| ಮಂಗಳೂರು, ಮೇ 01(ಉಡುಪಿ ಟೈಮ್ಸ್ ವರದಿ ): ಬಾರ್ ವೊಂದಕ್ಕೆ ದಾಳಿ ನಡೆಸಿದ ಪೊಲೀಸರು ದಾಸ್ತಾನು ಮಾಡಿದ್ದ 1.53 ಲಕ್ಷ ರೂ. ಮೌಲ್ಯದ 52 ಬಾಕ್ಸ್ ಅಕ್ರಮ ಮದ್ಯ ವಶಕ್ಕೆ ಪಡೆದಿರುವ ಘಟನೆ ತಲಪಾಡಿ ಚೆಕ್‌ಪಾಯಿಂಟ್ ಬಳಿ ನಡೆದಿದೆ.
ಪೊಲೀಸರ ದಾಳಿ ವೇಳೆ ಬಾರ್‌ನ ಒಳಗೆ ಇದ್ದ ಕ್ಯಾಷಿಯರ್ ಚರಣ್ (22)ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಆತನನ್ನು ಪ್ರಶ್ನಿಸಿದಾಗ ಆತ ಮದ್ಯವನ್ನು ನಗರದ ಮತ್ತೊಂದು ವೈನ್ ಶಾಪ್‌ನಿಂದ ಖರೀದಿಸಿರುವುದಾಗಿ ತಿಳಿಸಿದ್ದಾನೆ. ಇದೀಗ ಪೊಲೀಸರು ಚರಣ್‌ನನ್ನು ಬಂಧಿಸಿದ್ದು, ಬಾರ್‌ನ ವ್ಯವಸ್ಥಾಪಕರಾದ ದಿವ್ಯಾ ರಾಜ್ ಮತ್ತು ರೋಹಿತ್ ಬಂಧನಕ್ಕೆ ತಂಡವನ್ನು ನಿಯೋಜಿಸಿದ್ದಾರೆ ಎಂದು ತಿಳಿದು ಬಂದಿದೆ.
ದಾಳಿ ವೇಳೆ ಸ್ಥಳದಲ್ಲಿ ಇದ್ದ ಯಾವುದೇ ಮಾನ್ಯ ಬಿಲ್‌ಗಳಿಲ್ಲದ 1.53 ಲಕ್ಷ ರೂ.ಗಳ 52 ಬಾಕ್ಸ್‌ಗಳ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಾರ್ ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿದ್ದು, ನಿಗದಿತ ಸಮಯಕ್ಕಿಂತ ಅಧಿಕ ಕಾಲ ಮದ್ಯ ಮಾರಾಟ ನಡೆಸುತ್ತಿದ್ದವು. ಹಾಗೆಯೇ ಅನುಮತಿಗಿಂತ ಹೆಚ್ಚಿನ ಪ್ರಮಾಣದ ಮದ್ಯವನ್ನು ಸಂಗ್ರಹ ಹೊಂದಿದ್ದವು ಎಂದು ವರದಿಯಾಗಿದೆ.
| |