ಚುನಾವಣಾ ತಂತ್ರಜ್ಞ ಹುದ್ದೆ ತ್ಯಜಿಸಲಿರುವ ಪ್ರಶಾಂತ್ ಕಿಶೋರ್
ಕೋಲ್ಕತ್ತಾ: ಚುನಾವನಾ ರಣತಂತ್ರ ಪರಿಣಿತನಾಗಿರುವ ಹಾಗೂ ಎಲ್ಲಾ ವಿರೋಧದ ನಡುವೆ ಮಮತಾ ಬ್ಯಾನರ್ಜಿ ಮೂರನೇ ಬಾರಿಗೆ ಪಶ್ಚಿಮ ಬಂಗಾಳ ಸಿಎಂ ಕುರ್ಚಿಯನ್ನೇರಲು ಸಹಕಾರ ನೀಡಿದ್ದ ಪ್ರಶಾಂತ್ ಕಿಶೋರ್ ತಾವು ಚುನಾವಣಾ ತಂತ್ರಜ್ಞನ ಕೆಲಸ ತ್ಯಜಿಸುವುದಾಗಿ ಪ್ರಕಟಿಸಿದ್ದಾರೆ.
“ನಾನು ಎಂಟು-ಒಂಬತ್ತು ವರ್ಷಗಳಿಂದ ಚುನಾವಣಾ ತಂತ್ರಜ್ಞನ ಕೆಲಸ ಮಾಡುತ್ತಿದ್ದೇನೆ, ನಾನು ಸಾಕಷ್ಟು ನೋಡಿದ್ದೇನೆ, ಇನ್ನೂ ನಾನಿದನ್ನು ಮುಂದುವರಿಸುವ ಅಗತ್ಯವಿಲ್ಲ. ನಾನು ಈ ಜವಾಬ್ದಾರಿಯಿಂದ ದೂರವಾಗುತ್ತೇನೆ. ಇದುವರೆಗೆ ನಾನು ನನ್ನ ಕೆಲಸವನ್ನು ಮಾಡಿದ್ದೇನೆ ಸಧ್ಯ ವಿರಾಮ ಪಡೆದು ಮುಂದೆ ಬೇರೇನಾದರೂ ಮಾಡಲು ಬಯಸುತ್ತೇನೆ” ಎಂದು ಪ್ರಶಾಂತ್ ಕಿಶೋರ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ತಾವೊಬ್ಬ ವಿಫಲ ರಾಜಕಾರಣಿ ಎಂದ ಪ್ರಶಾಂತ್ ಕಿಶೋರ್ ರಾಜಕೀಯಕ್ಕೆ ಸೇರುವುದರ ಬಗ್ಗೆ ಅಥವಾ ರಾಜಕೀಯದಿಂಡ ದೂರ್ ಉಳಿವ ಬಗ್ಗೆ ಏನನ್ನೂ ಮಾತನಾಡಿಲ್ಲ. ತಮ್ಮ ಸಂಸ್ಥೆಯಾದ ಐಪಾಕ್ ಸಮರ್ಥರ ಕೈನಲ್ಲಿದೆ ಎಂದು ಅವರು ಹೇಳಿದ್ದಾರೆ.
ಟಿಎಂಸಿ ಗೆಲುವಿನ ಬಗ್ಗೆ ನನಗೆ ವಿಶ್ವಾಸವಿತ್ತು
“ನಾನು ಎಂದಿನಿಂದಲೂ ಸಾಕಷ್ಟು ವಿಶ್ವಾಸ ಹೊಂದಿದ್ದೇವೆ. ಬಿಜೆಪಿ ಗೆಲ್ಲಲಿದೆ ಎಂದು ಬೃಹತ್ ಪ್ರಚಾರ ನಡೆದಿತ್ತು. ಆದರೆ ನಾವು ತೀವ್ರ ಸ್ಪರ್ಧೆ ನೀಡಿದ್ದೆವು. ಇಂದು ಬಂದಿರುವ ಫಲಿತಾಂಶದ ಸಂಖ್ಯೆಗಳು ಇದು ನಿಕಟ ಸ್ಪರ್ಧೆಯೆಂದು ತೋರಿಸುತ್ತಿಲ್ಲ. ಆದರೆ ಅದೇ ಆಗಿತ್ತು,ಸಂಖ್ಯೆಗಳು ಆಯಾ ಪ್ರದೇಶದಲ್ಲಿನ ನಿಜವಾದ ಹೋರಾಟವನ್ನು ಪ್ರತಿಬಿಂಬಿಸುವುದಿಲ್ಲ. ಬಿಜೆಪಿ ಕಠಿಣ ಹೋರಾಟ ನಡೆಸಿದೆ ಮತ್ತು ನಾನು ಮೊದಲೇ ಹೇಳಿದಂತೆ, ಅವರು ಖಂಡಿತವಾಗಿಯೂ ಬಂಗಾಳದಲ್ಲಿ ಅಸಾಧಾರಣ ಶಕ್ತಿಯಾಗಿದ್ದಾರೆ “ಎಂದು ಕಿಶೋರ್ ಹೇಳಿದರು.