ಕೋವಿಡ್ ಲಾಕ್ ಡೌನ್ ನಿಯಮ ಉಲ್ಲಂಘಿಸಿ ತೆರೆದಿದ್ದ ಮಾಂಸದಂಗಡಿ ವಿರುದ್ಧ ಪ್ರಕರಣ ದಾಖಲು
ಕೊಲ್ಲೂರು, ಮೇ.3(ಉಡುಪಿ ಟೈಮ್ಸ್ ವರದಿ): ಕೋವಿಡ್ ಲಾಕ್ ಡೌನ್ ಹಿನ್ನೆಲೆ ಅಂಗಡಿಗಳನ್ನು ತೆರೆಯಬಾರದು ಎಂಬ ಮಾರ್ಗಸೂಚಿ ಇದ್ದರೂ ಸರಕಾರದ ನಿಯಮ ಉಲ್ಲಂಘಿಸಿ ತೆರೆದಿದ್ದ ಮಾಂಸದಂಗಡಿ ವಿರುದ್ಧ ಕೊಲ್ಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊಲ್ಲೂರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ನಾಸೀರ್ ಹುಸೈನ್ ಅವರು, ನಿನ್ನೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಕುಂದಾಫುರ ತಾಲೂಕು ಬೆಳ್ಳಾಲ ಗ್ರಾಮದ ಚಪ್ಪರ್ಕ ಎಂಬಲ್ಲಿ ಮಹಾಕಾಳಿ ಕೋಳಿ ಮಾಂಸ ಮಾರಾಟದ ಅಂಗಡಿಯನ್ನು ತೆರದು ಮಾರಾಟ ವ್ಯಾಪಾರ ವಹಿವಾಟು ನಡೆಸುತ್ತಿರುವುದು ಕಂಡು ಬಂದಿದೆ.
ಈ ಹಿನ್ನೆಲೆಯಲ್ಲಿ ನಿರ್ಲಕ್ಷ್ಯತನದಿಂದ ಸರಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿ ನಿಯಮಗಳನ್ನು ಉಲ್ಲಂಘಿಸಿ ಭಾಸ್ಕರ್ ಶೆಟ್ಟಿ ಅವರು ಕೋಳಿ ಅಂಗಡಿಯನ್ನು ತೆರೆದು ಅಪರಾಧ ಎಸಗಿರುವುದಾಗಿ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.