ವೈದ್ಯಕೀಯ ಉಪಕರಣ ಹೆಚ್ಚಿನ ದರಕ್ಕೆ ಮಾರಾಟ ಮಾಡಿದಲ್ಲಿ ನಿರ್ದಾಕ್ಷಿಣ್ಯ ಕ್ರಮ

ಉಡುಪಿ: ವೈದ್ಯಕೀಯ ಉಪಕರಣಗಳಾದ ಆಕ್ಸಿಮೀಟರ್, ಥರ್ಮಮೀಟರ್, ಪಿ.ಪಿ ಕೀಟ್, ವೆಂಟಿಲೇಟರ್, ಸಿ.ಪಿ.ಎ.ಪಿ, ಡಿವೈಸಸ್ ಒಳಗೊಂಡ0ತೆ ಎಲ್ಲಾ ಪೊಟ್ಟಣಗಳ ಮೇಲೆ ಗರಿಷ್ಠ ಮಾರಾಟ ಬೆಲೆ (ಎಲ್ಲಾ ತೆರಿಗೆಗಳು ಸೇರಿ) ಹಾಗೂ ಇತರ ಘೋಷಣೆಗಳನ್ನು ಕಡ್ಡಾಯವಾಗಿ ನಮೂದಿಸಿರಬೇಕು. ನಮೂದಿಸಿದ ಗರಿಷ್ಠ ಮಾರಾಟ ಬೆಲೆ (ಎಲ್ಲಾ ತೆರಿಗೆಗಳು ಸೇರಿ)ಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅಂತಹ ಸಪ್ಲಾಯರ್, ಡಿಸ್ಟ್ರಿಬ್ಯೂಟರ್ ಮತ್ತು ಔಷಧಿ ಅಂಗಡಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು.

ಗ್ರಾಹಕರು ಪೊಟ್ಟಣದ ಮೇಲೆ ನಮೂದಿಸಿದ ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚಿನ ಬೆಲೆಯನ್ನು ಅಂಗಡಿಯವರು ತಮ್ಮಿಂದ ಪಡೆದುಕೊಂಡ ಸಂದರ್ಭದಲ್ಲಿ ತಾವು ಖಾಲಿ ಪೊಟ್ಟಣ ಮತ್ತು ಬಿಲ್ಲನ್ನು ಖಾಯ್ದಿರಿಸಿಕೊಂಡು ಅಂತಹ ಅಂಗಡಿಯವರ ವಿವರವನ್ನು ಸಹಾಯಕ ನಿಯಂತ್ರಕರು ಕಾನೂನು ಮಾಪನಶಾಸ್ತ್ರ ಇಲಾಖೆ ಉಡುಪಿ ಮೊಬೈಲ್ ಸಂಖ್ಯೆ 9845154263 ಅಥವಾ ಈಮೇಲ್ ವಿಳಾಸ www.emapan.karnataka.gov.in ಗೆ ದೂರು ದಾಖಲಿಸುವಂತೆ ಜಿಲ್ಲಾ ಕಾನೂನು ಮಾಪನಶಾಸ್ತ್ರ ಸಹಾಯಕ ನಿಯಂತ್ರಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!