಿಣ್ಯಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಸಾರ್ವಜನಿಕರು ಮೀನುಗಳನ್ನು ಸ್ಥಳೀಯ ವ್ಯಾಪ್ತಿಯ ಮೀನು ಮಾರುಕಟ್ಟೆಗಳಲ್ಲಿ ಖರೀದಿಸಬಹುದಾಗಿದೆ, ಅಲ್ಲದೇ ಸ್ಥಳೀಯ ಮಾರುಕಟ್ಟೆಗಳಲ್ಲಿಯೇ ಕಟ್ಟಿಂಗ್ ಮಾಡುವುದು ಮತ್ತು ಶುಚಿಗೊಳಿಸುವುದು ಅವಶ್ಯ ಎಂದರು. ಮಂಗಳೂರು ಮೀನುಗಾರಿಕಾ ಬಂದರಿನ ಒಳಗೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊರರಾಜ್ಯದಿಂದ ಮೀನು ಬರುವ ಹೋಲ್ ಸೇಲ್ ಮಾರುಕಟ್ಟೆಯಲ್ಲಿ ರಿಟೇಲ್ ಮತ್ತುಚಿಲ್ಲರೆ ವ್ಯಾಪಾರವನ್ನುಕಡ್ಡಾಯವಾಗಿ ನಿಷೇಧಿಸಲಾಗಿದೆ, ಮೇಲ್ಕಾಣಿಸಿದ ಸೂಚನೆಗಳನ್ನು ಉಲ್ಲಂಘನೆ ಮಾಡಿದ್ದಲ್ಲಿಅಂತವರ ಮೇಲೆ ವಿಪತ್ತು ನಿರ್ವಹಣೆ  ಕಲಂ 51 ರಡಿ ಹಾಗೂ ಕರ್ನಾಟಕ ಸಾಂಕ್ರಾಮಿಕರೋಗಅಧಿನಿಯಮದಡಿ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು ಎಂದರು.

ಸಾರ್ವಜನಿಕರು ಅನಾವಶ್ಯಕವಾಗಿ ಮೀನುಗಾರಿಕಾ ಬಂದರಿನಲ್ಲಿ ಓಡಾಡುವುದನ್ನು ಕಡ್ಡಾಯವಾಗಿ ನೀಷೇಧಿಸಲಾಗಿದೆ ಅನಾವಶ್ಯಕವಾಗಿಓಡಾಡುವುದುಕಂಡುಬಂದಲ್ಲಿಅಂತವರ ಮೇಲೆ ಕಾನೂನಿನಡಿಯಲ್ಲಿಕ್ರಮ ಕೈಗೊಳ್ಳಲಾಗುವುದು ಎಂದರು.
ಬಂದರಿನಲ್ಲಿ ಕೋವಿಡ್ ಮಾರ್ಗಸೂಚಿಗಳು ಸೇರಿದಂತೆ ಚಿಲ್ಲರೆ ಮಾರಾಟ ನಿಷೇಧಉಲ್ಲಂಘನೆ ನಿಯಂತ್ರಿಸಲು ಅಧಿಕಾರಿಗಳು ಮುಂದಾಗಬೇಕು. ಉಲ್ಲಂಘಿಸುವವರ ವೀಡಿಯೋ-ಚಿತ್ರಗಳನ್ನು ಸಂಗ್ರಹಿಸುವಂತೆ ಸೂಚಿಸಿದ ಅವರು ಇವುಗಳ ನಿಯಂತ್ರಣಕ್ಕೆ ಹೆಚ್ಚಿನ ಹೋಮ್‍ಗಾಡ್ರ್ಸ್ ಹಾಗೂ ಪೋಲಿಸರುಗಳನ್ನು ನೇಮಕ ಮಾಡಬೇಕೆಂದು ಸೂಚನೆ ನೀಡಿದರು. ವರ್ತಕರುಗಳು ತಮ್ಮಕಾರ್ಮಿಕರಿಗೆ ಸ್ಯಾನಿಟೈಸರ್ ಮತ್ತು ಸಾದ್ಯವಾಗುವಷ್ಟು ಬಟ್ಟೆಯಿಂದತಯಾರಿಸಿರುವ ಮಾಸ್ಕ್‍ ಗಳನ್ನು ಒದಗಿಸುವುದರೊಂದಿಗೆ ಅವುಗಳ ಬಳಕೆ ಮಾಡಿಕೊಳ್ಳವಂತೆ ಎಚ್ಚರ ವಹಿಸಬೇಕು, ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸದೇಇದ್ದಲ್ಲಿ ಮುಂದಿನ ದಿನಗಳಲ್ಲಿ ಮೀನುಗಾರಿಕಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗುವುದುಎಂದರು.

ಶಾಸಕ ವೇದವ್ಯಾಸ್‍ ಕಾಮತ್ ಮಾತನಾಡಿ, ಸರ್ಕಾರ ಕೋರೋನಾ ಸೋಂಕು ಹರಡುವುದನ್ನು  ನಿಯಂತ್ರಿಸಲು ಹೊಸ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರುತ್ತಿದೆಇದನ್ನು ಪ್ರತಿಯೊಬ್ಬ ನಾಗರಿಕನು ಚಾಚು ತಪ್ಪದೇಪಾಲನೆ ಮಾಡಬೇಕು.ಯಾರೂ ಕಾನೂನು ವ್ಯವಸ್ಥೆಗಳ ಪಾಲನೆಯನ್ನುಕಟ್ಟುನಿಟ್ಟಾಗಿ ಮಾಡುತ್ತಿಲ್ಲಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಧ್ವನಿವರ್ಧಕಗಳನ್ನು ಬಳಸಿ ಇದರ ಬಗ್ಗೆ ಸಾರ್ವಜನಿಕರಿಗೆ ಹಾಗೂ ಮೀನು ಮಾರಾಟಗಾರರಿಗೆ ಮಾಹಿತಿ ನೀಡಬೇಕುಎಂದರು.

ಸಭೆಯಲ್ಲಿಕರ್ನಾಟಕ ಮೀನುಗಾರಿಕಾಅಭಿವೃದ್ಧಿ ನಿಗಮ ನಿಯಮಿತಅಧ್ಯಕ್ಷ ನಿತಿನ್‍ಕುಮಾರ್,ಮಂಗಳೂರು ಮಹಾನಗರಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ,  ಮಹಾನಗರ ಪಾಲಿಕೆ ಆಯುಕ್ತಅಕ್ಷಯ್ ಶ್ರೀಧರ್, ಅಪರಜಿಲ್ಲಾಧಿಕಾರಿ ದಿನೇಶ್‍ಕುಮಾರ್, ಸಹಾಯಕ ಪೊಲೀಸ್‍ಆಯುಕ್ತ ಪಿ.ಎ ಹೆಗ್ಡೆ, ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!